26/11 ಮುಂಬಯಿ ಭಯೋತ್ಪಾದನಾ ದಾಳಿಯು ‘ಹಿಂದೂ ಭಯೋತ್ಪಾದನೆ’ ತೋರಿಸಲು ಕಾಂಗ್ರೆಸ್‌ನ ಸಂಚು ! – ಕರ್ನಲ್‌ ಆರ್. ಎಸ್. ಸಿಂಗ್‌

’26/11 ಮುಂಬಯಿ ಭಯೋತ್ಪಾದನಾ ದಾಳಿ : ಕಾಂಗ್ರೆಸ್‌ನ ಹಿಂದೂ ವಿರೋಧಿ ಸಂಚು !’ ಈ ಕುರಿತು ‘ಆನ್‌ಲೈನ್‌’ನಲ್ಲಿ ವಿಶೇಷ ಸಂವಾದ !

ಕರ್ನಲ್‌ ಆರ್. ಎಸ್. ಸಿಂಗ್‌

ಹಿಂದೆ ಪ್ರತ್ಯಕ್ಷ ಗಡಿಯಲ್ಲಿ ಯುದ್ಧಗಳಾಗುತ್ತಿದ್ದವು, ಈಗ ಆ ರೀತಿ ಆಗುವುದಿಲ್ಲ. ಈಗ ರಾಜಕೀಯ ಪಕ್ಷಗಳನ್ನು ಬಳಸಿಕೊಂಡು ಯುದ್ಧಗಳನ್ನು ನಡೆಸಲಾಗುತ್ತಿದೆ, ಇದು ಹೆಚ್ಚು ಅಗ್ಗದ ಹಾಗೂ ಪರಿಣಾಮಕಾರಿಯಾದ ಪದ್ದತಿಯಾಗಿದೆ, ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಇದು ದೇಶದೊಳಗೆ ನಡೆಯುತ್ತಿರುವ ಅಂತರ್ಯುದ್ಧವಾಗಿದೆ ! ಮುಂಬಯಿಯಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯು ಪೂರ್ವಯೋಜಿತವಾಗಿತ್ತು. ಎಂದು ಈಗೆಲ್ಲೋ ಜನರು ಮಾತನಾಡುತ್ತಿದ್ದಾರೆ. 26/11 ರ ಮುಂಬಯಿ ಭಯೋತ್ಪಾದನಾ ದಾಳಿಯು ‘ಹಿಂದೂ ಭಯೋತ್ಪಾದನೆ’ಯನ್ನು ಬಿಂಬಿಸಲು ಕಾಂಗ್ರೆಸ್ಸಿನ ಪಿತೂರಿಯಾಗಿತ್ತು. ಇದರಿಂದ ಬಹುಸಂಖ್ಯಾತ ಹಿಂದೂಗಳ ಧೈರ್ಯ ಕುಗ್ಗಿಸಿ, ಅಲ್ಪಸಂಖ್ಯಾತರಿಗೆ ಒಟ್ಟಿಗೆ ಸೇರಿಸಿ ಆಡಳಿತದಲ್ಲಿ ಉಳಿದುಕೊಳ್ಳಲು ಕಾಂಗ್ರೆಸ್‌ನವರ ಆಯೋಜನೆಯಾಗಿತ್ತು, ಎಂದು ಭಾರತೀಯ ರಕ್ಷಣಾ ತಜ್ಞರು, ಸಂಶೋಧನೆ ಮತ್ತು ವಿಶ್ಲೇಷಣಾ ಶಾಖೆಯ ಮಾಜಿ ಅಧಿಕಾರಿ ಮತ್ತು ಭಾರತೀಯ ಸೇನೆಯ ಅಧಿಕಾರಿ ಕರ್ನಲ್‌ ಆರ್‌.ಎಸ್. ಸಿಂಗ್‌ ಖಂಡತುಂಡಾಗಿ ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ’26/11 ಮುಂಬಯಿ ಭಯೋತ್ಪಾದನಾ ದಾಳಿ : ಕಾಂಗ್ರೆಸ್‌ನ ಹಿಂದೂ ವಿರೋಧಿ ಪಿತೂರಿ !’ ಈ ಕುರಿತು ಆಯೋಜಿಸಲಾಗಿದ್ದ ‘ಆನ್‌ಲೈನ್’ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

