ಕಾನೂನಿಗನುಸಾರ ಬಾಲಸಂನ್ಯಾಸ ಯೋಗ್ಯ !

ಹಿಂದುತ್ವವನ್ನು ಗುರಿಪಡಿಸುವವರು ಎಂದಿಗೂ ಇಸ್ಲಾಮೀ ಭಯೋತ್ಪಾದನೆಯ ಬಗ್ಗೆ ಒಂದು ಶಬ್ದವನ್ನು ಮಾತನಾಡುವುದಿಲ್ಲ ಎಂಬುದನ್ನು ಗಮನದಲ್ಲಿಡಿ

೧. ಶಿರೂರು ಮಧ್ವಾಚಾರ್ಯ ಮಠದಲ್ಲಿ ‘ಬಾಲಸಂನ್ಯಾಸಿಯವರನ್ನು ನೇಮಿಸುವ ನೂರಾರು ವರ್ಷಗಳ ಸಂಪ್ರದಾಯವನ್ನು ಒಪ್ಪಿದ ಕರ್ನಾಟಕ ಉಚ್ಚ ನ್ಯಾಯಾಲಯ

‘ಉಡುಪಿಯ ಶಿರೂರು ಮಧ್ವಾಚಾರ್ಯ ಮಠದಲ್ಲಿ ೧೬ ವರ್ಷದ ಹುಡುಗನನ್ನು ‘ಬಾಲ ಸಂನ್ಯಾಸಿ’ ಎಂದು ನೇಮಿಸಲಾಯಿತು. ಅವರು ಈ ಮಠದ ಉತ್ತರಾಧಿಕಾರಿಗಳೆಂದು ಕಾರ್ಯವನ್ನು ನಿರ್ವಹಿಸುವವರಿದ್ದಾರೆ. ಈ ನೇಮಕಾತಿಯ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿಯನ್ನು ಸಲ್ಲಿಸಲಾಯಿತು. ಹಿಂದೂದ್ರೋಹಿ ಮತ್ತು ವಿಘ್ನಪ್ರಿಯರು ಯಾವಾಗಲೂ ಹಿಂದೂಗಳ ಒಳ್ಳೆಯ ಕಾರ್ಯದಲ್ಲಿ ಅಡಚಣೆಗಳನ್ನು ತಂದೊಡ್ಡುತ್ತಾರೆ. ಈ ಜನರು ಹಿಂದೂಗಳ ಪ್ರತಿಯೊಂದು ಧಾರ್ಮಿಕ ರೂಢಿಪರಂಪರೆಗಳ ವಿರುದ್ಧ ನ್ಯಾಯಾಲಯಕ್ಕೆ ಹೋಗುತ್ತಾರೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯವು ‘ಕಾರಣಕೇಳಿ’ ನೋಟಿಸ್ (ಶೋಕಾಸ್ ನೋಟಿಸ್) ಕಳುಹಿಸಿದರೂ ವಾರ್ತಾವಾಹಿನಿಗಳಿಗೆ ತುಂಬಾ ಆನಂದವಾಗುತ್ತದೆ. ಇಲ್ಲಿಯೂ ಹಾಗೇ ಆಯಿತು. ಯಾವಾಗ ಈ ಪ್ರಕರಣದ ಮೊದಲ ಆಲಿಕೆಯಾಯಿತೋ, ಆಗ ‘ಈಗ ಬಾಲಸಂನ್ಯಾಸಿಯ ಪರಂಪರೆಯೇ ನಿಂತು ಹೋಗುವುದು’, ಎಂಬಂತಹ ವಾತಾವರಣವು ಸೃಷ್ಟಿಯಾಗಿತ್ತು. ಆದರೆ ಪ್ರತ್ಯಕ್ಷದಲ್ಲಿ ಅದರ ವಿರುದ್ಧವಾಯಿತು. ಅವರ ದುರದೃಷ್ಟಕ್ಕೆ ಈ ಪ್ರಕರಣದ ಅಂತಿಮ ತೀರ್ಪು ಮಠದ ಪಕ್ಷದಲ್ಲಿ ಬಂದಿತು ಮತ್ತು ಬಾಲಸಂನ್ಯಾಸವನ್ನು ತೆಗೆದುಕೊಳ್ಳಲು ಕಾನೂನಿನ ಒಪ್ಪಿಗೆ ಇರುವುದು ಸ್ಪಷ್ಟವಾಯಿತು.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೨. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿನ ಅರ್ಜಿ ಮತ್ತು ಅದಕ್ಕೆ ಶಿರೂರ ಮಠದ ಯುಕ್ತಿವಾದ

