ಚಿನ್ಮಯ ಪ್ರಭು ಅವರ ಬಂಧನಕ್ಕೆ ಸಂಬಂಧಿಸಿದಂತೆ ಭಾರತದ ಹೇಳಿಕೆಗೆ ಬಾಂಗ್ಲಾದೇಶದಿಂದ ಆಕ್ಷೇಪ
ಢಾಕಾ (ಬಾಂಗ್ಲಾದೇಶ) – ಚಿನ್ಮಯ ಕೃಷ್ಣ ದಾಸ ಪ್ರಭು ಅವರ ಬಂಧನದ ಬಗ್ಗೆ ಕೆಲವರಿಂದ ತಪ್ಪು ಮಾಹಿತಿ ನೀಡಲಾಗಿದೆ, ಇದು ತುಂಬಾ ದುಃಖಕರವಾಗಿದೆ. ಈ ವಿಷಯದ ಬಗ್ಗೆ ಭಾರತ ಸರಕಾರದ ಹೇಳಿಕೆಗಳು ವಾಸ್ತವವನ್ನು ತಪ್ಪಾಗಿ ಪ್ರತಿನಿಧಿಸುವುದಲ್ಲದೆ, ಎರಡು ನೆರೆಯ ದೇಶಗಳ ನಡುವಿನ ಸ್ನೇಹ ಮತ್ತು ಪರಸ್ಪರ ತಿಳುವಳಿಕೆಯ ಮನೋಭಾವಕ್ಕೆ ವಿರುದ್ಧವಾಗಿವೆ ಎಂದು ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯದಿಂದ ಚಿನ್ಮಯ ಪ್ರಭು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಹೇಳಿಕೆಗೆ ಪ್ರತಿಕ್ರಿಯಿಸಿದೆ.
ಬಾಂಗ್ಲಾದೇಶವು, ಬಾಂಗ್ಲಾದೇಶ ಸರಕಾರವು, ದೇಶದ ನ್ಯಾಯಾಂಗವು ಸಂಪೂರ್ಣವಾಗಿ ಸ್ವತಂತ್ರವಾಗಿದೆ ಮತ್ತು ಸರಕಾರವು ಅದರ ಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಬಾಂಗ್ಲಾದೇಶ ಸರಕಾರವು ದೇಶದಲ್ಲಿ ಧಾರ್ಮಿಕ ಸಾಮರಸ್ಯವನ್ನು ಕಾಪಾಡಲು ಬದ್ಧವಾಗಿದೆ. ಚಿತ್ತಗಾಂವ್ ನಲ್ಲಿ ನ್ಯಾಯವಾದಿ ಸೈಫುಲ್ ಇಸ್ಲಾಂ ಅವರ ಬರ್ಬರ ಹತ್ಯೆಯ ಬಗ್ಗೆ ಕಳವಳವಿದೆ. ಯಾವುದೇ ಸಂದರ್ಭದಲ್ಲೂ ಧಾರ್ಮಿಕ ಸಹಿಷ್ಣುತೆಯನ್ನು ಕಾಪಾಡಲು ಆಡಳಿತವು ಭದ್ರತೆಯನ್ನು ಹೆಚ್ಚಿಸಿದೆ ಎಂದು ಹೇಳಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಚಿನ್ಮಯ ಕೃಷ್ಣ ದಾಸ ಅವರ ಬಂಧನದಿಂದ ನಾವು ಆತಂಕ ಗೊಂಡಿದ್ದೇವೆ. ಅಪರಾಧಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಇದು ದುರ್ದೈವವಾಗಿರುವಾಗ ಶಾಂತಿಯುತ ಸಭೆಗಳ ಮೂಲಕ ನ್ಯಾಯಸಮ್ಮತವಾದ ಬೇಡಿಕೆಗಳನ್ನು ಮಂಡಿಸುವ ಧಾರ್ಮಿಕ ಮುಖಂಡರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದೆ.