ಬಿಹಾರದಲ್ಲಿ ರಾಮ ಜಾನಕಿ ಮಂದಿರದ ಅರ್ಚಕರ ಶಿರಚ್ಛೇದ

ರಾಜ್ಯದ ಪಶ್ಚಿಮ ಚಂಪರಣ ಜಿಲ್ಲೆಯ ಗೋಪಾಲಪೂರದಲ್ಲಿ ಬಕುಲಹರ ಮಠದಲ್ಲಿದ್ದ ರಾಮ ಜಾನಕಿ ಮಂದಿರದ ಅರ್ಚಕರ ಶಿರಚ್ಛೇದ ಮಾಡಿರುವ ಆಕ್ರೋಶಕಾರಿ ಘಟನೆ ಬಹಿರಂಗಗೊಂಡಿದೆ. ಆಗಸ್ಟ್ ೧೦ ರ ಬೆಳಿಗ್ಗೆ ರಾಮ ಜಾನಕಿ ಮಂದಿರದಲ್ಲಿ ಅವರ ಶರೀರವು ರಕ್ತದ ಮಡುವಿನಲ್ಲಿ ಕಂಡು ಬಂದಿತು

ಜಯಪುರದ ಶ್ರೀ ಖಾಟೂಶ್ಯಾಮಜಿ ದೇವಸ್ಥಾನದಲ್ಲಿ ನಡೆದಂತಹ ಕಾಲ್ತುಳಿತದಲ್ಲಿ ೩ ಭಾವಿಕರ ಸಾವು

ಹಿಂದೂಗಳ ದೇವಸ್ಥಾನಗಳಲ್ಲಿ ಸುವ್ಯವಸ್ಥಾಪನೆಯನ್ನು ಮಾಡದಿರುವುದರಿಂದ ಯಾತ್ರೆಗಳಲ್ಲಿ ಇಂತಹ ದುರ್ಘಟನೆಗಳು ನಡೆಯುತ್ತವೆ !

ಭೋಪಾಲದ ಶಿವ ಮಂದಿರದ ಶಿವಲಿಂಗ ಧ್ವಂಸ !

ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ಘಟನೆ ಘಟಿಸಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !

ಈಜಿಪ್ಟಿನಲ್ಲಿ ೪ ಸಾವಿರ ಐದು ನೂರು ವರುಷಗಳ ಪುರಾತನ ಸೂರ್ಯ ಮಂದಿರ ಪತ್ತೆ !

ಈಜಿಪ್ತಿನ ಪುರಾತತ್ವ ಇಲಾಖೆ ಇಲ್ಲಿಯ ಅಬುಸಿರ ಭಾಗದಲ್ಲಿ ಒಂದು ಪ್ರಾಚೀನ ಸೂರ್ಯ ಮಂದಿರ ಕಂಡು ಹಿಡಿದಿದೆ. ಈ ಮಂದಿರ ಸುಮಾರು ೪,೫೦೦ ವರ್ಷಗಳ ಹಳೆಯದ್ದಾಗಿದೆ ಎಂದು ಹೇಳಲಾಗುತ್ತಿದೆ.

ದೇವಸ್ಥಾನಗಳ ವಿಶ್ವಸ್ಥರ ಮತ್ತು ಅರ್ಚಕರ ಸಂಘಟನೆ ಮಾಡಿ !

ದೇವಸ್ಥಾನಗಳು ಹಿಂದೂ ಧರ್ಮದ ಮೂಲಾಧಾರವಾಗಿವೆ. ಧರ್ಮದ ರಕ್ಷಣೆಯ ದೃಷ್ಟಿಯಿಂದಲೂ ದೇವಸ್ಥಾನಗಳ ಸ್ಥಾನವು ಮಹತ್ವದ್ದಾಗಿವೆ. ಇದುವರೆಗೆ ‘ಸೆಕ್ಯುಲರ್ (ಜಾತ್ಯತೀತ) ಸರಕಾರಗಳು ಭಕ್ತರು ನೀಡುವ ಅರ್ಪಣೆಯ ಮೇಲೆ ಕಣ್ಣಿಟ್ಟು ನೂರಾರು ದೇವಸ್ಥಾನಗಳನ್ನು ಸ್ವಾಧೀನಪಡಿಸಿ ಕೊಂಡಿವೆ.

ದೇವರ ದರ್ಶನಕ್ಕಾಗಿ ಭಕ್ತರಿಂದ ಹಣ ಪಡೆದು ೧೦ ಲಕ್ಷ ರೂಪಾಯಿ ಗಳಿಸಿದ ತ್ರ್ಯಂಬಕೇಶ್ವರ ದೇವಸ್ಥಾನ

ಹಣ ಪಡೆದು ಭಕ್ತರಿಗೆ ದರ್ಶನ ಪಡೆಯಲು ನೀಡುವ ಪದ್ಧತಿ ಅಶಾಸ್ತ್ರೀಯವಾಗಿದೆ. ದರ್ಶನಕ್ಕಾಗಿ ಶುಲ್ಕ ಪಡೆಯುವ ದೇವಸ್ಥಾನಗಳು ಇವು ಏನು ಮನೋರಂಜನೆಯ ಸ್ಥಳವಲ್ಲ ! ಸರಕಾರೀಕರಣ ಆಗಿರುವ ದೇವಸ್ಥಾನಗಳನ್ನು ಸರಕಾರ ಹಣಗಳಿಸುವ ಮಾಧ್ಯಮಗಳೆಂದು ನೋಡುವುದರಿಂದ ಈ ದುಃಸ್ಥಿತಿ ಬಂದಿದೆ .

ಸೌದಿ ಅರೇಬಿಯಾದಲ್ಲಿ ೮ ಸಾವಿರ ವರ್ಷಗಳ (ಮೊದಲಿನ) ಹಳೆಯ ಪ್ರಾಚೀನ ದೇವಸ್ಥಾನ ಪತ್ತೆ!

ರಿಯಾಧದ ದಕ್ಷಿಣ ಪಶ್ಚಿಮ ಪ್ರದೇಶದ ಅಲ್ಫಾ ನಗರದಲ್ಲಿ ನಡೆಸಲಾದ ಉತ್ಖನನದಲ್ಲಿ ೮ ಸಾವಿರ ವರ್ಷ ಹಳೆಯ ದೇವಸ್ಥಾನ ಪತ್ತೆಯಾಗಿದೆ. ಈ ದೇವಸ್ಥಾನದ ಮೇಲೆ ಅನೇಕ ಪ್ರತೀಕ ಚಿಹ್ನೆಗಳು ಮತ್ತು ಶಿಲಾ ಲೇಖನವೂ ಸಹ ಇವೆ.

೧೯೨೯ರಲ್ಲಿ ತಮಿಳುನಾಡಿನ ದೇವಸ್ಥಾನದಿಂದ ಕಳ್ಳತನವಾಗಿದ್ದ ದೇವಿಯ ಮೂರ್ತಿ ಅಮೇರಿಕಾದಲ್ಲಿ ಪತ್ತೆ !

ತಮಿಳುನಾಡು ರಾಜ್ಯದ ನಾಗಾಪಟ್ಟಿಣಂ ದೇವಸ್ಥಾನದಿಂದ ೧೯೨೯ ರಲ್ಲಿ ರಾಣಿ ಸೆಂಬಿಯನ್ ಮಹಾದೇವಿಯ ಹಿತ್ತಾಳೆಯ ಮೂರ್ತಿ ಕಳ್ಳತನವಾಗಿತ್ತು. ಈ ಮೂರ್ತಿ ಅಮೇರಿಕಾದ ವಾಶಿಂಗಟನ್‌ನ ‘ಫ್ರೀಯರ ಗ್ಯಾಲರಿ ಆಫ್ ಆರ್ಟ್’ ಸಂಗ್ರಹಾಲಯದಲ್ಲಿ ಪತ್ತೆಯಾಗಿದೆ. ಪೊಲಿಸರು ಅದನ್ನು ಮರಳಿ ತರಲು ಪ್ರಯತ್ನ ಪ್ರಾರಂಭಿಸಿದ್ದಾರೆ.

ಬಿಲಿಮೋರಾದ ಸೋಮನಾಥ ಮಹಾದೇವ ದೇವಸ್ಥಾನದ ಯಾತ್ರೆಯಲ್ಲಿ ಅಂಗಡಿಯನ್ನು ನಿರ್ಮಿಸಲು ಮುಸಲ್ಮಾನ ವ್ಯಕ್ತಿಗೆ ಗುತ್ತಿಗೆ

ಇಲ್ಲಿರುವ ಸೋಮನಾಥ ಮಹಾದೇವ ದೇವಸ್ಥಾನ ಯಾತ್ರೆಯಲ್ಲಿ ಮುಂಬಯಿಯ ಅನ್ವರ ಶೇಖ ಎಂಬ ಮುಸಲ್ಮಾನನಿಗೆ ಅಂಗಡಿ ಮತ್ತು ಮಕ್ಕಳಿಗಾಗಿ ಆಟದ ಪ್ರದೇಶವನ್ನು ನಿರ್ಮಿಸಲು ೪೬ ಲಕ್ಷ ರೂಪಾಯಿಗಳ ಗುತ್ತಿಗೆಯನ್ನು ನೀಡಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿಶ್ವ ಹಿಂದೂ ಪರಿಷತ್ ಗುತ್ತಿಗೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದೆ.

ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಹೆಚ್ಚಿನ ಶುಲ್ಕ ನೀಡಿ ದರ್ಶನ ಪಡೆಯುವ ‘ಸುಗಮ ದರ್ಶನ’ ಯೋಜನೆಯನ್ನು ನಿಲ್ಲಿಸಬೇಕು ! – ಹಿಂದೂ ಜನ ಜಾಗೃತಿ ಸಮಿತಿ

ಕಾಶಿ ವಿಶ್ವನಾಥ ದೇವಸ್ಥಾನದ ಸಾಲಿನಲ್ಲಿ ನಿಲ್ಲದೆ ಭಕ್ತರಿಗೆ ದರ್ಶನ ಪಡೆಯುವುದಕ್ಕಾಗಿ ‘ಸುಗಮ ದರ್ಶನ’ ಯೋಜನೆಯಲ್ಲಿ ಪ್ರತಿಯೊಬ್ಬರಿಂದ ೫೦೦ ರೂಪಾಯಿ ಮತ್ತು ಸೋಮವಾರದಂದು ೭೫೦ ರೂಪಾಯಿ ಪಡೆಯುವುದು ಸಂಪೂರ್ಣವಾಗಿ ಅನ್ಯಾಯವಾಗಿದೆ.