ಅ. ಅರ್ಜಿಯಲ್ಲಿ, ಬಾಲಸಂನ್ಯಾಸಿಯು ೧೮ ವರ್ಷಕ್ಕಿಂತ ಚಿಕ್ಕವನಾಗಿರುವುದರಿಂದ ಅವನು ಮಠಾಧಿಪತಿಯಾಗಲು ಸಾಧ್ಯವಿಲ್ಲ, ಹಾಗೆಯೇ ಅವನು ಬ್ರಹ್ಮಚಾರಿಯಾಗಿರಲೂ ಸಾಧ್ಯವಿಲ್ಲ; ಏಕೆಂದರೆ ಯಾವ ವಯಸ್ಸಿನಲ್ಲಿ ಅವನು ಶಿಕ್ಷಣವನ್ನು ಪಡೆಯುವುದು ಅಥವಾ ಭೌತಿಕ ವಿಷಯಗಳ ಸುಖವನ್ನು ಉಪಭೋಗಿಸಬೇಕೋ, ಆ ವಯಸ್ಸಿನಲ್ಲಿ ಅವನ ಮೇಲೆ ಬಾಲಸಂನ್ಯಾಸತ್ವವನ್ನು ಹೇರಲಾಗುತ್ತಿದೆ, ಇದು ಯೋಗ್ಯವಲ್ಲ. ಅವನು ಅಪ್ರಾಪ್ತನಾಗಿರುವುದರಿಂದ ಅವನ ಒಪ್ಪಿಗೆಗೆ ಯಾವುದೇ ಅರ್ಥವಿಲ್ಲ, ಎಂದು ಹೇಳಲಾಗಿತ್ತು. ಈ ಅರ್ಜಿಗೆ ತಮ್ಮ ಅಭಿಪ್ರಾಯವನ್ನು ಹೇಳಿದ ಶಿರೂರ ಮಠವು, ‘ಸಂಪ್ರದಾಯಕ್ಕನುಸಾರ ಸಂನ್ಯಾಸ ಅಥವಾ ದೀಕ್ಷೆಯನ್ನು ಕೇವಲ ಬ್ರಹ್ಮಚಾರಿಗಳಿಗೆ ಮಾತ್ರ ಕೊಡಲಾಗುತ್ತದೆ. ೧೪ ವರ್ಷಗಳ ಕೆಳಗಿನ ಮಕ್ಕಳಿಗೆ ವೇದ ಮತ್ತು ಉಪನಿಷತ್ತುಗಳ ಶಿಕ್ಷಣವನ್ನು ನೀಡಲಾಗುತ್ತದೆ. ಈ ಎಲ್ಲ ಶಿಕ್ಷಣವನ್ನು ಹೊಸದಾಗಿ ನೇಮಕಗೊಂಡ ಮಠಾಧಿಪತಿಗಳಿಗೂ ನೀಡಲಾಗುವುದು. ಮುಂದೆ ಅವರು ತಮಗೆ ದೊರಕಿದ ಜ್ಞಾನವನ್ನು ಇತರರಿಗೆ ನೀಡುವರು. ಈ ರೀತಿ ೮೦೦ ವರ್ಷಗಳಿಂದ ನಡೆದು ಬಂದಿರುವ ಈ ಉಜ್ವಲ ಪರಂಪರೆಯನ್ನು ಮುಂದೆ ಸಹ ಮುಂದುವರೆಸಲಾಗುವುದು’, ಎಂದು ಹೇಳಿತು.

