‘ನಾವು ೪೦ ಕೋಟಿ ಇದ್ದೇವೆ, ನಮ್ಮನ್ನು ದುರ್ಬಲರೆಂದು ತಿಳಿಯಬೇಡಿ !’ (ಯಂತೆ)

ಮಥುರಾದ ದೇವಸ್ಥಾನದ ವಿಷಯದಲ್ಲಿ ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯರವರ ಹೇಳಿಕೆಗೆ ಸಮಾಜವಾದಿ ಪಕ್ಷದ ಸಂಸದರಾದ ಶಫಿಕುರರ್ಹಮಾನರ ಬೆದರಿಕೆ !

ಇಂತಹ ಬೆದರಿಕೆಯೊಡ್ಡಿ ಬರ್ಕರವರು ಹಿಂದೂಗಳನ್ನು ಬೆದರಿಸಲು ಪ್ರಯತ್ನಿಸುತ್ತಿದ್ದಾರೆ, ಇದನ್ನು ನೋಡಿದಾಗ ಉತ್ತರಪ್ರದೇಶದ ಸರಕಾರವು ಅವರ ಮೇಲೆ ಕಾರ್ಯಾಚರಣೆ ಮಾಡಬೇಕು !

ಅಯೋಧ್ಯೆ, ಮಥುರಾ ಮತ್ತು ಕಾಶಿಯಲ್ಲಿ ಹಿಂದೂಗಳ ಪವಿತ್ರ ದೇವಸ್ಥಾನಗಳ ಮೇಲೆ ಮೊಘಲರು ಆಕ್ರಮಣ ಮಾಡಿ ಅಲ್ಲಿ ಮಸೀದಿಗಳನ್ನು ಕಟ್ಟಿದ್ದಾರೆ, ಇದು ಇತಿಹಾಸವಾಗಿದೆ ಮತ್ತು ಹಿಂದೂಗಳ ಈ ಭೂಮಿಯನ್ನು ಪುನಃ ಪಡೆಯುವ ಅಧಿಕಾರವು ಹಿಂದೂಗಳಿಗಿದೆ ಮತ್ತು ಉತ್ತರಪ್ರದೇಶ ಸರಕಾರವೂ ಇದಕ್ಕಾಗಿ ಪ್ರಯತ್ನಿಸುತ್ತಿದ್ದರೆ ಅದರಲ್ಲಿ ತಪ್ಪೇನಿದೆ ? ಬದಲಾಗಿ ಈ ರೀತಿಯಲ್ಲಿ ಬೆದರಿಸುವವರ ಮೇಲೆ ಸರಕಾರ ಕಾರ್ಯಾಚರಣೆ ಮಾಡಬೇಕು !

