ಹಿಂದೂ ವಿರೋಧಿ ಪ್ರಸಿದ್ಧಿ ಮಾಧ್ಯಮಗಳ ಪಿತೂರಿಯ ವಿರುದ್ಧ ಧರ್ಮಾಭಿಮಾನಿಗಳಿಂದ #Hinduphobic_Media ಟ್ವಿಟರ್ ಟ್ರೆಂಡ್ !

ಪ್ರಸಿದ್ಧಿ ಮಾಧ್ಯಮಗಳು ಮತ್ತು ಫೇಸ್‍ಬುಕ್ ಇವೆರಡೂ ಜಂಟಿಯಾಗಿ ಒಂದು ಪಿತೂರಿಯ ಮೂಲಕ ಹಿಂದೂಗಳನ್ನು ಮಟ್ಟಹಾಕಿ ಅವರ ಧ್ವನಿಯನ್ನು ಅದಮಲು ಪ್ರಯತ್ನಿಸುತ್ತಿವೆ. ಈ ಪಿತೂರಿಯ ವಿರುದ್ಧ ಹಿಂದೂ ಧರ್ಮಾಭಿಮಾನಿಗಳಿಂದ ಜೂನ್ ೨೭ ರಂದು #Hinduphobic_Media ಈ ಹೆಸರಿನ ಹ್ಯಾಷ್‍ಟ್ಯಾಗ್ ಟ್ರೆಂಡ್ ಮಾಡಲಾಗಿತ್ತು. ಅದು ರಾಷ್ಟ್ರೀಯ ಟ್ರೆಂಡ್‍ನಲ್ಲಿ ೫ ನೇ ಸ್ಥಾನದಲ್ಲಿತ್ತು. ಇದರಲ್ಲಿ ೩೬ ಸಾವಿರಕ್ಕಿಂತಲೂ ಹೆಚ್ಚು ಟ್ವೀಟ್ಸ್‍ಗಳನ್ನು ಮಾಡಲಾಯಿತು.

ಪುಡುಕೊಟ್ಟೈ(ತಮಿಳುನಾಡು) ಇಲ್ಲಿ ಅಪರಿಚಿತರಿಂದ ಪ್ರಾಚೀನ ಶಿವಲಿಂಗ ಮತ್ತು ಭಗವಾನ್ ಶಿವನ ಮೂರ್ತಿ ಧ್ವಂಸ

ಕಿಝನಾಂಚೂರ ಗ್ರಾಮದಲ್ಲಿ ಪ್ರಾಚೀನ ಕೈಲಾಸನಾಥ ದೇವಸ್ಥಾನದಲ್ಲಿನ ಶಿವಲಿಂಗ ಮತ್ತು ಭಗವಾನ ಶಿವನ ಮೂರ್ತಿಯನ್ನು ಅಪರಿಚಿತ ವ್ಯಕ್ತಿಗಳು ಧ್ವಂಸ ಮಾಡಿದ್ದಾರೆ. ಶಿವಲಿಂಗವನ್ನು ಎರಡು ತುಂಡುಗಳನ್ನಾಗಿ ಮಾಡಿ ಶಿವನ ವಿಗ್ರಹದ ತಲೆಯನ್ನು ಮುರಿಯಲಾಗಿದೆ. ಈ ದೇವಸ್ಥಾನವನ್ನು ಚೋಳ ರಾಜ್ಯದ ಕಾಲದಲ್ಲಿ ನಿರ್ಮಿಸಲಾಗಿತ್ತು.

ಫೇಸಬುಕ್‌ನ ವೈಚಾರಿಕ ಭಯೋತ್ಪಾದನೆ !

ಫೇಸಬುಕ್‌ನ ಸಂಸ್ಥಾಪಕ ಮಾರ್ಕ ಝುಕೆರಬರ್ಗ ಸ್ವತಃ ಜ್ಯೂ ಧರ್ಮದವರಾಗಿದ್ದಾರೆ. ಜ್ಯೂ ಧರ್ಮದವರು ತಮ್ಮ ಅಸ್ತಿತ್ವಕ್ಕಾಗಿ ಬಹಳ ಸಂಘರ್ಷ ಮಾಡಿದ್ದಾರೆ. ಜಗತ್ತಿನಲ್ಲಿ ಹಿಂದೂ ಧರ್ಮದ ಬಳಿಕ ಅತ್ಯಧಿಕ ನರಮೇಧಕ್ಕೊಳಗಾದವರೆಂದರೆ ಜ್ಯೂ ವಂಶದವರಾಗಿದ್ದಾರೆ. ಈಗಲೂ ಜ್ಯೂಗಳ ದೇಶವಾಗಿರುವ ಇಸ್ರೈಲ್ ತನ್ನ ಅಸ್ತಿತ್ವಕ್ಕಾಗಿ ಅಕ್ಕಪಕ್ಕದ ದೊಡ್ಡ ದೊಡ್ಡ ಅರಬ-ಮುಸ್ಲಿಂ ದೇಶಗಳೊಂದಿಗೆ ಹೋರಾಡುತ್ತಿದೆ.

ನಿರ್ಲಕ್ಷಿತ‘ದ್ವೀಪ’ !