ಆ. ಅರ್ಜಿದಾರರು  ವೈಮನಸ್ಸಿನಿಂದ ಈ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಮಠವು ನ್ಯಾಯಾಲಯದ ಗಮನಕ್ಕೆ ತಂದು ಕೊಟ್ಟಿತು. ‘ಈ ಹಿಂದೆ ಅರ್ಜಿದಾರರು ಈಗಿನ ಬಾಲಬ್ರಹ್ಮಚಾರಿಗಳ ವಿರುದ್ಧ ಕ್ರಿಮಿನಲ್ ದೂರನ್ನು ದಾಖಲಿಸಿದ್ದರು, ಆದರೆ ಅದನ್ನು ತಾಲೂಕು ನ್ಯಾಯಾಲಯವು ತಿರಸ್ಕರಿಸಿತ್ತು. ಆ ಸಿಟ್ಟನ್ನು ಮನಸ್ಸಿನಲ್ಲಿಟ್ಟುಕೊಂಡು ಈಗ ಬಾಲಸಂನ್ಯಾಸಿಗಳ ನೇಮಕದ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ೨೦೧೩ ರಲ್ಲಿ ಯಾವ ನಿಲುವನ್ನು  ಅನ್ವಯಿಸಲಾಗಿತ್ತೋ, ಅವುಗಳಲ್ಲಿ ಯಾವುದೇ ಕಲಂಗಳನ್ನು ಉಲ್ಲಂಘಿಸಿಲ್ಲ. ೨೦೧೮ ರಲ್ಲಿ ಈ ಹಿಂದಿನ ಮಠಾಧಿಪತಿಗಳ ಮೃತ್ಯು ವಾಯಿತು. ಅಂದಿನಿಂದ ಈ ಸ್ಥಾನ (ಪೀಠ) ಖಾಲಿಯಿತ್ತು. ಈಗ ಆ ಸ್ಥಾನವನ್ನು ತುಂಬಿದ್ದರಿಂದ ಈ ವಿವಾದ ರದ್ದುಗೊಳಿಸಬೇಕು’, ಎಂದು ಶಿರೂರು ಮಠವು ಹೇಳಿತು.

ಇ. ಶಿರೂರು ಮಠವು ಯುಕ್ತಿವಾದವನ್ನು ಮಾಡುವಾಗ, ‘ಶಿರೂರು ಮಠಕ್ಕೆ ೮೦೦ ವರ್ಷಗಳ ಪರಂಪರೆಯಿದೆ. ಆದಿ ಶಂಕರಾಚಾರ್ಯರು ಹಾಗೂ ನಂತರ ಮಧ್ವಾಚಾರ್ಯರು ಸ್ವತಃ ೧೮ ವರ್ಷಗಳಿಗಿಂತ ಚಿಕ್ಕವರಿರುವಾಗ ಸಂನ್ಯಾಸವನ್ನು ಸ್ವೀಕರಿಸಿದ್ದರು. ಮಧ್ವಾಚಾರ್ಯರನ್ನು ಕೇವಲ ೧೧ ವರ್ಷದವರಿದ್ದಾಗ ಮಠಾಧಿಪತಿಗಳೆಂದು ಘೋಷಿಸಲಾಗಿತ್ತು. ಬಾಲಸಂನ್ಯಾಸವನ್ನು ಸ್ವೀಕರಿಸುವಾಗ ಈ ಸಂಪ್ರದಾಯವನ್ನು ಪಾಲಿಸುವುದರಿಂದ ಯಾವುದೇ ಕಾನೂನಿನ ಉಲ್ಲಂಘನೆಯಾಗುವುದಿಲ್ಲ. ಬಾಲಸಂನ್ಯಾಸಿಗಳ ನೇಮಕವು ಕಾನೂನಿಗನುಸಾರ ಸರಿಯಿದೆ. ಆದಿ ಶಂಕರಾಚಾರ್ಯರ ಕಾಲದಿಂದ ಮತ್ತು ೮೦೦ ವರ್ಷಗಳಿಂದ ನಡೆದುಕೊಂಡು ಬಂದ ಪರಂಪರೆಯಲ್ಲಿ ಉಚ್ಚ ನ್ಯಾಯಾಲಯಕ್ಕೆ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲ’, ಎಂದಿತು.

