ಢಾಕಾ (ಬಾಂಗ್ಲಾದೇಶ) – ಅಮೇರಿಕಾದ ಸರಕಾರಿ ನ್ಯಾಯವಾದಿಗಳು ಭಾರತೀಯ ಉದ್ಯಮಿ ಗೌತಮ್ ಅದಾನಿ ಇವರ ಸಹಿತ ೭ ಜನರ ಮೇಲೆ ಅಮೆರಿಕಿ ಬಂಡವಾಳದಾರರ ೨ ಸಾವಿರ ಕೋಟಿ ರೂಪಾಯಿ ಭಾರತೀಯ ಸರಕಾರಿ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಆರೋಪಿಸುತ್ತಾ ದೂರು ದಾಖಲಿಸಿದ ನಂತರ ಈಗ ಬಾಂಗ್ಲಾದೇಶದಲ್ಲಿ ಕೂಡ ಅದಾನಿ ಇವರ ವಿರುದ್ಧ ತೊಡೆ ತಟ್ಟಿದೆ. ಬಾಂಗ್ಲಾದೇಶದ ಸರಕಾರವು ‘ಅದಾನಿ ಪವರ್’ ಸಹಿತ ಇತರ ದೊಡ್ಡ ವಿದ್ಯುತ್ ಉತ್ಪಾದನೆ ಒಪ್ಪಂದದ ವಿಚಾರಣೆ ನಡೆಸುವುದಕ್ಕಾಗಿ ಪ್ರತಿಷ್ಠಿತ ಕಾನೂನಿನ ರೀತಿಯಲ್ಲಿ ಮತ್ತು ತನಿಖಾ ಸಂಸ್ಥೆಯ ನೇಮಕ ಮಾಡುವ ನಿರ್ಣಯ ತೆಗೆದುಕೊಂಡಿದೆ. ಇದರಿಂದ ವಿದ್ಯುತ್ ಉತ್ಪಾದನೆ ಒಪ್ಪಂದದಲ್ಲಿ ಸಂಭಾವ್ಯ ಬದಲಾವಣೆ ಆಗುವುದು ಅಥವಾ ಒಪ್ಪಂದ ರದ್ದಾಗುವ ಸಾಧ್ಯತೆ ಇದೆ.
೧. ಬಾಂಗ್ಲಾದೇಶದ ಸರಕಾರವು ಒಂದು ಅರ್ಜಿಯಲ್ಲಿ, ವಿದ್ಯುತ್ ಮತ್ತು ಖನಿಜ ಸಂಸಾಧನ ಸಚಿವಾಲಯದ ರಾಷ್ಟ್ರೀಯ ಪುನರಾವಲೋಕನ ಸಮಿತಿಯು ೨೦೦೯ ರಿಂದ ೨೦೨೪ ಈ ಕಾಲಾವಧಿಯಲ್ಲಿ ಶೇಖ ಹಸೀನಾ ಇವರ ಅಧಿಕಾರದಲ್ಲಿ ಸಹಿ ಮಾಡಿರುವ ಬೃಹತ್ ವಿದ್ಯುತ್ ಉತ್ಪಾದನೆ ಒಪ್ಪಂದದ ಪುನರಾವಲೋಕನಕ್ಕಾಗಿ ಮಧ್ಯಂತರ ಸರಕಾರಕ್ಕೆ ಪ್ರತಿಷ್ಠಿತ ಸಂಸ್ಥೆಯ ನೇಮಕ ಮಾಡಲು ಶಿಫಾರಸು ಮಾಡಿದೆ. ನಾವು ಅನೇಕ ವಿದ್ಯುತ್ ಉತ್ಪಾದನಾ ಯೋಜನೆಯ ಒಪ್ಪಂದದ ವಿಚಾರಣೆ ಮಾಡುತ್ತಿದ್ದೇವೆ ಎಂದು ಹೇಳಿದೆ.
೨. ನ್ಯಾಯಮೂರ್ತಿ ಮೋಯಿನೂಲ್ ಇಸ್ಲಾಂ ಚೌದರಿ ಇವರ ನೇತೃತ್ವದಲ್ಲಿ ನ ಸಮಿತಿಯು, ಇತರ ಒಪ್ಪಂದದ ಮುಂದಿನ ವಿಶ್ಲೇಷಣೆ ಮಾಡುವುದಕ್ಕಾಗಿ ಇನ್ನೂ ಸಮಯ ಬೇಕಾಗುವುದು, ಸಮಿತಿ ಸಾಕ್ಷಿಗಳು ಸಂಗ್ರಹಿಸುತ್ತಿದೆ, ಅದರಿಂದ ಈ ಒಪ್ಪಂದದಲ್ಲಿ ಕೆಲವು ಬದಲಾವಣೆ ಅಥವಾ ಅಂತರಾಷ್ಟ್ರೀಯ ಮಧ್ಯಸ್ಥಿಕೆಯ ಕಾನೂನು ಮತ್ತು ಕಾರ್ಯಾಚರಣೆಯ ಪ್ರಕಾರ ಈ ಒಪ್ಪಂದ ರದ್ದು ಆಗಬಹುದು ಎಂದು ಹೇಳಿದೆ.
