ಸಂಸತ್ತಿನಲ್ಲಿ ಅದಾನಿ ಪ್ರಕರಣ ಮತ್ತು ಸಂಭಲ್ ಹಿಂಸಾಚಾರಗಳಿಂದ ಕೋಲಾಹಲ; ನವೆಂಬರ್ 27 ರವರೆಗೆ ಕಲಾಪ ಸ್ಥಗಿತ!

ನವ ದೆಹಲಿ : ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ಲೋಕಸಭೆ ಮತ್ತು ರಾಜ್ಯಸಭೆಯ ಎರಡೂ ಸದನಗಳಲ್ಲಿ ಭಾರಿ ಕೋಲಾಹಲ ಉಂಟಾಯಿತು. ಉಭಯ ಸದನಗಳಲ್ಲಿ, ವಿರೋಧ ಪಕ್ಷದವರು ಅದಾನಿ ಅವರ ಮೇಲಿನ ಅಮೇರಿಕಾದಲ್ಲಿನ ಆರೋಪಗಳು ಮತ್ತು ಉತ್ತರ ಪ್ರದೇಶದ ಸಂಭಲ್‌ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಚರ್ಚೆಗೆ ಒತ್ತಾಯಿಸಿದರು. ಈ ವೇಳೆ ವಿರೋಧ ಪಕ್ಷಗಳ ಸಂಸದರು ಗೊಂದಲ ಸೃಷ್ಟಿಸಿದರು. ಅಂತಿಮವಾಗಿ ಉಭಯ ಸದನಗಳ ಕಲಾಪವನ್ನು ನವೆಂಬರ್ 27 ರವರೆಗೆ ಸ್ಥಗಿತ ಗೊಳಿಸಲಾಯಿತು.

ಮಣಿಪುರದಲ್ಲಿನ ಹಿಂಸಾಚಾರ ಮತ್ತು ಕೇರಳದ ವಯನಾಡ್ ನಲ್ಲಿನ ದುರಂತದ ಕುರಿತು ಪ್ರತಿಪಕ್ಷಗಳು ರಾಜ್ಯಸಭೆಯಲ್ಲಿ ಮುಂದೂಡಿಕೆ ನಿರ್ಣಯವನ್ನು ಮಂಡಿಸಿವೆ ಎಂದು ವರದಿಯಾಗಿದೆ. ಹಿಂಸಾಚಾರದ ಸೂತ್ರದ ಬಗ್ಗೆ ವಿರೋಧ ಪಕ್ಷದ ಸಂಸದರು ಭಾಜಪವನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸಮಾಜವಾದಿ ಪಕ್ಷದ ಸಂಸದರು ಏರು ಧ್ವನಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಪ್ರಯತ್ನಿಸಿ ಗೊಂದಲ ಸೃಷ್ಟಿಸಿದರು. ಈ ವೇಳೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕೂಡ ನಿಂತಿದ್ದು ಕಾಣಿಸಿದೆ. ಇತರ ವಿರೋಧ ಪಕ್ಷಗಳ ಸದಸ್ಯರೂ ವಿವಿಧ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಸದನದ ಕಲಾಪಕ್ಕೆ ಅಡ್ಡಿಪಡಿಸಿದರು. ಪ್ರತಿಪಕ್ಷಗಳ ಗದ್ದಲದಿಂದಾಗಿ ಉಭಯ ಸದನಗಳಲ್ಲಿ ಶೂನ್ಯವೇಳೆ ಕಲಾಪ ಮತ್ತು ಪ್ರಶ್ನೋತ್ತರ ಕಲಾಪ ನಡೆಯಲು ಸಾಧ್ಯವಾಗಲಿಲ್ಲ.

ಸಂಪಾದಕೀಯ ನಿಲುವು

ಸಂಸತ್ತಿನಲ್ಲಿ ಗದ್ದಲ ಎಬ್ಬಿಸಿ ಕಲಾಪಕ್ಕೆ ಅಡ್ಡಿಪಡಿಸಿ ಹಣ ಪೋಲು ಮಾಡುವ ಸಂಸದರಿಗೆ ಶಾಲೆಯಲ್ಲಿ ಗಲಾಟೆ ಮಾಡುವ ಅಶಿಸ್ತಿನ ವಿದ್ಯಾರ್ಥಿಗಳಿಗೆ ಯಾವರೀತಿ ಶಿಕ್ಷೆ ನೀಡುವರೋ ಅದೇ ರೀತಿ ಶಿಕ್ಷೆ ಏಕೆ ನೀಡುತ್ತಿಲ್ಲ ?