ಸೂರತನಲ್ಲಿ ಒಂದು ಬದಿಯ ಪ್ರೇಮದಿಂದ ತರುಣಿಯ ಹತ್ಯೆ ಮಾಡಿದ ವಿದ್ಯಾರ್ಥಿಗೆ ಗಲ್ಲು !

ಶಿಕ್ಷೆಯನ್ನು ವಿಧಿಸುವಾಗ ನ್ಯಾಯಾಲಯದಿಂದ ಮನುಸ್ಮೃತಿಯಲ್ಲಿರುವ ಶ್ಲೋಕದ ಉಲ್ಲೇಖ

ಸೂರತ (ಗುಜರಾತ) – ಒಂದು ಬದಿಯ ಪ್ರೀತಿಯಿಂದಾಗಿ ತರುಣಿಯ ಹತ್ಯೆ ಮಾಡಿದ ಓರ್ವ ವಿದ್ಯಾರ್ಥಿಗೆ ಸತ್ರ ನ್ಯಾಯಾಲಯವು ಗಲ್ಲುಶಿಕ್ಷೆಯನ್ನು ವಿಧಿಸಿದೆ. ಈ ವಿದ್ಯಾರ್ಥಿಯ ಹೆಸರು ಫೆನಿಲ ಗೋಯಾಣಿ ಎಂದು ಇದೆ. ಶಿಕ್ಷೆಯನ್ನು ವಿಧಿಸುವಾಗ ನ್ಯಾಯಾಲಯವು ಮನುಸ್ಮೃತಿಯಲ್ಲಿನ ಶ್ಲೋಕವನ್ನು ಉಲ್ಲೇಖಿಸಿ ಅದರ ಅರ್ಥವನ್ನೂ ಹೇಳಿದೆ.
ಫೆನಿಲನು ಫೆಬ್ರುವರಿ ೧೨, ೨೦೨೨ರಂದು ಒಂದು ಬದಿಯ ಪ್ರೇಮದಿಂದಾಗಿ ಚಾಕೂವಿನಿಂದ ಗ್ರೀಷ್ಮಾ ವೆಕಾರಿಯಾ ಎಂಬ ವಿದ್ಯಾರ್ಥಿನಿಯ ಹತ್ಯೆ ಮಾಡಿದ್ದನು. ಈ ಸಮಯದಲ್ಲಿ ಅವನು ಹುಡುಗಿಯ ಸಹೋದರ ಹಾಗೂ ಚಿಕ್ಕಪ್ಪನ ಮೇಲೆಯೂ ಆಕ್ರಮಣ ಮಾಡಿದ್ದನು. ಅದರಲ್ಲಿ ಅವರು ಗಾಯಗೊಂಡಿದ್ದರು. ಘಟನೆಯ ಸಮಯದಲ್ಲಿಯೇ ಫೆನಿಲನನ್ನು ಬಂಧಿಸಲಾಗಿತ್ತು.

ಪಾಪಿಗಳಿಗೆ ಶಿಕ್ಷೆ ನೀಡುವ ರಾಜ್ಯದಲ್ಲಿ ಪ್ರಜೆಗಳು ಉದ್ವಿಗ್ನರಾಗಿರುವುದಿಲ್ಲ !

ಈ ಸಮಯದಲ್ಲಿ ನ್ಯಾಯಾಲಯವು ಮನುಸ್ಮೃತಿಯ ಶ್ಲೋಕವನ್ನು ನಮೋದಿಸುತ್ತ ಅದರ ಅರ್ಥವನ್ನು ಹೇಳುತ್ತ ‘ಎಲ್ಲಿ ಕಪ್ಪು ಬಣ್ಣದ ಮತ್ತು ಕೆಂಪು ಕಣ್ಣುಗಳ, ಹಾಗೆಯೇ ಪಾಪಿಗಳ ನಾಶ ಮಾಡುವ ‘ದಂಡ’ವು ಕಾರ್ಯನಿರತವಾಗಿರುತ್ತದೆ ಮತ್ತು ಎಲ್ಲಿ ರಾಜರು ಯೋಗ್ಯ ಮತ್ತು ಅಯೋಗ್ಯ ಸಂಗತಿಗಳನ್ನು ತಿಳಿದು ಶಿಕ್ಷೆ ನೀಡುತ್ತಾರೆಯೋ, ಅಲ್ಲಿನ ಪ್ರಜೆಗಳು ಯಾವಾಗಲೂ ಉದ್ವಿಗ್ನ ಹಾಗೂ ವ್ಯಾಕುಲತೆಯಿಂದ ಇರುವುದಿಲ್ಲ’ ಎಂದು ಹೇಳಿದರು.