|
ನವದೆಹಲಿ – ಸಂವಿಧಾನದ ಪ್ರಸ್ತಾವನೆಯಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಈ ಶಬ್ದಗಳನ್ನು ತೆಗೆದುಹಾಕಲು ಆಗ್ರಹಿಸಿರುವ ಅರ್ಜಿ ಸರ್ವೋಚ್ಚ ನ್ಯಾಯಾಲಯದ ಸಂಪೂರ್ಣ ವಿಚಾರಣೆ ಆಗುವ ಮೊದಲೇ ತಡೆಹಿಡಿಯಲಾಗಿದೆ. ಈ ವಿಷಯ ೫೦ ವರ್ಷ ಹಳೆಯದಾಗಿದೆ ಎಂದು ನ್ಯಾಯಾಲಯ ಹೇಳಿದೆ. ಮಾಜಿ ಕೇಂದ್ರ ಸಚಿವ ಡಾ. ಸುಬ್ರಮಣ್ಯಂ ಸ್ವಾಮಿ, ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ ಮತ್ತು ನ್ಯಾಯವಾದಿ ವಿಷ್ಣು ಶಂಕರ ಜೈನ ಇವರು ಈ ಅರ್ಜಿ ದಾಖಲಿಸಿದ್ದರು. ೧೯೭೬ ರಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಇವರು ೪೨ ನೆ ಬಾರಿ ತಿದ್ದುಪಡಿ ಮಾಡುತ್ತಾ ಈ ಎರಡು ಶಬ್ದಗಳನ್ನು ಜೋಡಿಸಿದ್ದರು.
೧. ನ್ಯಾಯಮೂರ್ತಿಗಳು, ಈ ಅರ್ಜಿಯ ಕುರಿತು ವಿಸ್ತೃತ ವಿಚಾರಣೆ ನಡೆಸುವ ಅಗತ್ಯವಿಲ್ಲ. ‘ಜಾತ್ಯತೀತ’ ಮತ್ತು ‘ಸಮಾಜವಾದ’ ಈ ಶಬ್ದಗಳು ೧೯೭೬ ರಲ್ಲಿ ಸಂವಿಧಾನ ತಿದ್ದುಪಡಿ ಮೂಲಕ ಜೋಡಿಸಲಾಗಿತ್ತು ಮತ್ತು ೧೯೪೯ ರಲ್ಲಿ ಸ್ವೀಕರಿಸಿರುವ ಸಂವಿಧಾನದಲ್ಲಿ ಇದರಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ಹೇಳಿದರು.
೨. ವಿಚಾರಣೆಯ ಸಮಯದಲ್ಲಿ ನ್ಯಾಯವಾದಿ ವಿಷ್ಣು ಶಂಕರ ಜೈನ ಇವರು ೯ ನ್ಯಾಯಾಧೀಶರ ಸಂವಿಧಾನ ಪೀಠ ಇತ್ತೀಚಿಗೆ ನೀಡಿರುವ ನಿರ್ಣಯದ ಆಧಾರ ನೀಡಿದರು. ಅದರಲ್ಲಿ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ವಿ. ಆರ್. ಕೃಷ್ಣ ಅಯ್ಯರ್ ಮತ್ತು ನ್ಯಾಯಮೂರ್ತಿ ಒ. ಚಿನ್ನಪ್ಪ ರೆಡ್ಡಿ ಇವರು ನೀಡಿರುವ ‘ಸಮಾಜವಾದ’ ಶಬ್ದದ ವ್ಯಾಖ್ಯೆಯ ಜೊತೆಗೆ ಸರ್ವೋಚ್ಚ ನ್ಯಾಯಾಲಯ ಸಹಮತವಿಲ್ಲ ಎಂದು ಹೇಳಿದ್ದರು.
