ಭಾರತ ಹಿಂದೂ ರಾಷ್ಟ್ರ ಎಂದು ಘೋಷಣೆಯಾದರೆ ವರ್ಷದೊಳಗೆ ೧೫ ದೇಶಗಳು ತಮ್ಮನ್ನು ತಾವು ಹಿಂದೂ ರಾಷ್ಟ್ರವೆಂದು ಘೋಷಿಸುತ್ತಾರೆ ! – ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಹೊಸ ದೆಹಲಿ ಮೆ ೭(ವಾರ್ತೆ) – ಭಾರತ ಏನಾದರೂ ತನ್ನನ್ನು ಹಿಂದೂರಾಷ್ಟ್ರ ಘೋಷಿಸಿದರೆ, ವರ್ಷದಲ್ಲಿಯೇ ಇತರ ೧೫ ದೇಶಗಳು ತಮ್ಮನ್ನು ತಾವು ಹಿಂದೂ ರಾಷ್ಟ್ರವೆಂದು ಘೋಷಿಸುವರು ಎಂದು ಪುರಿಯ ಪೂರ್ವಾಮ್ನಾಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಪ್ರತಿಪಾದಿಸಿದರು. ನಾವು ಲಾಟಿ, ಬಂದೂಕಿನ ಗುಂಡು ಮತ್ತು ಬಾಂಬ್ ಇದರ ಆಧಾರದ ಮೇಲೆ ಅಲ್ಲ, ಆದರೆ ಪ್ರೇಮ, ಸಿದ್ಧಾಂತ, ವಸ್ತುಸ್ಥಿತಿ ಮತ್ತು ಇತಿಹಾಸ ಇದರ ಆಧಾರದ ಮೇಲೆ ಸಂಪೂರ್ಣ ಏಷಿಯಾ ಖಂಡಕ್ಕೆ ಹಿಂದೂ ಮಹಾದ್ವೀಪ ಎಂದು ಘೋಷಿಸಲು ಇಚ್ಚಿಸುತ್ತೇವೆ, ಎಂದೂ ಶಂಕರಾಚಾರ್ಯರು ಹೇಳಿದರು. ಇವರು ಸ್ಥಳೀಯ ತಾಲಕಟೋರಾ ಸ್ಟೇಡಿಯಂನಲ್ಲಿ ಆಯೋಜಿಸಲಾದ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಮಾತನಾಡುತ್ತಿದ್ದರು.

ಆ ಸಮಯದಲ್ಲಿ ಕೇಂದ್ರ ಮಂತ್ರಿ ಶ್ರೀ ಅಶ್ವಿನ ಚೌಬೆ, ವಿಶ್ವಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಅಧ್ಯಕ್ಷ ವಕ್ತಾರ ಅಲೋಕ್ ಕುಮಾರ್, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ, ಪಂಜಾಬ ಕೇಸರಿ ನಿಯತಕಾಲಿಕೆಯ ಸಂಚಾಲಕ ಕಿರಣ್ ಶರ್ಮಾ, ಸುದರ್ಶನ ವಾಹಿನಿಯ ಪ್ರಮುಖರಾದ ಶ್ರೀ ಸುರೇಶ ಚವ್ಹಾಣಕೆ, ಗಂಗಾರಾಮ ಆಸ್ಪತ್ರೆಯ ಅಧ್ಯಕ್ಷ ಡಾ. ಡಿ ಎಂ ರಾಣಾ ಮುಂತಾದವರು ಉಪಸ್ಥಿತರಿದ್ದರು.