೩. ಬಾಲಸಂನ್ಯಾಸಿ ಸಂಪ್ರದಾಯದ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯದ ಮಹತ್ವಪೂರ್ಣ ತೀರ್ಪು !

ಈ ಅರ್ಜಿಯನ್ನು ಆಲಿಸಿದ ನ್ಯಾಯಾಲಯವು ‘ಇಂಡಿಯನ್ ಮೆಜಾರಿಟಿ ಎಕ್ಟ್’ ೧೮೭೫ ರಲ್ಲಿ ಜಾರಿಗೆ ತರಲಾದ ಕಾನೂನಿನ ಆಧಾರವನ್ನು ಪಡೆಯಿತು. ಇದರಲ್ಲಿ ಕಲಂ ೨ ರ ಪ್ರಕಾರ ೧೮ ವರ್ಷ ಪೂರ್ಣಗೊಂಡ ವ್ಯಕ್ತಿಯನ್ನು ಪ್ರೌಢ ವ್ಯಕ್ತಿ ಎಂದು ತಿಳಿಯಲಾಗುತ್ತದೆ; ಆದರೆ ಅದೇ ಕಾನೂನಿನಲ್ಲಿ ಒಂದು ವಿನಾಯಿತಿಯನ್ನು (ಎಕ್ಸೆಪ್ಶನ್) ನೀಡಲಾಗಿದೆ. ಅದರಂತೆ ‘ಧಾರ್ಮಿಕ ಸಂಪ್ರದಾಯ ಮತ್ತು ಯಾವುದೇ ಧರ್ಮದ ರೂಢಿಪರಂಪರೆಗಳಿಗೆ ಇದು ಅಡ್ಡಗಾಲು ಹಾಕುತ್ತಿದ್ದರೆ ಈ ಕಾನೂನು ಅದಕ್ಕೆ ಅನ್ವಯಿಸುವುದಿಲ್ಲ’. ಅರ್ಜಿದಾರರು “ಬಾಲಕಾರ್ಮಿಕ ಪ್ರತಿಬಂಧಕ ಮತ್ತು ನಿಯಂತ್ರಣ ೧೯೮೬ ಈ ಕಾನೂನಿನಂತೆ, ೧೪ ಕ್ಕಿಂತ ಕಡಿಮೆ ವಯಸ್ಸಿನ (ಅಪ್ರಾಪ್ತ ವಯಸ್ಸಿನ) ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಇದೇ ಕಾನೂನನ್ನು ಸಂನ್ಯಾಸದೀಕ್ಷೆಯನ್ನು ತೆಗೆದುಕೊಳ್ಳುವವರಿಗೂ ಅನ್ವಯಿಸಬೇಕು”, ಎಂದು ಹೇಳಿದ್ದರು. ಈ ವಾದವನ್ನು ತಿರಸ್ಕರಿಸಿದ ಕರ್ನಾಟಕ ಉಚ್ಚ ನ್ಯಾಯಾಲಯವು ೧೯೧೭ ರಲ್ಲಿನ ‘ಮದ್ರಾಸ್ ಉಚ್ಚ ನ್ಯಾಯಾಲಯ ನೀಡಿದ ‘ಭೀಮಾನಕಟ್ಟೆ ಮಠದ ಬಗೆಗಿನ ತೀರ್ಪು’ ಮತ್ತು ಇದೇ ಅಂಶದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನೇ ಅನುಕರಿಸಿತು.

೪. ಆಂಗ್ಲರು ೧೯೨೭ ರಲ್ಲಿ ಹಿಂದೂಗಳ ದೇವಸ್ಥಾನಗಳನ್ನು ಮತ್ತು ಅವುಗಳ ಸಂಪತ್ತನ್ನು ಕಬಳಿಸಲು ಮಾಡಿದ ಕಾನೂನು