ಕರ್ನಲ್‌ ಆರ್. ಎಸ್. ಸಿಂಗ್‌ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ‘ನಾವು ಕಳೆದ 1400 ವರ್ಷಗಳಿಂದ ಜಿಹಾದಿ ಸಿದ್ಧಾಂತದ ವಿರುದ್ಧ ಹೋರಾಡುತ್ತಿದ್ದೇವೆ. ಎಲ್ಲಿಯವರೆಗೆ ಪಾಕಿಸ್ತಾನದ ಅಸ್ತಿತ್ವವಿದೆಯೋ, ಅಲ್ಲಿಯವರೆಗೆ ದೇಶದ ಮೇಲೆ ದಾಳಿಗಳು ನಡೆಯುತ್ತಲೇ ಇರುತ್ತವೆ. ಅದಕ್ಕಾಗಿಯೇ ಪಾಕಿಸ್ತಾನಕ್ಕೆ ಮತ್ತು ಜಿಹಾದಿ ಸಿದ್ಧಾಂತವನ್ನು ನಿರ್ಮೂಲನೆ ಮಾಡಬೇಕಾಗಿದೆ. ಕಾಂಗ್ರೆಸ್‌ ಅಧಿಕಾರದಲ್ಲಿರುವಾಗ 2004 ರಿಂದ 2008 ರವರೆಗೆ ದೆಹಲಿ, ವಾರಣಾಸಿ, ಅಯೋಧ್ಯೆ, ಜೈಪುರ, ಭಾಗ್ಯನಗರ (ಹೈದರಾಬಾದ್‌), ಮುಂಬಯಿ, ಪುಣೆ, ಮಾಲೆಗಾಂವ್‌ ಮುಂತಾದ ವಿವಿಧ ಸ್ಥಳಗಳಲ್ಲಿ ‘ಐ.ಎಸ್‌.ಐ.’ ಭಾರತದಲ್ಲಿ ನೆಲೆಸಿರುವ ರಾಜಕೀಯ ನಾಯಕರ ಸಹಾಯದಿಂದ ಬಾಂಬ್‌ ಸ್ಫೋಟಗಳನ್ನು ನಡೆಸಿತು. ಮುಂಬಯಿಯಲ್ಲಿ 26/11 ರ ಭಯೋತ್ಪಾದನಾ ದಾಳಿಯು ಅದರ ಪರಾಕಾಷ್ಠೆಯಾಗಿತ್ತು. ಈ ಮೂಲಕಿ ಮುಂಬಯಿನಲ್ಲಿ 26/11 ಸಹಿತ ಮಾಲೆಗಾವ, ಸಂಜೋತಾ ಎಕ್ಸ್‌ಪ್ರೆಸ್‌ ಇವು ‘ಹಿಂದೂ ಭಯೋತ್ಪಾದನೆ’ ಆಗಿತ್ತು, ಎಂದು ಹೇಳಬಯಸಿದ್ದರು’ ಎಂದು ಹೇಳಿದರು.