೩. ಈ ಕುರಿತು ನ್ಯಾಯಮೂರ್ತಿ ಖನ್ನಾ ಇವರು, ಭಾರತದ ಸಂದರ್ಭದಲ್ಲಿ ನಮಗೆ ತಿಳಿಯುವುದು ಏನೆಂದರೆ, ಭಾರತದಲ್ಲಿ ಸಮಾಜವಾದ ಇತರ ದೇಶಗಳಿಗಿಂತಲೂ ಬಹಳ ಬೇರೆ ಆಗಿದೆ. ಸಮಾಜವಾದದ ಅರ್ಥ ಮುಖ್ಯವಾಗಿ ‘ಕಲ್ಯಾಣಕಾರಿ ರಾಜ್ಯ’ ಎಂದು ತಿಳಿಯುತ್ತೇವೆ. ಕಲ್ಯಾಣಾರಿ ರಾಜ್ಯದಲ್ಲಿನ ಜನರ ಕಲ್ಯಾಣಕ್ಕಾಗಿ ನಿಲ್ಲಬೇಕು ಮತ್ತು ಸಮಾನತೆಗೆ ಅವಕಾಶ ಪ್ರಧಾನಿಸಬೇಕು. ೧೯೯೪ ರ ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ‘ಜಾತ್ಯತೀತ’ ಇದು ಸಂವಿಧಾನದ ಮೂಲಭೂತ ಸಂರಚನೆಯ ಭಾಗ ಎಂದು ಒಪ್ಪಿದ್ದರು ಎಂದು ಹೇಳಿದರು.
೪. ನ್ಯಾಯವಾದಿ ಜೈನ ಇವರು ಯುಕ್ತಿವಾದ ಮಾಡುತ್ತಾ, ತುರ್ತು ಪರಿಸ್ಥಿತಿಯ ಸಮಯದಲ್ಲಿ ೧೯೭೬ ರ ಸಂವಿಧಾನ ತಿದ್ದುಪಡಿ ಜನರ ಅಭಿಪ್ರಾಯ ಪಡೆಯದೆ ಅನುಮೋದನೆ ನೀಡಲಾಗಿತ್ತು. ಈ ಶಬ್ದದ ಸಮಾವೇಶಗೊಳಿಸುವುದು ಎಂದರೆ ಜನರು ವಿಶಿಷ್ಟ ವಿಚಾರಧಾರೆಯ ಪಾಲನೆ ಮಾಡಲು ಅನಿವಾರ್ಯಗೊಳಿಸುವುದಾಗಿದೆ. ಯಾವಾಗ ಪ್ರಸ್ತಾವನೆ ‘ಕಟ್ ಆಫ್ ಡೇಟ್’ ಸಹಿತ (ಯಾವುದಾದರೂ ವಿಷಯ ನಿರ್ಧರಿಸಲು ನಿಶ್ಚಯಿಸಿರುವ ಕೊನೆಯ ದಿನ) ಬರುತ್ತದೆ, ಆಗ ಅದರಲ್ಲಿ ಹೊಸ ಶಬ್ದಗಳು ಹೇಗೆ ಜೋಡಿಸಲಾಗುವುದು ?
೫. ಈ ಕುರಿತು ಖಂಡಪೀಠವು, ಸಂವಿಧಾನದಲ್ಲಿನ ಕಲಂ ೩೬೮ ಸಂಸತ್ತಿನ ಸಂವಿಧಾನ ತಿದ್ದುಪಡಿಯ ಅಧಿಕಾರ ನೀಡುತ್ತದೆ ಮತ್ತು ಅದರ ವಿಸ್ತಾರದಲ್ಲಿ ಪ್ರಸ್ತಾವನೆಯ ಸಮಾವೇಶ ಕೂಡ ಇದೆ ಎಂದು ಹೇಳಿದೆ.
‘Cannot remove the words ‘Secular’ and ‘Socialist’ from the preamble of our Constitution.’ – The #SupremeCourt rejects the petition before the full hearing.
▫️Advocate @AshwiniUpadhyay and Advocate @Vishnu_Jain1 to file a review petition.
