ಬರೇಲಿ (ಉತ್ತರಪ್ರದೇಶ)ಯಲ್ಲಿ ಕ್ರೈಸ್ತ ಶಾಲೆಯಲ್ಲಿ ಮೆಹಂದಿ ಹಚ್ಚಿಕೊಂಡು ಹೋಗಿದ್ದ ಮೂರೂವರೆ ವರ್ಷದ ಬಾಲಕಿಯನ್ನು ಶಿಕ್ಷಕಿಯಿಂದ ಶಿಕ್ಷೆ !

ಇಲ್ಲಿಯ ಕ್ರೈಸ್ತ ಮಿಶನರಿಯ ‘ಸೇಂಟ ಜ್ಯೂಸ ಸ್ಕೂಲ’ ಶಾಲೆಯಲ್ಲಿ ಮೆಹಂದಿ ಹಚ್ಚಿಕೊಂಡು ಹೋಗಿದ್ದ ಮೂರೂವರೆ ವರ್ಷದ ಬಾಲಕಿಗೆ ಬೆದರಿಸಿ ಶಿಕ್ಷಿಸಿದ್ದರಿಂದ ವಿವಾದ ನಿರ್ಮಾಣವಾಯಿತು. ಈ ಪ್ರಕರಣದಲ್ಲಿ ಬಾಲಕಿಯ ಪೋಷಕರು ಶಾಲೆಗೆ ತೆರಳಿದಾಗ ಶಾಲೆಯ ವ್ಯವಸ್ಥಾಪಕರು ಕ್ಷಮೆಯಾಚಿಸಿದರು.

ಸಂಭಲ (ಉತ್ತರಪ್ರದೇಶ) ಇಲ್ಲಿಯ ಪೊಲೀಸ್ ಪೇದೆ ಸರ್ವಸ್ವವನ್ನು ತ್ಯಾಗ ಮಾಡಿ ಈಶ್ವರ ಭಕ್ತಿ ಮಾಡುವುದನ್ನು ರ್ನಿಧರಿಸಿದ್ದಾರೆ !

ಜಿಲ್ಲೆಯ ಗುನ್ನೌರ ಗ್ರಾಮದಿಂದ ೩ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಪೊಲೀಸ್ ಪೇದೆ ಶಕ್ತಿಸಿಂಹ ಇವರನ್ನು ಪೊಲೀಸರು ಹುಡುಕುತ್ತಿದ್ದರು. ಕೊನೆಗೆ ಅವರು ಹರಿದ್ವಾರದ ಒಂದು ದೇವಸ್ಥಾನದಲ್ಲಿ ಸಾಧನೆ ಮಾಡುತ್ತಿರುವುದು ಪೊಲೀಸರಿಗೆ ತಿಳಿಯಿತು.

ಆಗ್ರಾ (ಉತ್ತರಪ್ರದೇಶ) ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿ ವಾಸವಾಗಿದ್ದ ಯುವತಿಯ ಕೈಕಟ್ಟಿ ನಾಲ್ಕನೆಯ ಮಹಡಿಯಿಂದ ಎಸದಿದ್ದರಿಂದ ಆಕೆಯ ಸಾವು !

ಇಲ್ಲಿ ‘ಲಿವ್ ಇನ್ ರಿಲೇಶನ್ ಶಿಪ್’ ನಲ್ಲಿದ್ದ ಓರ್ವ ಯುವತಿಯ ಕೈಕಟ್ಟಿ ಆಕೆಯನ್ನು ನಾಲ್ಕನೇ ಮಹಡಿಯಿಂದ ಕೆಳಗೆ ಎಸದಿರುವುದರಿಂದ ಆಕೆ ಸಾವನ್ನಪ್ಪಿದ್ದಾಳೆ. ರಿತಿಕಾ ಎಂದು ಯುವತಿಯ ಹೆಸರಾಗಿದೆ. ಆಕೆ ವಿಪುಲ ಅಗ್ರವಾಲ ಎಂಬ ಯುವಕನ ಜೊತೆ ‘ಲಿವ ಇನ್ ರೆಲೇಶನ್ ಶಿಪ್’ನಲ್ಲಿ ಇರುತ್ತಿದ್ದರು.