ಈ ಅಧಿವೇಶನದ ವಿರೋಧದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ಮನವಿ ದಾಖಲಿಸಲಾಗಿತ್ತು. ಈ ಮನವಿಯಲ್ಲಿ ‘ಶಂಕರಾಚಾರ್ಯರು ಈ ಹಿಂದೆ ಪ್ರಚೋದಕ ಹೇಳಿಕೆ ನೀಡಿದ್ದರು, ಮತ್ತು ಅದರಿಂದ ಸಮಾಜದಲ್ಲಿ ಉದ್ವಿಗ್ನತೆ ನಿರ್ಮಾಣವಾಗಿ ಅಲ್ಪಸಂಖ್ಯಾತರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ’ ಎಂದು ಹೇಳಿದ್ದಾರೆ. ಇದರ ಮೇಲೆ ಬರುವ ಮೇ ೯ ರಂದು ವಿಚಾರಣೆ ನಡೆಯುವುದು.

ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿಯವರು ಅಧಿವೇಶನದಲ್ಲಿ ಮಂಡಿಸಿದ ವಿಚಾರಗಳು

ಭಾರತದ ದುರ್ಬಲ ವ್ಯವಹಾರದಿಂದ ನಮಗೆ ಕೀಳರಿಮೆಯ ಅನುಭವ ಬರುತ್ತದೆ! – ವಿದೇಶದಲ್ಲಿರುವ ಹಿಂದೂಗಳು ಕೋರೋನಾ ಸಮಯದಲ್ಲಿ ೭೦ ರಿಂದ ೭೫ ದೇಶಗಳ ಜೊತೆ ನಾವು ಸಂಪರ್ಕದಲ್ಲಿದ್ದೆವು. ವಿಶ್ವದ ೨೦೪ ಪ್ರತಿನಿಧಿಗಳ ವಿಚಾರ ತಿಳಿದುಕೊಳ್ಳಲಾಯಿತು. ಮಾರಿಷಸ್ ಮತ್ತು ಅನ್ಯ ದೇಶಗಳಲ್ಲಿರುವ ಹಿಂದೂಗಳು ‘ಭಾರತದ ದುರ್ಬಲ ವ್ಯವಹಾರದಿಂದ ನಮಗೆ ಕೀಳಿರಿಮೆಯ ಅನುಭವ ಬರುತ್ತದೆ’ ಎಂದು ಅವರ ಅಳಲು ತೋಡಿಕೊಂಡರು.

ಕೇವಲ ೭೨ ವರ್ಷಗಳ ಸಂವಿಧಾನದ ಮೂಲಕ ನಮಗೆ ಭಯ ತೋರಿಸಬಾರದು !

ಎಲ್ಲರ ಪೂರ್ವಜರು ವೈದಿಕ ಸನಾತನ ಆರ್ಯ ಹಿಂದೂಗಳಾಗಿದ್ದರು. ಸಂವಿಧಾನ, ವಕೀಲರು ಮತ್ತು ನ್ಯಾಯಾಧೀಶರು ಇವರಿಗೆ ದಿಶಾ ದರ್ಶನ ಮಾಡುವ ದಾಯಿತ್ವ ಶಂಕರಾಚಾರ್ಯರದ್ದಾಗಿದೆ ಮತ್ತು ಇದು ನಮ್ಮ ಶಾಶ್ವತ ಅಧಿಕಾರವಾಗಿದೆ. ವರ್ತಮಾನದಲ್ಲಿ ದೇಶದಲ್ಲಿ ಜಾರಿಯಾಗಿರುವ ಸಂವಿಧಾನ ೭೨ ವರ್ಷಗಳಿಂದ ಇದೆ. ನಮ್ಮ ಸಂವಿಧಾನ ೧ ಅಬ್ಜ ೯೭ ಕೋಟಿ ೨೯ ಲಕ್ಷ ೪೯ ಸಾವಿರ ೧೨೨ ವರುಷಗಳಷ್ಟು ಹಳೆಯದ್ದಾಗಿದೆ.

೭೨ ವರ್ಷಗಳ ಈ ಸಂವಿಧಾನದ ಆಧಾರ ಪಡೆದು ನಮಗೆ ಭಯ ತೋರಿಸುವ ಪ್ರಯತ್ನ ಯಾರೂ ಮಾಡಬಾರದು.