ಭಾರತ ಸರಕಾರದ ಗೃಹ ಸಚಿವಾಲಯದ ಮಾಜಿ ಅಪರ ಕಾರ್ಯದರ್ಶಿ ಶ್ರೀ. ಆರ್. ವಿ.ಎಸ್. ಮಣಿ ಇವರು ಮಾತನಾಡುತ್ತಾ, ‘ಅಂದಿನ ರಾಜಕೀಯ ನಾಯಕರಿಂದ ಯೋಗ್ಯ ಹಸ್ತಕ್ಷೇಪವಾಗುತ್ತಿದ್ದರೆ, 26/11ರ ದಾಳಿಯನ್ನು ತಡೆಯಬಹುದಿತ್ತು ! ಆದರೆ ಹಾಗೆ ಆಗಲಿಲ್ಲ. ‘ಹಿಂದೂ ಭಯೋತ್ಪಾದನೆ’ ಒಂದು ಭ್ರಮೆಯಾಗಿತ್ತು, 26/11 ದಾಳಿಯೂ ಅದರ ಒಂದು ಭಾಗವಾಗಿತ್ತು. ಇದಾದ ನಂತರ ಈ ಬಗ್ಗೆ ಬರೆದ ಪುಸ್ತಕಗಳಲ್ಲಿ ‘ಇದು ಹೇಗೆ ಹಿಂದೂ ಭಯೋತ್ಪಾದನೆಯಾಗಿತ್ತು’ ಎಂಬುದನ್ನು ಸಾಬೀತುಪಡಿಸಲಿಕ್ಕಿತ್ತು; ಆದರೆ ಈಗ ಜನರ ಮುಂದೆ ಸತ್ಯ ಬೆಳಕಿಗೆ ಬಂದಿದೆ. ತುಕಾರಾಂ ಒಂಬಳೆ ಈ ಪೊಲೀಸನು ಕಸಬ್‌ನನ್ನು ಜೀವಂತವಾಗಿ ಸೆರೆ ಹಿಡಿದಿದ್ದರಿಂದ 26/11ರ ಭಯೋತ್ಪಾದನಾ ದಾಳಿಯನ್ನು ‘ಹಿಂದೂ ಭಯೋತ್ಪಾದನೆ’ ಎಂದು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ’, ಎಂದು ಹೇಳಿದರು.

ಸನಾತನ ಸಂಸ್ಥೆಯ ಧರ್ಮಪ್ರಚಾರಕ ಶ್ರೀ. ಅಭಯ ವರ್ತಕ್‌ ಇವರು ಮಾತನಾಡುತ್ತಾ, ‘ತುಕಾರಾಂ ಓಂಬಳೆ ಇವರು ಕಸಾಬ್‌ನನ್ನು ಜೀವಂತವಾಗಿ ಸೆರೆಹಿಡಿದರು, ಇಲ್ಲದಿದ್ದರೆ ಹಿಂದೂ ಭಯೋತ್ಪಾದನೆಯನ್ನು ಸಾಬೀತುಪಡಿಸಲು ಕಾಂಗ್ರೆಸ್‌ನ ಸ್ಕ್ರಿಪ್ಟ್ ಸಿದ್ಧವಾಗಿತ್ತು. ಹಿಂದೂಗಳು ತುಕಾರಾಂ ಓಂಬಾಳೆ ಅವರ ಬಲಿದಾನವನ್ನು ಎಂದಿಗೂ ಮರೆಯಬಾರದು. ಹಿಂದೆಂದೂ ಅಸ್ತಿತ್ವದಲ್ಲಿ ಇರದ ‘ಹಿಂದೂ ಭಯೋತ್ಪಾದನೆ’ಯನ್ನು ಹುಟ್ಟು ಹಾಕಲು ಕಾಂಗ್ರೆಸ್‌ ಪ್ರಯತ್ನಿಸಿದೆ. ಭಾರತದ ಮರು ವಿಭಜನೆಯನ್ನು ತಪ್ಪಿಸಬೇಕಿದ್ದರೆ, ರಾಷ್ಟ್ರಪ್ರೇಮಿ ನಾಗರಿಕರು ಹಿಂದೂ ರಾಷ್ಟ್ರವನ್ನು ಒತ್ತಾಯಿಸಬೇಕು. ಹಿಂದೂಗಳು ಇನ್ನಾದರೂ ಜಾಗೃತರಾಗಿರಬೇಕು ಮತ್ತು ದೇಶವಿರೋಧಿ ಶಕ್ತಿಗಳ ವಿರುದ್ಧ ಒಂದಾಗಬೇಕು’ ಎಂದು ಹೇಳಿದರು.