ಮೂರು ಐ.ಎ.ಎಸ್. ಅಧಿಕಾರಿಗಳಿಗೆ ೧ ತಿಂಗಳ ಜೈಲು ಶಿಕ್ಷೆ !

ಆಂಧ್ರಪ್ರದೇಶ ಉಚ್ಚ ನ್ಯಾಯಾಲಯದ ಆದೇಶ ಪಾಲಿಸದ ಪರಿಣಾಮ !

ಅಮರಾವತಿ (ಆಂಧ್ರಪ್ರದೇಶ) – ನ್ಯಾಯಾಂಗ ನಿಂದನೆ ಮತ್ತು ನಿಗದಿತ ಅವಧಿಯೊಳಗೆ ಆದೇಶವನ್ನು ಪಾಲಿಸದ ಆರೋಪದಲ್ಲಿ ಮೂವರು ಐಎಎಸ್ ಅಧಿಕಾರಿಗಳಿಗೆ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ ಒಂದು ತಿಂಗಳ ಜೈಲು ಶಿಕ್ಷೆ ಮತ್ತು ೨,೦೦೦ ರೂಪಾಯಿ ದಂಡ ವಿಧಿಸಿದೆ. ರಾಜ್ಯದ ವಿಶೇಷ ಮುಖ್ಯ ಕಾರ್ಯದರ್ಶಿ (ಕೃಷಿ) ಪೂನಂ ಮಾಲಕೊಂಡಯ್ಯ, ಮಾಜಿ ವಿಶೇಷ ಕೃಷಿ ಆಯುಕ್ತ ಎಚ್. ಅರುಣ್ ಕುಮಾರ್ ಹಾಗೂ ಕರ್ನೂಲ್‌ನ ಮಾಜಿ ಜಿಲ್ಲಾಧಿಕಾರಿ ಜಿ. ವೀರಪಾಂಡಿನವರು ಸೇರಿದ್ದಾರೆ. ಅಕ್ಟೋಬರ್ ೨೦೧೯ ರಲ್ಲಿ ಗ್ರಾಮೀಣ ಕೃಷಿ ಸಹಾಯಕ ಹುದ್ದೆಗೆ ಅಭ್ಯರ್ಥಿಯನ್ನು ನೇಮಿಸಲು ಮತ್ತು ಎರಡು ವಾರಗಳಲ್ಲಿ ಅದನ್ನು ಅನುಸರಿಸಲು ನ್ಯಾಯಾಲಯವು ಸರಕಾರಕ್ಕೆ ಆದೇಶಿಸಿತ್ತು; ಆದರೆ ನ್ಯಾಯಾಲಯದ ಈ ಆದೇಶ ಪಾಲನೆಯಾಗಿಲ್ಲ.

ಸಂಪಾದಕೀಯ ನಿಲುವು

ಇಂತಹ ತಪ್ಪು ಮಾಡುವ ಪ್ರತಿಯೊಬ್ಬ ಅಧಿಕಾರಿಗೂ ಶಿಕ್ಷೆಯಾಗಬೇಕು !