ಆಂಗ್ಲರು ೧೯೨೭ ರಲ್ಲಿ ‘ಧಾರ್ಮಿಕ ದತ್ತಿ ಕಾಯದೆ’ (ರಿಲಿಜಿಯಸ್ ಎಂಡೊಮೆಂಟ್ ಆಕ್ಟ್) ಯನ್ನು ರೂಪಿಸಿದರು. ಅವರು ಈ ಕಾಯಿದೆಯ ಮೂಲಕ ಹಿಂದೂಗಳ ದೇವಸ್ಥಾನಗಳು, ದೇವಸ್ಥಾನಗಳ ಭೂಮಿ, ದೇವಸ್ಥಾನಗಳ ಆಭರಣ ಮತ್ತು ಹಣವನ್ನು ವಶಪಡಿಸಿಕೊಳ್ಳಲು ಆರಂಭಿಸಿದರು. ಸ್ವಾತಂತ್ರ್ಯಾ ನಂತರ ೧೯೫೧ ರಲ್ಲಿ‘ ಮದ್ರಾಸ ಹಿಂದೂ ರಿಲೀಜನ ಎಂಡೊಮೆಂಟ್ ಆಕ್ಟ್’ ಅನ್ನು ಜಾರಿಗೊಳಿಸಲಾಯಿತು. ಈ ಕಾನೂನಿನಲ್ಲಿನ ಏರ್ಪಾಡು ಮತ್ತು ವ್ಯವಸ್ಥಾಪನೆಯಲ್ಲಿ ಮಾಡಿದ ಬದಲಾವಣೆಗಳ ಬಗೆಗಿನ ವಾದವು ಉಚ್ಚ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ತಲುಪಿತು. ಅಲ್ಲಿ ಮಠಾಧಿಪತಿಗಳನ್ನು ನೇಮಿಸುವುದು ಅವರ ಅಧಿಕಾರ, ದೇವಸ್ಥಾನದ ಭೂಮಿ ಮತ್ತು ಹಣದ ನಿಯೋಜನೆ, ಅವುಗಳ ಬಳಕೆ, ದೇವಸ್ಥಾನಗಳಲ್ಲಿನ ಸಂಪ್ರದಾಯ, ಗರ್ಭಗೃಹದಲ್ಲಿನ ಪ್ರವೇಶ, ಇತರ ಪದ್ಧತಿಗಳು, ಉತ್ಸವಗಳನ್ನು ಹೇಗೆ ಆಚರಿಸಬೇಕು ಮುಂತಾದ ಎಲ್ಲ ಸೂಕ್ಷ್ಮ ವಿಷಯಗಳು ನ್ಯಾಯಾಲಯದೆದುರು ಬಂದವು. ಸಂವಿಧಾನದ ಕಲಮ್ ೨೫ ಮತ್ತು ೨೬ ರ ಆಧಾರದಿಂದ ಮಠದ ನ್ಯಾಯವಾದಿಗಳು ಪರಿಣಾಮಕಾರಿ ವಾದವನ್ನು ಮಾಡಿದರು.

೫. ಬಾಲಸಂನ್ಯಾಸಿ ಖಟ್ಲೆಯ ವೇಳೆ ಸರ್ವೋಚ್ಚ ನ್ಯಾಯಾಲಯದ ೧೯೫೪ ರ ತೀರ್ಪಿನ ಆಧಾರ ಪಡೆದ ಕರ್ನಾಟಕ ಉಚ್ಚ ನ್ಯಾಯಾಲಯ

ಅ. ಕರ್ನಾಟಕ ಉಚ್ಚ ನ್ಯಾಯಾಲಯವು ಶಿರೂರು ಮಠದ ತೀರ್ಪನ್ನು ನೀಡುವಾಗ ೧೯೫೪ ರಲ್ಲಿನ ಖಟ್ಲೆಯ ವಿಚಾರವನ್ನು ಮಾಡಿತು. ಈ ಖಟ್ಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ‘ಮಠಗಳಲ್ಲಿ ನಡೆದಿರುವ ಪರಂಪರೆ, ಪದ್ಧತಿಗಳು ಮತ್ತು ಸಂಪ್ರದಾಯಗಳಲ್ಲಿ ಯಾರಿಗೂ ಅಥವಾ ಯಾವುದೇ ನ್ಯಾಯಾಲಯಕ್ಕೆ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲ. ದೇವಸ್ಥಾನದಲ್ಲಿನ ಗರ್ಭಗೃಹದಲ್ಲಿನ ಪ್ರವೇಶ, ಉತ್ಸವಗಳು, ದೇವತೆಗಳ ಹಬ್ಬಗಳ ಬಗೆಗಿನ ವಿಧಿಗಳು, ದೇವಸ್ಥಾನವನ್ನು ಯಾವಾಗ ತೆರೆಯಬೇಕು ? ದೇವತೆಗಳ ವಿಶ್ರಾಂತಿಯ ಸಮಯ ಈ ಎಲ್ಲ ವಿಷಯಗಳನ್ನು ಸಂಪ್ರದಾಯಕ್ಕನುಸಾರ ನಡೆಸಬೇಕು’, ಎಂದು ಸ್ಪಷ್ಟ ತೀರ್ಪನ್ನು ನೀಡಿತು.

ಆ. ಈ ತೀರ್ಪಿನ ಆಧಾರವನ್ನು ತೆಗೆದುಕೊಂಡು ಹಿಂದುತ್ವನಿಷ್ಠ ಮುಖಂಡರಾದ ಡಾ. ಸುಬ್ರಮಣಿಯನ್ ಸ್ವಾಮಿಯವರು ಇಂತಹದ್ದೇ ರೀತಿಯಲ್ಲಿ ಚಿದಂಬರಮ್ ದೇವಸ್ಥಾನದ ಖಟ್ಲೆಯನ್ನು ಗೆದ್ದರು ಮತ್ತು ದೇವಸ್ಥಾನವನ್ನು ಸ್ವಾಧೀನಪಡಿಸಿಕೊಳ್ಳುವ ಸರಕಾರದ ಯೋಜನೆಯನ್ನು ವಿಫಲಗೊಳಿಸಿದರು. ಪದ್ಮನಾಭ ದೇವಸ್ಥಾನದ ವ್ಯವಸ್ಥಾಪನೆಯಲ್ಲಿ ಅಲ್ಲಿನ ತ್ರಾವಣಕೊರ ರಾಜನಿಗೆ, ಅಂದರೆ ವರ್ಮಾ ಕುಟುಂಬಕ್ಕೆ ಅನೇಕ ಹಕ್ಕುಗಳು ದೊರಕಿದ್ದವು. ಆಗಲೂ ಸರ್ವೋಚ್ಚ ನ್ಯಾಯಾಲಯದ ೧೯೫೪ ನೇ ಇಸವಿಯಲ್ಲಿನ ತೀರ್ಪಿನ ಆಧಾರವನ್ನು ಪಡೆಯಲಾಯಿತು. ಈ ಮೂಲಕ ತ್ರಾವಣಕೊರದ ಆಗಿನ ರಾಜರು ಅಥವಾ ವರ್ಮಾ ಕುಟುಂಬದವರಿಗೆ ಅವರ ಪರಂಪರೆಯ ಹಕ್ಕು ಸಿಕ್ಕಿತು. ೧೯೫೪ ರ ಈ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು, ‘ಸಂವಿಧಾನದಲ್ಲಿನ ಕಲಮ್ ೨೫/೨೬ ರ ಪ್ರಕಾರ ಸಾವಿರಾರು ವರ್ಷಗಳಿಂದ ಧಾರ್ಮಿಕ ರೂಢಿಪರಂಪರೆಗಳು, ನಡೆದುಕೊಂಡು ಬಂದಿವೆ, ನಾವು ಅವುಗಳಲ್ಲಿ ಹಸ್ತಕ್ಷೇಪವನ್ನು ಮಾಡಲಾರೆವು’, ಎಂದು ಹೇಳಿದೆ.

೬. ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ

ಈ  ಬಾರಿ ಕರ್ನಾಟಕ ಉಚ್ಚ ನ್ಯಾಯಾಲಯವು ವಿವಿಧ ತೀರ್ಪುಗಳ ಬದಲು ಮಧ್ಯಪ್ರದೇಶದ ದ್ವಿಸದಸ್ಯ ಪೀಠದ ಒಂದು ತೀರ್ಪನ್ನು ಉಲ್ಲೇಖಿಸಿತು. ಸದ್ಯ ಕರ್ನಾಟಕದಲ್ಲಿ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ. ಸತೀಶಚಂದ್ರ ಶರ್ಮಾ ಇವರೇ ಆ ಸಮಯದಲ್ಲಿ ಮಧ್ಯಪ್ರದೇಶದಲ್ಲಿ ನ್ಯಾಯಮೂರ್ತಿಗಳಾಗಿದ್ದರು. ಆಗ ಅವರ ನ್ಯಾಯಪೀಠದೆದುರು ‘ಆರ್ಶಮಾರ್ಗ ಸೇವಾ ಟ್ರಸ್ಟ್’ ಇವರ ಅರ್ಜಿಯು ಆಲಿಕೆಗಾಗಿ ಬಂದಿತ್ತು. ಇದರಲ್ಲಿ ಜೈನ ಮುನಿಗಳ ಧಾರ್ಮಿಕ ವಿಧಿಯ ಉಲ್ಲೇಖವಿತ್ತು. ಇಂದೂರ (ಮಧ್ಯಪ್ರದೇಶ)ದ ದ್ವಿಸದಸ್ಯ ಪೀಠವು ತನ್ನ ತೀರ್ಪಿನಲ್ಲಿ, ‘ಎಲ್ಲಿ ಸಂವಿಧಾನಕ್ಕೆ ವಿರೋಧವಾಗುವುದಿಲ್ಲವೋ, ಪ್ರಚಲಿತ ಸಾರ್ವಜನಿಕ ನಿಲುವುಗಳಿಗೆ ವಿರೋಧವಾಗುವುದಿಲ್ಲವೋ, ಯಾವುದೇ ಕಾನೂನಿನ ಉಲ್ಲಂಘನೆಯಾಗುವುದಿಲ್ಲವೋ ಮತ್ತು ಸಾರ್ವಜನಿಕ ನೈತಿಕತೆ, ಆರೋಗ್ಯ, ಮೂಲಭೂತ ಹಕ್ಕುಗಳಿಗೆ ಯಾವುದೇ ಅಡಚಣೆಯಾಗುವುದಿಲ್ಲವೋ, ಇಂತಹ ಯಾವುದೇ ಧಾರ್ಮಿಕ ರೂಢಿಪರಂಪರೆಗಳಿಗೆ ಯಾರಿಗೂ ಅಡ್ಡಗಾಲು ಹಾಕಲು ಬರುವುದಿಲ್ಲ’, ಎಂದು ಹೇಳಿತು. ಈ ಎಲ್ಲ ವಿಷಯಗಳ ವಿಚಾರ ಮಾಡಿ ಅವರು ಇಂದೂರಿನಲ್ಲಿ ಆ ಅರ್ಜಿಯನ್ನು ತಿರಸ್ಕರಿಸಿದ್ದರು.

೭. ಸರ್ವೋಚ್ಚ ನ್ಯಾಯಾಲಯವು ೧೯೫೪ ರ ತೀರ್ಪಿನ ಆಧಾರ ತೆಗೆದುಕೊಳ್ಳದೇ ನಿರ್ಣಯವನ್ನು ನೀಡಿದ್ದರಿಂದ ಅಯ್ಯಪ್ಪ ದೇವಸ್ಥಾನದ ಪ್ರವೇಶ ನಿಷೇಧದ ತೀರ್ಪು ಹಿಂದೂಗಳ ವಿರುದ್ಧವಾಯಿತು