ಅರಬೀ ಸಮುದ್ರದಲ್ಲಿ ಕೇರಳದ ಬಳಿಯ ಕೇಂದ್ರಾಡಳಿತ ಪ್ರದೇಶವಾದ ‘ಲಕ್ಷದ್ವೀಪ’ವು ಸದ್ಯ ಚರ್ಚೆಯ ವಿಷಯವಾಗಿದೆ. ಇಲ್ಲಿನ ಹೊಸ ಆಡಳಿತಗಾರರಾದ ಪ್ರಫುಲ್ಲ ಪಟೇಲ ಇವರು ೪ ಅಧಿನಿಯಮಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಅನುಮೋದನೆಗಾಗಿ ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ. ಶೇ. ೯೮ ರಷ್ಟು ಮುಸಲ್ಮಾನರ ಜನಸಂಖ್ಯೆ ಇರುವ ಈ ಪ್ರದೇಶದಲ್ಲಿ ಜಾರಿಗೆ ತರಲಾದ ಈ ಕಾನೂನುಗಳಿಗೆ ರಾಜಕೀಯ ಸ್ತರದಲ್ಲಿ ವಿರೋಧವಾಗತೊಡಗಿದೆ.

ಫೇಸ್‌ಬುಕ್‌ನ ಹಿಂದೂದ್ವೇಷದ ಹಿಂದೆ ಅಮೇರಿಕಾದ ‘ಟೈಮ್’ ನಿಯತಕಾಲಿಕೆಯ ಕೈವಾಡ !

ಫೇಸ್‌ಬುಕ್ ಹಿಂದೂ ಜನಜಾಗೃತಿ ಸಮಿತಿ, ಸನಾತನ ಪ್ರಭಾತ ನಿಯತಕಾಲಿಕೆ ಮತ್ತು ಸನಾತನ ಶಾಪ್‌ಗಳ ಫೇಸ್‌ಬುಕ್ ಪುಟಗಳಲ್ಲಿನ ವಿಷಯವನ್ನು ವಸ್ತುನಿಷ್ಠವಾಗಿ ಪರಿಶೀಲಿಸದೆ ಅನ್ಯಾಯವಾಗಿ ಕ್ರಮವನ್ನು ತೆಗೆದುಕೊಂಡಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಫೇಸ್‌ಬುಕ್‌ನ ಅನ್ಯಾಯದ ವರ್ತನೆಯ ಕುರಿತು ಹಿಂದೂ ಬಾಂಧವರಿಂದ ದೇಶದಾದ್ಯಂತ ಆಂದೋಲನದ ಮೂಲಕ ತೀವ್ರ ಖಂಡನೆ !

ಕಳೆದ ಕೆಲವು ಕಾಲದಲ್ಲಿ ಫೇಸ್‌ಬುಕ್ ದೇಶದಾದ್ಯಂತದ ಹಿಂದುತ್ವನಿಷ್ಠ ಗಣ್ಯರ ಮತ್ತು ಸಂಘಟನೆಗಳ ಪುಟಗಳನ್ನು ಯಾವುದೇ ಕಾರಣವನ್ನು ನೀಡದೇ ನಿಲ್ಲಿಸಿದೆ. ಈ ಸ್ವೇಚ್ಛಾವರ್ತನೆ ಕಾರ್ಯಾಚರಣೆಯು ಆತಂಕಕಾರಿಯಾಗಿದ್ದು ಹಿಂದೂ ಬಾಂಧವರಲ್ಲಿ ಜನಾಕ್ರೋಶ ಉದ್ಭವಿಸಿದೆ. ಶನಿವಾರದಂದು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಆಕ್ರೋಶ ಕಂಡುಬಂದಿತು.

ವಿದೇಶಿ ‘ವೆಗನ್’ ಹಾಲನ್ನು ಭಾರತದಲ್ಲಿ ನೆಲೆಯೂರಿಸಲು ‘ಅಮೂಲ’ ಹಾಲನ್ನು ವಿರೋಧಿಸುವ ‘ಪೆಟಾ’ದ ಷಡ್ಯಂತ್ರ !

ಇಂದು ಸೈನ್ಯಬಲವಿಲ್ಲದೇ ಯಾವುದೇ ದೇಶದ ಮೇಲೆ ನಿಯಂತ್ರಣ ಸಾಧಿಸುವುದು ಅಸಾಧ್ಯವಾಗಿದೆ. ನಮ್ಮ ಉತ್ಪನ್ನಗಳನ್ನು ಖರೀದಿಸಲು ಬಾಧ್ಯ ಮಾಡಿದರೆ ಆ ದೇಶದ ಮೇಲೆ ಸಹಜವಾಗಿ ನಿಯಂತ್ರಣವನ್ನು ಸಾಧಿಸಲು ಬರುತ್ತದೆ. ಅದರ ಒಂದು ವಿಧವೆಂದರೆ ‘ಪೆಟಾ’ವು ಭಾರತದಲ್ಲಿ ಆರಂಭಿಸಿದ ‘ವೆಗನ್ ಮಿಲ್ಕ್’ನ (ಶಾಕಾಹಾರಿ ಹಾಲು) ಚರ್ಚೆ !