👉 These words were originally added by… pic.twitter.com/EwYZXhYtMK
— Sanatan Prabhat (@SanatanPrabhat) November 26, 2024
ಸರ್ವೋಚ್ಚ ನ್ಯಾಯಾಲಯದ ಗೌರವ, ಆದರೆ ಅರ್ಜಿ ವಿಚಾರಣೆ ಮುಕ್ತಾಯ ಗೊಳಿಸಿರುವುದರಿಂದ ಸಮಾಧಾನವಿಲ್ಲ ! – ಅರ್ಜಿದಾರ ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ
ಇದರ ಸಂದರ್ಭದಲ್ಲಿ ‘ಸನಾತನ ಪ್ರಭಾತ್’ ಗೆ ಮಾಹಿತಿ ನೀಡುವಾಗ ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ ಇವರು, ನಾನು ಸರ್ವೋಚ್ಚ ನ್ಯಾಯಾಲಯವನ್ನು ಗೌರವಿಸುತ್ತೇನೆ; ಆದರೆ ಸಂವಿಧಾನದ ಪ್ರಸ್ತಾವನೆಯ ಅರ್ಜಿಯ ಸಂಪೂರ್ಣ ವಿಚಾರಣೆ ಆಗುವ ಮೊದಲೇ ನ್ಯಾಯಾಲಯವು ಅರ್ಜಿ ಮುಕ್ತಾಯಗೊಳಿಸಿದೆ. ಇದರಿಂದ ನನಗೆ ಸಮಾಧಾನವಿಲ್ಲ ಎಂದು ಹೇಳಿದರು. ಇದರ ಬಗ್ಗೆ ನ್ಯಾಯವಾದಿ ಉಪಾಧ್ಯಾಯ ಇವರು ಪ್ರಸಿದ್ಧಿ ಪತ್ರಕ ಹೊರಡಿಸಿದ್ದಾರೆ. ಅವರು ‘ನ್ಯಾಯಾಲಯಾವು ಈ ಪ್ರಕರಣದ ಕುರಿತು ಮತ್ತೊಮ್ಮೆ ಯೋಚನೆ ಮಾಡಬೇಕು,’ ಈ ವಿನಂತಿಯ ಬಗ್ಗೆ ಮರು ವಿಚಾರಣೆ ಅರ್ಜಿಯನ್ನು ದಾಖಲಿಸುವರು.
ಪ್ರಸಿದ್ಧಿ ಪತ್ರಕದಿಂದ ಅವರು ಕಾನೂನು ಸಂದರ್ಭದಲ್ಲಿ ೧೫ ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿನ ಕೆಲವು ಕೆಳಗಿನಂತೆ :
೧. ಕೇಂದ್ರ ಸರಕಾರದ ಕಾಲಮಿತಿ ಮುಗಿದ ನಂತರ, ಎಂದರೆ ಅವರ ಬಳಿ ಜನಮತ ಇಲ್ಲದಿರುವಾಗ ಅವರ ಬಳಿ ಸಂವಿಧಾನದಲ್ಲಿ ಬದಲಾವಣೆ ಮಾಡುವ ಅಧಿಕಾರ ಇರುತ್ತದೆಯೇ ?
೨. ಸರಕಾರ ಅವರ ಮನಸ್ಸಿಗೆ ಬಂದಂತೆ ಸಂವಿಧಾನದಲ್ಲಿ ಬದಲಾವಣೆ ಮಾಡಬಹುದೆ ?
೩. ತುರ್ತು ಪರಿಸ್ಥಿತಿ ಇರುವಾಗ ಸಂಸತ್ತಿನಲ್ಲಿ ಕೇವಲ ತುರ್ತು ಪರಿಸ್ಥಿತಿಯ ದೃಷ್ಟಿಯಿಂದಲೇ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಇರುವಾಗ ಸಂವಿಧಾನದ ಪ್ರಸ್ತಾವನೆಯಲ್ಲಿ ಸರಕಾರ ಬದಲಾವಣೆ ಮಾಡಬಹುದೆ ?
೪. ೧೯೭೬ ರಲ್ಲಿ ಅಂದರೆ ಯಾವಾಗ ಸಂವಿಧಾನದ ಸಭೆ ಅಸ್ತಿತ್ವದಲ್ಲಿ ಕೂಡ ಇರಲಿಲ್ಲ ಆಗ ಸಂಸತ್ತು ಸಂವಿಧಾನದ ಪ್ರಸ್ತಾವನೆಯಲ್ಲಿ ಬದಲಾವಣೆ ಮಾಡಬಹುದೇ ?
೫. ಈ ರೀತಿ ಪ್ರಸ್ತಾವನೆಯಲ್ಲಿ ‘ಸಾಮ್ಯವಾದ’ ಅಥವಾ ‘ವಸಾಹತುವಾದ’ ಈ ಶಬ್ದಗಳು ಸೇರಿಸಬಹುದೇ ?
ನ್ಯಾಯವಾದಿ ಉಪಾಧ್ಯಾಯ ಇವರು ಮಾತು ಮುಂದುವರಿಸಿ, ತುರ್ತು ಪರಿಸ್ಥಿತಿಯ ಸಮಯದಲ್ಲಿ ಮತ್ತು ಲೋಕಸಭೆಯ ಕಾರ್ಯಕಲಾಪ ಮುಗಿದ ನಂತರ ಪ್ರಸ್ತಾವನೆಯಲ್ಲಿ ಮಾಡಿರುವ ತಿದ್ದುಪಡಿ ಮಹತ್ವಪೂರ್ಣ ಸಂವಿಧಾನಾತ್ಮಕ, ಕಾನೂನು ಪ್ರಕಾರ ಮತ್ತು ನೈತಿಕ ಆತಂಕ ನಿರ್ಮಾಣ ಮಾಡುತ್ತದೆ. ಇದು ಪ್ರಜಾಪ್ರಭುತ್ವದ ಆಡಳಿತದ ತತ್ವಕ್ಕೆ ಸವಾಲು ಒಡ್ಡುತ್ತದೆ, ಸಂವಿಧಾನ ತಿದ್ದುಪಡಿಯ ಸಿಂಧುತ್ವದ ಕುರಿತು ಮತ್ತು ಪ್ರಕ್ರಿಯೆ ಕುರಿತು ಪ್ರಶ್ನಿಸಲಾಗುತ್ತದೆ, ಹಾಗೂ ಸಂವಿಧಾನದ ಅಖಂಡತೆ ಮತ್ತು ಪಾವಿತ್ರತೆ ಕಾಪಾಡುವುದು ಅಗತ್ಯವಾಗಿರುತ್ತದೆ. ಸಂವಿಧಾನದ ಮೂಲಭೂತ ಸಂರಚನೆಯ ಪ್ರತಿಬಿಂಬ ಎಂದು ಪ್ರಸ್ತಾವನೆ ಇದು ಅನಿಯಂತ್ರಿತ ಬದಲಾವಣೆಯಿಂದ ಸಂರಕ್ಷಿಸಬೇಕು. ಇದರಲ್ಲಿ ಯಾವುದೇ ಸುಧಾರಣೆ ಮೂಲಭೂತ ತತ್ವಗಳು ಮತ್ತು ಪ್ರಜಾಪ್ರಭುತ್ವದ ಆದರ್ಶ ಇವುಗಳನ್ನು ಸಮರ್ಪಕ ಇರುವುದನ್ನು ದೃಢಪಡಿಸಬೇಕು. ಇದರ ಮೇಲೆ ನಮ್ಮ ಪ್ರಜಾಪ್ರಭುತ್ವ ಆಡಳಿತ ಆಧಾರಿತವಾಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಮೂಲತಃ ಈ ಶಬ್ದ ಅಂದಿನ ಕಾಂಗ್ರೆಸ್ ಸರಕಾರದಿಂದ ಸಂವಿಧಾನ ತಿದ್ದುಪಡಿ ಮಾಡುತ್ತಾ ಸೇರಿಸಿತ್ತು. ಆದ್ದರಿಂದ ಈ ಶಬ್ದ ಪ್ರಸ್ತುತ ಕೇಂದ್ರ ಸರಕಾರವು ಮತ್ತೆ ಸಂವಿಧಾನ ತಿದ್ದುಪಡಿ ಮಾಡಿ ತೆಗೆದು ಹಾಕಬೇಕು ! |