ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ಗಾಗಿ ಕೆಲಸ ಮಾಡುತ್ತಿದ್ದ ಆರೋಪ!

ಶ್ರೀನಗರ (ಜಮ್ಮು-ಕಾಶ್ಮೀರ) – ಜುಲೈ 3 ರಿಂದ ಅಮರನಾಥ ಯಾತ್ರೆ ಪ್ರಾರಂಭವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ ಪೊಲೀಸರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಕಥುವಾದಿಂದ ಹಾಜಿ ಲತೀಫ್ ಎಂಬ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ. ಹಾಜಿ ಲತೀಫ್ ಕಳೆದ 20 ವರ್ಷಗಳಿಂದ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಗಳಿಗಾಗಿ ಕೆಲಸ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
1. ಈತ ಸುಮಾರು 12 ಕ್ಕೂ ಹೆಚ್ಚು ಪಾಕಿಸ್ತಾನಿ ಉಗ್ರರಿಗೆ ಭಾರತದ ಗಡಿಯೊಳಗೆ ನುಗ್ಗಲು ಸಹಾಯ ಮಾಡಿದ್ದನು.
2. ಈತ ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ‘ಐ.ಎಸ್.ಐ.’ (ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್) ಅಧಿಕಾರಿಗಳೊಂದಿಗೂ ನೇರ ಸಂಪರ್ಕ ಹೊಂದಿದ್ದನು. ಭಾರತದೊಳಗೆ ನುಸುಳುತ್ತಿದ್ದ ಉಗ್ರರಿಗೆ ಅಡಗಿಕೊಳ್ಳಲು ಸ್ಥಳ ಮತ್ತು ವಾಹನಗಳನ್ನು ಒದಗಿಸುತ್ತಿದ್ದನು. ಬಂಧನದ ನಂತರ ಭದ್ರತಾ ಸಂಸ್ಥೆಗಳು ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿವೆ.
3. ಅಮರನಾಥ ಯಾತ್ರೆಯ ಸುರಕ್ಷತೆಗಾಗಿ ಇಡೀ ಜಮ್ಮು-ಕಾಶ್ಮೀರದಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗಿದೆ. ಭಕ್ತರ ಯಾತ್ರೆ ಸುರಕ್ಷಿತವಾಗಿರಲು ಅಲ್ಲಲ್ಲಿ ‘ಮಾಕ್ ಡ್ರಿಲ್’ (ಭಯೋತ್ಪಾದಕ ದಾಳಿಯನ್ನು ಎದುರಿಸಲು ಪೂರ್ವ ಸಿದ್ಧತಾ ತಾಲೀಮು) ನಡೆಸಲಾಗುತ್ತಿದೆ.
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಲ್ಲಿ ಮುಸ್ಲಿಮರು ಇದ್ದಿದ್ದರೆ, ಕಳ್ಳತನದ ಆರೋಪದ ಮೇಲೆ ಅವರ ‘ಎನ್ಕೌಂಟರ್’ ಮಾಡಲಾಗುತ್ತಿತ್ತು!’
ಸೋಲಾಪುರದಲ್ಲಿ ಅನಧಿಕೃತ ಚರ್ಚ್ ಮತ್ತು ಮಹಾನಗರ ಪಾಲಿಕೆ ನೌಕರನ ಅಕ್ರಮಗಳ ತನಿಖೆ!
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!