ಸಂಭಲ (ಉತ್ತರ ಪ್ರದೇಶ) – ಮಥುರಾದಲ್ಲಿ ಅಯೋಧ್ಯೆಯಂತಹ ಸ್ಥಿತಿಯನ್ನು ಉದ್ಭವಿಸಲು ಪ್ರಯತ್ನಿಸಲಾಗುತ್ತಿದೆ. ಭಾರತದಲ್ಲಿ ೪೦ ಕೋಟಿಗಿಂತಲೂ ಹೆಚ್ಚು ಮುಸಲ್ಮಾನರಿದ್ದಾರೆ. ಅವರನ್ನು ದುರ್ಬಲರೆಂದು ತಿಳಿಯಬೇಡಿ. ಈಗ ನಡೆಯುತ್ತಿರುವುದು ಕಾನೂನಿನ ವಿರುದ್ಧವಾಗಿದೆ. ಮೌರ್ಯರು ಶಕ್ತಿಯ ಆಧಾರದಲ್ಲಿ ಹೇಳಲು ಪ್ರಯತ್ನಿಸುತ್ತಿದ್ದಾರೆ. ಅವರು ಮುಸಲ್ಮಾನರನ್ನು ದುರ್ಬಲರೆಂದು ತಿಳಿಯುತ್ತಿದ್ದಾರೆ. ಆಗ ಅವರು ಮಸೀದಿಯನ್ನು ಬೀಳಿಸಿ ದೇವಸ್ಥಾನವನ್ನು ನಿರ್ಮಿಸಿದ್ದರು ಮತ್ತು ಈಗ ಮಥುರೆಯ ಈದ್ಗಾಹ ಮಸೀದಿಯನ್ನು ಬೀಳಿಸಲು ನೋಡುತ್ತಿದ್ದಾರೆ, ಆದರೆ ನಾವು ಹೀಗೆ ಆಗಲು ಬಿಡುವುದಿಲ್ಲ. ರೈತರು ಆಂದೋಲನದಲ್ಲಿ ಪ್ರಾಣ ನೀಡಿದಂತೆ ನಾವು ನಮ್ಮ ಪ್ರಾಣ ನೀಡುತ್ತೇವೆ ಎಂದು ಇಲ್ಲಿನ ಸಮಾಜವಾದಿ ಪಕ್ಷದ ಸಂಸದರಾದ ಶಫಿಕುರರ್ಹಮಾನರವರು ಬೆದರಿಕೆಯೊಡ್ಡಿದ್ದಾರೆ. ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯರವರು ಟ್ವೀಟ್ ಮಾಡಿ ‘ಅಯೋಧ್ಯೆ, ಕಾಶಿಯಲ್ಲಿ ಭವ್ಯ ದೇವಸ್ಥಾನಗಳನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದೆ ಮತ್ತು ಇದರ ನಂತರ ಮಥುರಾದಲ್ಲಿ ಸಿದ್ಧತೆ ನಡೆಯುತ್ತಿದೆ’ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸುತ್ತ ಬರ್ಕರವರು ಮೇಲಿನ ಬೆದರಿಕೆಯನ್ನು ಹಾಕಿದ್ದಾರೆ.

ಬರ್ಕರವರು ಮುಂದುವರಿದು, ‘ಭಾಜಪ ಉತ್ತರಪ್ರದೇಶದಲ್ಲಿ ಮುಂಬರುವ ಚುನಾವಣೆಯಲ್ಲಿ ಸೋಲಲಿದೆ, ಆದ್ದರಿಂದ ಇಂತಹ ಹೇಳಿಕೆಗಳನ್ನು ನೀಡಿ ಹಿಂದೂ ಮತ್ತು ಮುಸಲ್ಮಾನರನ್ನು ಕೆರಳಿಸುತ್ತಿದ್ದಾರೆ. ಇವೆಲ್ಲವನ್ನೂ ಚುನಾವಣೆಯನ್ನು ಗೆಲ್ಲಲು ಮಾಡಲಾಗುತ್ತಿದೆ’, ಎಂದಿದ್ದಾರೆ.

ಅಖಿಲೇಶ ಯಾದವರವರು ದೇವಸ್ಥಾನಗಳ ಪರ ಇದ್ದರಾ ಅಥವಾ ವಿರುದ್ಧ ? – ಕೇಶವ ಪ್ರಸಾದ ಮೌರ್ಯ ಇವರ ಪ್ರಶ್ನೆ

ಶಫಿಕುರರ್ಹಮಾನರ ಬೆದರಿಕೆಗೆ ಕೇಶವ ಪ್ರಸಾದ ಮೌರ್ಯರವರು ಉತ್ತರಿಸುತ್ತ ‘ಶಫಿಕುರರ್ಹಮಾನರವರು ಅಖಿಲೇಶ ಯಾದವರ ಗುಂಪಿನವರಾಗಿದ್ದಾರೆ. ಅಖಿಲೇಶ ಯಾದವರವರು ಮಥುರಾದಲ್ಲಿನ ದೇವಸ್ಥಾನದ ಪರ ಇದ್ದಾರಾ ಅಥವಾ ವಿರುದ್ಧ ?’ ಎಂದು ಸ್ಪಷ್ಟವಾಗಿ ಹೇಳಬೇಕು, ಎಂದಿದ್ದಾರೆ.