ಸೋಲಾಪುರದಲ್ಲಿ ಅನಧಿಕೃತ ಚರ್ಚ್ ಮತ್ತು ಮಹಾನಗರ ಪಾಲಿಕೆ ನೌಕರನ ಅಕ್ರಮಗಳ ತನಿಖೆ!

  • ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂ ರಾಷ್ಟ್ರ ಸೇನೆಯ ಪ್ರಯತ್ನಕ್ಕೆ ಯಶಸ್ಸು

  • ಸೋಲಾಪುರ ಮಹಾನಗರ ಪಾಲಿಕೆ ಆಯುಕ್ತರ ನಂತರ ರಾಜ್ಯ ಸರಕಾರವೂ ಕ್ರಮ ಕೈಗೊಳ್ಳಲು ಸಜ್ಜು

ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವರಾದ ಆಶಿಶ್ ಜೈಸ್ವಾಲ್ ಅವರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪದಾಧಿಕಾರಿಗಳು

ಸೋಲಾಪುರ, ೩೦ ಜೂನ್ (ವಾರ್ತೆ) – ನಗರದ ಬಾಪೂಜಿನಗರದಲ್ಲಿರುವ ಸರಕಾರಿ ಸಮಾಜ ಮಂದಿರವನ್ನು ಅಕ್ರಮವಾಗಿ ‘ಚರ್ಚ್’ ಆಗಿ ಬಳಸುವುದು, ಆವರಣದಲ್ಲಿ ಧಾರ್ಮಿಕ ಅಶಾಂತಿ ಉಂಟುಮಾಡುವುದು ಮತ್ತು ಹಿಂದೂ ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡು ಸರಕಾರಿ ನೌಕರಿ ಗಿಟ್ಟಿಸಿಕೊಂಡ ಸೋಲಾಪುರ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ಗುಮಾಸ್ತ ದತ್ತಾತ್ರೇಯ ಕಾನೆಪಾಗೂಲ್ ಅಲಿಯಾಸ್ ಯೆಹಾನ್ ಮಾರ್ಕ್ ಕಾನೆಪಾಗೂಲ್‌ನ ಅಕ್ರಮಗಳ ಸಮಗ್ರ ತನಿಖೆ ನಡೆಸಲು ಸೋಲಾಪುರ ಮಹಾನಗರ ಪಾಲಿಕೆ ಆಯುಕ್ತ ಡಾ. ಸಚಿನ್ ಓಂಬಾಸೆ ಅವರು ಆದೇಶಿಸಿದ್ದಾರೆ. ಈ ಸಂಬಂಧ ಆಯುಕ್ತರು ಸಾಮಾನ್ಯ ಆಡಳಿತ ವಿಭಾಗದ ಉಪ ಆಯುಕ್ತರಾದ ಶ್ರೀಮತಿ ಸೋನಾಲಿ ಯಾದವ್ ಅವರಿಗೆ ತಕ್ಷಣವೇ ವರದಿ ಸಲ್ಲಿಸುವಂತೆ ಲಿಖಿತ ಆದೇಶ ನೀಡಿದ್ದಾರೆ.

ಈ ವಿಷಯದ ಬಗ್ಗೆ ಹಿಂದೂ ರಾಷ್ಟ್ರ ಸೇನೆ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಬೆಂಬೆತ್ತುವಿಕೆ ಮಾಡುತ್ತಿದ್ದವು. ಈ ವಿಷಯದ ಗಂಭೀರತೆಯನ್ನು ಗಮನಿಸಿ ಸೋಲಾಪುರದ ಮಾಜಿ ಸಚಿವ ಮತ್ತು ಭಾಜಪ ಶಾಸಕ ಸುಭಾಷ್ ದೇಶಮುಖ ಅವರು ಸೋಲಾಪುರ ಮಹಾನಗರ ಪಾಲಿಕೆ ಆಯುಕ್ತರಲ್ಲಿ ಈ ಪ್ರಕರಣದ ತುರ್ತು ತನಿಖೆಗೆ ಒತ್ತಾಯಿಸಿದ್ದರು. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ.