ಶಾಮಲಿ (ಉತ್ತರಪ್ರದೇಶ) ಇಲ್ಲಿನ ಆಯುಷ ಮಲಿಕನಿಂದ ಇಸ್ಲಾಂ ತೊರೆದು ಪುನಃ ಹಿಂದೂ ಧರ್ಮ ಸ್ವೀಕಾರ ! : Shamili Love Jihad

ವ್ಯಾಯಾಮ ತರಬೇತಿ ನೀಡುವ ಚಾಂದನಿ ಖುರೇಷಿಯು ಮಾಡಿದ ಬ್ರೈನ್ ವಾಶ್ ನಂತರ ಇಸ್ಲಾಂ ಸ್ವೀಕರಿಸಿ ಅವಳೊಂದಿಗೆ ಮದುವೆಯಾಗಿದ್ದನು !

ಆಯುಷ್ ಮಲಿಕ್

ಶಾಮಲಿ (ಉತ್ತರಪ್ರದೇಶ) – ಇಲ್ಲಿನ ಆಯುಷ ಮಲಿಕ ಪುನಃ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾನೆ. ಆಯುಷ ಈ ಹಿಂದೆ ಮುಸ್ಲಿಂ ಯುವತಿ ಚಾಂದನಿ ಖುರೇಷಿ ಇವಳು ಮಾಡಿದ ಬ್ರೈನ್ ವಾಶ್ ನಿಂದಾಗಿ ಅವಳನ್ನು ವಿವಾಹವಾಗಿದ್ದನು ಮತ್ತು ಮತಾಂತರಗೊಂಡಿದ್ದನು. ಅವನು ಪ್ರಸಾರ ಮಾಡಿದ ವಿಡಿಯೊವೊಂದರಲ್ಲಿ ಅವನು ದೇವತೆಗಳ ಪೂಜೆ ಮಾಡುತ್ತಿರುವುದು, ಹಾಗೆಯೇ ತನ್ನ ತಂದೆ ಮತ್ತು ಅಜ್ಜಿಯ ಆಶೀರ್ವಾದವನ್ನು ಪಡೆಯುತ್ತಿರುವುದು ಕಂಡುಬರುತ್ತಿದೆ.

ಈ ವಿಡಿಯೊದಲ್ಲಿ ಅವನು ಈ ಹಿಂದೆ ಇಟ್ಟುಕೊಂಡಿದ್ದ ಉದ್ದನೆಯ ಗಡ್ಡ ಮತ್ತು ಕೂದಲನ್ನು ಕತ್ತರಿಸಿರುವುದು ಕಾಣಿಸುತ್ತಿದೆ. ಅವನು ಇದರಲ್ಲಿ, ‘‘ಅಮ್ಮಾ, ನಾನು ಇಸ್ಲಾಂಗೆ ಹೋಗಿದ್ದೆ. ನಾನು ಧರ್ಮ ಬದಲಾಯಿಸಿದ್ದೆ; ಆದರೆ ಕುಟುಂಬದ ಪರಿಸ್ಥಿತಿಯಿಂದಾಗಿ ಮತ್ತು ಸ್ವಂತ ಇಚ್ಛೆಯಿಂದ ನಾನು ಮತ್ತೆ ನನ್ನ ಕುಟುಂಬದ ಮೂಲ ಹಿಂದೂ ಧರ್ಮಕ್ಕೆ ಮರಳಿದ್ದೇನೆ. ನನ್ನನ್ನು ಕ್ಷಮಿಸು’’ ಎಂದು ಹೇಳುತ್ತಿದ್ದಾನೆ.

ಶಾಮಲಿ ಇಲ್ಲಿನ ಔಷಧ ವ್ಯಾಪಾರಿ ದೇವರಾಜ ಮಲಿಕ ಅವರ ಒಬ್ಬನೇ ಮಗನಾದ ಆಯುಷ ಮಲಿಕ ಅವರ ಈ ಪ್ರಕರಣವು ಕಳೆದ ತಿಂಗಳು ಬೆಳಕಿಗೆ ಬಂದಿತ್ತು. ಆಯುಷ್‌ ನಿಗೆ ವ್ಯಾಯಾಮ ತರಬೇತು ನೀಡುವ ಚಾಂದನಿ ಖುರೇಷಿ ಅವನ ಬ್ರೈನ್ ವಾಶ್ ಮಾಡಿ 4 ವರ್ಷಗಳ ಹಿಂದೆ ಮೋಸದಿಂದ ವಿವಾಹವಾಗಿದ್ದಳು. ಈ ಪ್ರಕರಣವು ಬಹಿರಂಗಗೊಂಡ ನಂತರ ಚಾಂದನಿ ಖುರೇಷಿ ಮತ್ತು ಅವಳ ತಂದೆಯನ್ನು ಬಂಧಿಸಲಾಯಿತು. ಅವರು ಸದ್ಯ ಕಾರಾಗೃಹದಲ್ಲಿದ್ದಾರೆ.