ಅರ್ಜಿದಾರರಿಗೆ ಸರಕಾರದ ಬಳಿಗೆ ಹೋಗುವಂತೆ ಸಲಹೆ !
ನವ ದೆಹಲಿ – ‘ಸನಾತನ ಧರ್ಮ ಸಂರಕ್ಷಣಾ ಮಂಡಳಿ’ ಸ್ಥಾಪಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ಮನಮೋಹನ ಸಿಂಗ್ ನೇತೃತ್ವದ ಖಂಡಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ನ್ಯಾಯಾಲಯವು, ಇಂತಹ ಮಂಡಳಿಯನ್ನು ಸ್ಥಾಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಅಂಶವು ನೀತಿಯ ಕಾರ್ಯಕ್ಷೇತ್ರದ ವ್ಯಾಪ್ತಿಯಡಿಯಲ್ಲಿ ಬರುವುದರಿಂದ, ನ್ಯಾಯಾಲಯಗಳ ಬದಲಿಗೆ ಸರಕಾರವನ್ನು ಸಂಪರ್ಕಿಸಬೇಕು ಎಂದು ಹೇಳಿದೆ. ಸಂಸದರು ಈ ಸೂತ್ರವನ್ನು ಸಂಸತ್ತಿನಲ್ಲಿ ಮಂಡಿಸಬಹುದು. ಈ ಬೇಡಿಕೆಯ ಬಗ್ಗೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ನಾವು ‘ಟ್ರಸ್ಟ್ ರಚಿಸಿರಿ’ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದೆ.
ಕೇಂದ್ರ ಸರಕಾರದಿಂದ ಪ್ರತಿಕ್ರಿಯೆ ಇಲ್ಲ ! – ಸನಾತನ ಹಿಂದೂ ಸೇವಾ ಸಂಘ ಟ್ರಸ್ಟ್
ಅರ್ಜಿದಾರರಾದ ‘ಸನಾತನ ಹಿಂದೂ ಸೇವಾ ಸಂಘ ಟ್ರಸ್ಟ್’ ಪರ ವಕೀಲರು ಸನಾತನ ಧರ್ಮವನ್ನು ಸಂರಕ್ಷಿಸಲು ಮಂಡಳಿ ಅಗತ್ಯ ಎಂದು ವಾದಿಸಿದರು. ಇತರ ಧರ್ಮಗಳಿಗೂ ಇದೇ ರೀತಿಯ ಮಂಡಳಿಗಳಿವೆ; ಆದರೆ ನಮ್ಮ ಬೇಡಿಕೆಗೆ ಕೇಂದ್ರದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.