ಮಂತ್ರಿಮಂಡಲಕ್ಕಾಗಿ ಆವಶ್ಯಕ ವ್ಯಕ್ತಿ.

ಮಂತ್ರಿಮಂಡಲವನ್ನು ಯೋಗ್ಯ ಪದ್ಧತಿಯಲ್ಲಿ ನಡೆಸುವುದಿದ್ದರೆ, ಅದರಲ್ಲಿ ೪ ಬ್ರಾಹ್ಮಣ, ೮ ಕ್ಷತ್ರಿಯ, ೨೧ ವೈಶ್ಯ , ೩ ಶೂದ್ರ ಮತ್ತು ೧ ಸೂತ ಇರುವ ಆವಶ್ಯಕತೆಯಿದೆ. ಭಾರತದಲ್ಲಿ ಹಿಂದೆ ಯಾವ ರಾಜರ ಆಡಳಿತ ಪದ್ಧತಿ ಇತ್ತೋ ಅದೇ ನಿಜವಾದ ಪ್ರಜಾಪ್ರಭುತ್ವವಾಗಿತ್ತು. ವಿಶ್ವದಾದ್ಯಂತ ವಿಕಾಸ ಮತ್ತು ರಾಜಕಾರಣ ಇದರ ವ್ಯಾಖ್ಯೆ ಮಾಡುವ ಆವಶ್ಯಕತೆ ಇದೆ. ರಾಜಕಾರಣಕ್ಕಾಗಿ ರಾಜಧರ್ಮ, ಕ್ಷಾತ್ರಧರ್ಮ, ಅರ್ಥನೀತಿ, ದಂಡನೀತಿ ಈ ಶಬ್ದಗಳ ಪ್ರಯೋಗ ಮಹಾಭಾರತ, ಅರ್ಥಪುರಾಣ ಮತ್ತು ಮನುಸ್ಮೃತಿ ಇವುಗಳಲ್ಲಿ ಮಾಡಲಾಗಿದೆ.

ಏಸುಕ್ರಿಸ್ತ ಭಾರತದಲ್ಲಿ ೧೦ ವರ್ಷ ವಾಸವಾಗಿದ್ದರು.

ಏಸುಕ್ರಿಸ್ತ ಭಾರತದಲ್ಲಿ ೧೦ ವರ್ಷ ವಾಸವಾಗಿದ್ದರೆ, ಅದರಲ್ಲಿ ೩ ವರ್ಷ ಅವನು ಜಗನ್ನಾಥ ಪುರಿಯಲ್ಲಿ ವಾಸವಾಗಿದ್ದು ಅವರು ಆ ಸಮಯದ ಶಂಕರಾಚಾರ್ಯರಿಂದ ಶಿಕ್ಷಣ ಪಡೆದರು. ರೋಮ್ ನಲ್ಲಿ ಅವರ ಯಾವ ಪ್ರತಿಮೆ ಇಡಲಾಗಿದೆ, ಅದಕ್ಕೆ ವೈಷ್ಣವ ಪದ್ಧತಿಯ ಪ್ರಕಾರ ಕುಂಕುಮ ಇಡಲಾಗಿದೆ. ಯೇಸು ಹೇಳಿಕೊಟ್ಟ ಮಾರ್ಗದಲ್ಲಿ ಯಾವ ಕ್ರೈಸ್ತರು ನಡೆಯುತ್ತಿದ್ದಾರೆ? ಯೇಸು ಗೋರಕ್ಷಣೆಯ ಸಮರ್ಥಕರಾಗಿದ್ದರು. ಆದ್ದರಿಂದ ಯೇಸುವನ್ನು ಸರಿಯಾಗಿ ತಿಳಿದುಕೊಂಡು ಅವರ ಮಾರ್ಗದಲ್ಲಿ ನಡೆಯುವ ಪ್ರಯತ್ನ ಮಾಡಬೇಕು.