ಕಾನಪುರ ಹಿಂಸಾಚಾರದ ಹಿಂದೆ ಪಾಕಿಸ್ತಾನದ ಕೈವಾಡವಿರುವ ಸಾಧ್ಯತೆ

ನೂಪುರ ಶರ್ಮಾ ಪ್ರಕರಣದಲ್ಲಿ ಕಾನಪುರನಲ್ಲಿ ಜೂನ್ ೩ ರಂದು ಮತಾಂಧರು ಹಿಂಸಾಚಾರ ನಡೆಸಿದ್ದರು. ಈ ಬಗ್ಗೆ ಪೋಲಿಸರು ವಿಚಾರಣೆ ನಡೆಸುವಾಗ ಹಿಂಸಾಚಾರದ ಸಮಯದಲ್ಲಿ ನಿರಂತರ ಪಾಕಿಸ್ತಾನದ ಜೊತೆ ಸಂಚಾರ ವಾಣಿಯಲ್ಲಿ ಸಂಪರ್ಕಿಸಲಾಗುತ್ತಿತ್ತು, ಎಂಬುದು ಬೆಳಕಿಗೆ ಬಂದಿದೆ.

ಉತ್ತರಪ್ರದೇಶದಲ್ಲಿ ಮತಾಂಧರಿಂದ ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ಅತ್ಯಾಚಾರ

ಉತ್ತರಪ್ರದೇಶದ ಬಾಂದಾ ಎಂಬಲ್ಲಿ ಆನಲೈನ ಗೇಮ ‘ಫ್ರೀ ಫೈರ’ ಆಡುತ್ತಿದ್ದಾಗ ಮತಾಂಧ ಯುವಕನೊಬ್ಬ ಅಪ್ರಾಪ್ತ ಹಿಂದೂ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ. ಯುವಕ ಆ ಅಪ್ರಾಪ್ತ ಹಿಂದೂ ಯುವತಿಯನ್ನು ಆಮಿಶವೊಡ್ಡಿ ಕೋಶಾಂಬಿಗೆ ಕರೆದೊಯ್ದು ಮಾದಕ ಪದಾರ್ಥ ನೀಡಿ ಅತ್ಯಾಚಾರ ಎಸಗಿದ್ದಾನೆ.

ಹಿಂದೂ ಆಗಿರುವುದಾಗಿ ಹೇಳಿ ಮುಸಲ್ಮಾನ ಯುವಕನಿಂದ ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸೆಳೆದು ಆಕೆಯ ಲೈಂಗಿಕ ಶೋಷಣೆ

ಇಲ್ಲಿ ಮುಸಲ್ಮಾನ ತರುಣನಾದ ಸುಹೇಲ ಶಾಹನು ಸೌರಭನೆಂದು ಹಿಂದೂ ಹೆಸರನ್ನು ಹೇಳಿ ಓರ್ವ ಹಿಂದೂ ತರುಣಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದನು. ಆಕೆಯ ಲೈಂಗಿಕ ಶೋಷಣೆ ಮಾಡಿ ಆಕೆಯ ಅಶ್ಲೀಲ ವಿಡಿಯೋ ಮಾಡಿ ಆಕೆಯ ಮೇಲೆ ಮತಾಂತರವಾಗುವಂತೆ ಒತ್ತಡ ಹೇರಿದನು.

ಶ್ರೀಕೃಷ್ಣ ಜನ್ಮಭೂಮಿಗಾಗಿ ಅರ್ಜಿ ಸಲ್ಲಿಸಿದ ವಕೀಲರಿಗೆ ಆಗರಾದ ಜಾಮಾಮಸೀದಿಯ ಅಧ್ಯಕ್ಷರಿಂದ ಕೊಲೆ ಬೆದರಿಕೆ

ಮಥುರಾದ ಶ್ರೀಕೃಷ್ಣ ಜನ್ಮಭೂಮಿಯ ಇದಗಾಹ ಮಸೀದಿ ಪ್ರಕರಣದಲ್ಲಿ ಹಿಂದೂ ಪಕ್ಷದ ಪರವಾಗಿ ಅರ್ಜಿ ಸಲ್ಲಿಸಿರುವ ವಕೀಲ ಮಹೇಂದ್ರ ಪ್ರತಾಪಸಿಂಗವರಿಗೆ ವಿಡಿಯೋ ಮೂಲಕ ಜೀವ ಬೆದರಿಕೆ ಹಾಕಿದ್ದು ಎದುರಿಗೆ ಬಂದಿದೆ.

ಆಗರಾದಲ್ಲಿ ಕ್ಷುಲ್ಲಕ ಕಾರಣದಿಂದಾಗಿ ಹಿಂದೂ- ಮುಸ್ಲಿಮ ಘರ್ಷಣೆ !

ರಾಜ್ಯದ ಕಾನಪುರದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಜೂನ ೫ ರಂದು ಆಗರಾದಲ್ಲಿ ಪರಿಸ್ಥಿತಿಯು ಹದಗೆಟ್ಟಿತು. ಆಗರಾದ ತಾಜಗಂಜಿನ ಬಸೀ ಖುರ್ದನಲ್ಲಿ ದ್ವಿಚಕ್ರ ವಾಹನದ ಸಣ್ಣ ಆಫಘಾತದ ನಂತರ ಹಿಂದೂ ಮತ್ತು ಮುಸ್ಲಿಮರ ನಡುವೆ ಹೊಡೆದಾಟ ಹಾಗೂ ಕಲ್ಲು ತೂರಾಟ ನಡೆಯಿತು.

ಸಂತರ ಎಚ್ಚರಿಕೆಯ ನಂತರ ತಾಜಮಹಲಿನಲ್ಲಿರುವ ಕಲಾಕೊಠಡಿಯಲ್ಲಿನ ಶೌಚಾಲಯದ ಬಳಿ ಹಚ್ಚಲಾಗಿದ್ದ ಶ್ರೀಕೃಷ್ಣನ ಚಿತ್ರವನ್ನು ತೆಗೆಯಲಾಯಿತು !

ಇಲ್ಲಿನ ತಾಜಮಹಲಿನ ‘ರಾಯಲ ಗೇಟ್‌’ನಲ್ಲಿರುವ ಒಂದು ಕಲಾಕೊಠಡಿಯ ಶೌಚಾಲಯದ ಬಳಿ ಹಚ್ಚಲಾದ ಭಗವಾನ ಶ್ರೀಕೃಷ್ಣನ ಚಿತ್ರವನ್ನು ತೆಗೆಸಲಾಗಿದೆ. ಸಂತ ಮತ್ಸೇಂದ್ರ ಗೋಸ್ವಾಮಿಯವರು ಮನವಿ ಮಾಡಿದ ನಂತರ ಈ ಚಿತ್ರವನ್ನು ತೆಗೆಸಲಾಗಿದೆ.

ಉಪವಾಸದಿಂದ ಹದಗೆಟ್ಟಿದ ಅವಿಮುಕ್ತೇಶ್ವರಾನಂದರ ಆರೋಗ್ಯ

ಜೂನ ೪ರಂದು ಜ್ಞಾನವ್ಯಾಪಿಯಲ್ಲಿ ದೊರೆತ ಶಿವಲಿಂಗವನ್ನು ಪೂಜಿಸಲು ಹೊರಟಿದ್ದ ದ್ವಾರಕಾ ಮತ್ತು ಜ್ಯೋತಿಶ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ವಿಶೇಷ ಪ್ರತಿನಿಧಿ ಸ್ವಾಮಿ ಅವಿಮುಕ್ತೆಶ್ವರಾನಂದ ಅವರನ್ನು ಪೊಲೀಸರು ಬಂಧಿಸಿದ್ದಾರೆ.