ಅಯ್ಯಪ್ಪ ದೇವಸ್ಥಾನದಲ್ಲಿ ಮೊದಲಿನಿಂದಲೇ ೧೦ ರಿಂದ ೫೦ ನಡುವಿನ ವಯಸ್ಸಿನ ಮಹಿಳೆಯರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಅದರ ವಿರುದ್ಧ ಒಂದು ಅರ್ಜಿಯನ್ನು ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆಯನ್ನು ಮಾಡಿ ಸರ್ವೋಚ್ಚ ನ್ಯಾಯಾಲಯವು ಈ ವಯಸ್ಸಿನ ಮಹಿಳೆಯರಿಗೆ ದೇವಸ್ಥಾನದಲ್ಲಿ ಪ್ರವೇಶಿಸಲು ಅನುಮತಿ ನೀಡಿತು. ಇಲ್ಲಿ ೧೯೫೪ ನೇ ಇಸವಿಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿಚಾರವನ್ನು ಸಕಾರಾತ್ಮಕವಾಗಿ ಮಾಡದಿರುವುದು ಕಂಡುಬಂದಿತು. ಸದ್ಯ ಅದರ ಬಗ್ಗೆ ಪುನರ್ವಿಮರ್ಶೆಯ ಅರ್ಜಿಯನ್ನು ಸಲ್ಲಿಸಿದ್ದು ಅದರ ಆಲಿಕೆ ಬಾಕಿಯಿದೆ. ಆದುದರಿಂದ ಅಯ್ಯಪ್ಪ ದೇವಸ್ಥಾನದ ಪ್ರವೇಶ ನಿಷೇಧದ ಮರುಪರಿಶೀಲನೆಯ ಅರ್ಜಿಯು ೯ ಸದಸ್ಯರ ಪೀಠಕ್ಕೆ ಬರುವ ಸಾಧ್ಯತೆಯಿದೆ; ಏಕೆಂದರೆ ಒಂದು ವೇಳೆ ೧೯೫೪ ನೇ ಇಸವಿಯ ೭ ಸದಸ್ಯರ ತೀರ್ಪನ್ನು ಸ್ವೀಕರಿಸಲು ಇಲ್ಲದಿದ್ದರೆ, ನ್ಯಾಯಮೂರ್ತಿಗಳ ಸಂಖ್ಯೆಯು ೭ ಕ್ಕಿಂತ ಹೆಚ್ಚಿರಬೇಕಾಗುತ್ತದೆ.

ಅಯ್ಯಪ್ಪ ದೇವಸ್ಥಾನದಲ್ಲಿ ಪರಂಪರಾಗತವಾಗಿ ನಡೆದು ಬಂದಿರುವ ೧೦ ರಿಂದ ೫೦ ವರ್ಷ ನಡುವಿನ ವಯಸ್ಸಿನ ಮಹಿಳೆಯರ ಮೇಲಿನ ನಿಷೇಧದ ನಿಯಮವನ್ನು ಹಾಗೇ ಮುಂದುವರಿಸಬೇಕು, ಎಂದು ನಾವು ಈಶ್ವರನ ಚರಣಗಳಲ್ಲಿ ಪ್ರಾರ್ಥನೆಯನ್ನು ಮಾಡೋಣ. ‘ಸಂವಿಧಾನದ ೧೯, ೨೧, ೨೫, ೨೬ ನೇ ಕಾನೂನುಗಳ ಪ್ರಕಾರ ಹಿಂದೂಗಳ ಧಾರ್ಮಿಕ ರೂಢಿಪರಂಪರೆಗಳು, ರೀತಿನೀತಿಗಳು, ದೇವತೆಗಳ ಹಬ್ಬಗಳು, ಉತ್ಸವಗಳು, ದೇವಸ್ಥಾನಗಳ ಸಾವಿರಾರು ವರ್ಷಗಳ ಸಂಪ್ರದಾಯಗಳನ್ನು ಪಾಲಿಸಲು ಮತ್ತು ಅನುಕರಿಸಲು ಬರುತ್ತದೆ. ಅದರಲ್ಲಿ ಯಾರೂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಇಷ್ಟೇ ಅಲ್ಲದೇ ಇದಕ್ಕೆ ಗೌರವಾನ್ವಿತ ನ್ಯಾಯಾಲಯಗಳೂ ಹೊರತಾಗಿಲ್ಲ; ಆದರೆ ಇದಕ್ಕಾಗಿ ಹಿಂದೂಗಳು ‘ನನಗೇನಾಗಬೇಕಾಗಿದೆ’, ಎಂಬ ನಿಲುವನ್ನು ಬಿಟ್ಟು ಜಾಗೃತರಾಗಿರಬೇಕು !’

ಶ್ರೀಕೃಷ್ಣಾರ್ಪಣಮಸ್ತು |

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷತ್ತು ಮತ್ತು ನ್ಯಾಯವಾದಿ, ಮುಂಬಯಿ ಉಚ್ಚ ನ್ಯಾಯಾಲಯ