ಹಿಂದೂ ಸಂಘಟನೆಗಳ ವಿರೋಧದ ನಂತರ ಹಿಂದೂದ್ವೇಷಿ ಹಾಸ್ಯ ಕಲಾವಿದ ಮುನಾವರ ಫಾರೂಕಿಯವರ ಬೆಂಗಳೂರಿನ ಕಾರ್ಯಕ್ರಮ ರದ್ದು !

* ಹಿಂದೂಗಳು ಸಂಘಟಿತರಾದಾಗ ಹಿಂದೂದ್ವೇಷಿಗಳು ಹಿಂದೆ ಸರಿಯಬೇಕಾಗುತ್ತದೆ ಎಂಬುದನ್ನು ನೋಡಿ ಈಗ ಹಿಂದೂಗಳು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ತಕ್ಷಣ ಸಂಘಟಿತರಾಗಬೇಕು !- ಸಂಪಾದಕರು 

* ಒಬ್ಬರ ಹಿಂದೆ ಒಬ್ಬರಂತೆ ಯಾವುದೇ ಕಲಾವಿದರು ಬಂದು ಹಿಂದೂ ಧರ್ಮದ ಮೇಲೆ ಕೆಸರೆರಚುತ್ತಾರೆ. ಆದುದರಿಂದ ದೇಶದಾದ್ಯಂತ ಇರುವ ಹಿಂದೂಗಳು ಇಂತಹವರು ಹಿಂದೂ ಧರ್ಮದ ಅಪಮಾನ ಮಾಡುವ ಧೈರ್ಯವನ್ನೂ ಮಾಡದಂತಹ ವರ್ಚಸ್ಸನ್ನು ನಿರ್ಮಿಸಬೇಕಿದೆ !- ಸಂಪಾದಕರು 

ಹಿಂದೂದ್ವೇಷಿ ಹಾಸ್ಯ ಕಲಾವಿದ ಮುನಾವರ ಫಾರೂಕಿಯ

ಬೆಂಗಳೂರು – ಇಲ್ಲಿನ `ಗುಡ್ ಶೆಫರ್ಡ್’ ಸಭಾಗೃಹದಲ್ಲಿ ಆಯೋಜಿಸಲಾದ ಹಿಂದೂದ್ವೇಷಿ ಹಾಸ್ಯ ಕಲಾವಿದ ಮುನಾವರ ಫಾರೂಕಿಯ ನಿಯೋಜಿತ ಕಾರ್ಯಕ್ರಮವನ್ನು ರದ್ದುಗೊಳಿಸಿರುವ ಮಾಹಿತಿಯನ್ನು ಸಭಾಗೃಹದ ಆಡಳಿತವು ನೀಡಿದೆ. ಮುನಾವರ ಫಾರೂಕಿಯು ಏಕಪಾತ್ರದ ಕಾರ್ಯಕ್ರಮವನ್ನು ಮಾಡುತ್ತಾನೆ. ಅಶೋಕನಗರ ಪೊಲೀಸ್ ಠಾಣೆಯು ಕಾರ್ಯಕ್ರಮದ ಆಯೋಜಕರಿಗೆ ನೀಡಿರುವ ಪತ್ರಕ್ಕನುಸಾರ, ಈ ಕಾರ್ಯಕ್ರಮದಿಂದಾಗಿ ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆ ನಿರ್ಮಾಣವಾಗುವುದು, ಮುನಾವರ ಫಾರೂಕಿಯು ಹಿಂದೂಗಳ ಭಾವನೆಯನ್ನು ನೋಯಿಸಿರುವ ಇತಿಹಾಸವಿದೆ. ಮಧ್ಯಪ್ರದೇಶದಲ್ಲಿ ಆತನ ಮೇಲೆ ಅಪರಾಧ ನೋಂದಾಯಿಸಲಾಗಿದೆ. ಸದ್ಯ ಅವನು ಜಾಮೀನಿನ ಮೇಲಿದ್ದಾನೆ. ಈ ಹಿಂದೆ ಜನರ ಭಾವನೆಯಿಂದಾಗಿ ಗುಜರಾತ ಮತ್ತು ಮುಂಬೈಯಲ್ಲಿನ ಆತನ ಕಾರ್ಯಕ್ರಮದ ಅನುಮತಿಯನ್ನು ಅಧಿಕಾರಿಗಳು ಹಿಂದೆ ಪಡೆದಿದ್ದರು.

ಮುನಾವರ ಫಾರೂಕಿಯ `ಡೊಂಗರಿ ಟು ನೋವೆರ್’ ಎಂಬ ಕಾರ್ಯಕ್ರಮವನ್ನು 28 ನವೆಂಬರ್ 2021 ರಂದು ಗುಡ್ ಶೆಪರ್ಡ್ ಸಭಾಗೃಹದಲ್ಲಿ ಆಯೋಜಿಸಲಾಗಿತ್ತು. ಸತತವಾಗಿ ಹಿಂದೂ ದೇವತೆಗಳ ಅಪಮಾನ ಮಾಡುವ ಮುನಾವರ ಫಾರೂಕಿಯ ಹಿನ್ನೆಲೆಯನ್ನು ಗಮನದಲ್ಲಿಟ್ಟು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡರವರ ನೇತೃತ್ವದಲ್ಲಿನ ಗುಂಪು ನವೆಂಬರ 28 ರಂದು ಬೆಂಗಳೂರಿನ ಪೊಲೀಸ್ ಆಯುಕ್ತರಿಗೆ ಮನವಿಯನ್ನು ನೀಡಿ ಈ ಕಾರ್ಯಕ್ರಮದ ವಿರುದ್ಧ ನಿಷೇಧವನ್ನು ನೋಂದಾಯಿಸಿತು. ಕಾರ್ಯಕ್ರಮಕ್ಕಾಗಿ ಅನುಮತಿ ನೀಡಿದರೆ ರಸ್ತೆಗಿಳಿದು ಆಂದೋಲನ ಮಾಡುವುದಾಗಿ ಸಮಿತಿಯು ಎಚ್ಚರಿಕೆಯನ್ನೂ ನೀಡಿತ್ತು.