೩. ‘ಅದಾನಿ ಪವರ್’ ನ ವಕ್ತಾರ ಈ ಕುರಿತು, ನಾವು ಬಾಂಗ್ಲಾದೇಶದ ಆಂತರಿಕ ವಿಷಯಗಳ ಕುರಿತು ಮಾತನಾಡುವುದಿಲ್ಲ. ನಮ್ಮ ವಿದ್ಯುತ್ ಖರೀದಿ ಯೋಜನೆ ಕಳೆದ ೭ ವರ್ಷದಿಂದ ನಡೆಯುತ್ತಿದೆ ಮತ್ತು ಅದು ಸಂಪೂರ್ಣವಾಗಿ ಕಾನೂನು ರೀತಿಯಲ್ಲಿ ಇದೆ ಎಂದು ಹೇಳಿದರು.
ಶ್ರೀಲಂಕಾದಲ್ಲಿ ಕೂಡ ವಿಚಾರಣೆ ನಡೆಸುವ ಸಾಧ್ಯತೆ
ಶ್ರೀಲಂಕಾದಲ್ಲಿ ಅನುರಾ ಕುಮಾರ್ ದಿಸಾನಾಯಕೆ ಇವರ ನೇತೃತ್ವದಲ್ಲಿ ನೂತನ ಸರಕಾರದಿಂದ ಇಲ್ಲಿಯವರೆಗೆ ‘ಅದಾನಿ ಗ್ರೀನ್’ ಸಹ ಸಮೂಹದ ಇತರ ಯೋಜನೆಯ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಂಡಿಲ್ಲ. ಸಿಲೋವನ ಎಲೆಕ್ಟ್ರಿಕ್ ಸಿಟಿ ಬೋರ್ಡ್ ನ ವಕ್ತಾರ ಧನುಷ್ಕ ಪರಾಕ್ರಮಸಿಂಘೆ ಇವರು ಮಾತನಾಡಿ, ಈ ಪ್ರಕರಣದ ವರದಿ ಪಡೆಯುತ್ತಿದ್ದೇವೆ, ಆದರೆ ಇಲ್ಲಿಯವರೆಗೆ ಯಾವುದೂ ಅಂತಿಮ ನಿರ್ಣಯವಾಗಿಲ್ಲ ಎಂದು ಹೇಳಿದರು. ಪವನ ಊರ್ಜಾ ಯೋಜನೆಗೆ ಸಂಬಂಧಿತ ಪ್ರಸ್ತಾವ ಬರುವ ವಾರದಲ್ಲಿ ಸಚಿವ ಸಂಪುಟದಲ್ಲಿ ಪ್ರಸ್ತುತಪಡಿಸಲಾಗುವುದು. ಅಂತಿಮ ನಿರ್ಣಯ ತೆಗೆದುಕೊಳ್ಳುವ ಮೊದಲು ಸಚಿವ ಸಂಪುಟ ಅದಾನಿ ಪವನ ಉರ್ಜ ಯೋಜನೆಗೆ ಸಂಬಂಧಿತ ವಿಸ್ತೃತ ವರದಿ ಪಡೆಯುವುದು ಎಂದು ಹೇಳಿದರು.
ಸಂಪಾದಕೀಯ ನಿಲುವುಅಮೇರಿಕಾದಲ್ಲಿ ಎಲ್ಲಿಯವರೆಗೆ ಡೊನಾಲ್ಡ್ ಟ್ರಂಪ್ ಇವರ ಕೈಗೆ ಅಧಿಕಾರ ಬರುವುದಿಲ್ಲ, ಅಲ್ಲಿಯವರೆಗೆ ಟ್ರಂಪ್ ಇವರ ಬೆಂಬಲಿಗನೆಂದು ತಿಳಿಯುವ ಭಾರತ ಮತ್ತು ಭಾರತೀಯರಿಗೆ ತೊಂದರೆ ನೀಡುವ ಪ್ರಯತ್ನ ಅಮೆರಿಕದಲ್ಲಿನ ಭಾರತದ್ವೇಷಿ ಬಾಯಡೇನ್ ಸರಕಾರ ಮಾಡುತ್ತಲೇ ಇರುತ್ತದೆ, ಇದೆ ಈ ಘಟನೆಯಿಂದ ತಿಳಿದು ಬರುತ್ತಿದೆ ! |