ಬಾಂಗ್ಲಾದೇಶದಲ್ಲಿ ಹಿಂದೂ ದೇವತೆಗಳ ಮೂರ್ತಿ ಧ್ವಂಸ ಮಾಡಿದ ಛಾಯಾಚಿತ್ರವನ್ನು ಟ್ವಿಟ್ ಮಾಡಿದ್ದಕ್ಕೆ ಕೊಲಕಾತಾ ಪೊಲೀಸರಿಂದ ಹಿಂದೂ ಖಾತೆದಾರನಿಗೆ ನೋಟೀಸ್ !

ಬಾಂಗ್ಲಾದೇಶದ ಸರಕಾರವಲ್ಲ, ಬಂಗಾಲದಲ್ಲಿರುವ ಕೊಲಕಾತಾ ಪೊಲೀಸರು ಈ ವಿಷಯದ ಬಗ್ಗೆ ಓರ್ವ ಹಿಂದೂಗೆ ನೊಟೀಸ್ ನೀಡುತ್ತಾರೆ ಎಂಬುದು ಖೇದಕರ ! ಬಂಗಾಲದಲ್ಲಿರುವ ತೃಣಮೂಲ ಕಾಂಗ್ರೆಸ್ ಬಂಗಾಲದಲ್ಲಿ ಅಧಿಕಾರದಲ್ಲಿದೆಯೇ ಅಥವಾ ಬಾಂಗ್ಲಾದೇಶದಲ್ಲಿ ?- ಸಂಪಾದಕರು 

ಪ್ರತಿನಿಧಿಕ ಛಾಯಾಚಿತ್ರ

ಕೊಲಕಾತಾ (ಬಂಗಾಳ) – ಬಾಂಗ್ಲಾದೇಶದಲ್ಲಿ ಹಿಂದೂಗಳ ದೇವಾಲಯದಲ್ಲಿರುವ ದೇವತೆಗಳ ಮೂರ್ತಿಗಳನ್ನು ಧ್ವಂಸ ಮಾಡಿದ ಛಾಯಾಚಿತ್ರವನ್ನು ಟ್ವಿಟ್ ಮಾಡಿದ್ದಕ್ಕಾಗಿ ಕೊಲಕಾತಾ ಪೊಲೀಸರು ಬಂಗಾಲದ ಸಿನ್ಹಾ ಹೆಸರಿನ ಟ್ವಿಟರ್ ಖಾತೆದಾರರಿಗೆ ನೊಟೀಸ್ ಕಳುಹಿಸಿದ್ದಾರೆ. ಈ ಛಾಯಾಚಿತ್ರದೊಂದಿಗೆ ಸಿನ್ಹಾರವರು `ಹಿಂದೂಗಳು ಅಲ್ಪಸಂಖ್ಯಾತರಾದಾಗ ಈ ರೀತಿ ಆಗುತ್ತದೆ’ ಎಂದು ಬರೆದಿದ್ದರು. ಸಿನ್ಹಾರವರ ಮೇಲೆ ಕ್ರಮಕೈಗೊಳ್ಳುವಂತೆ ಕೊಲಕಾತಾದ ಸಹಾಯಕ ಪೊಲೀಸ್ ಆಯುಕ್ತರು ಆದೇಶ ನೀಡಿದ್ದಾರೆ. ಆಗಸ್ಟ್ 9 ರಂದು ಭಾರತದಲ್ಲಿನ ಕೆಲವು ದೈನಿಕಗಳು ಬಾಂಗ್ಲಾದೇಶದಲ್ಲಿನ ದೇವಾಲಯಗಳ ಮೇಲೆ ನಡೆದ ಆಕ್ರಮಣದ ಸುದ್ಧಿಯನ್ನು ಪ್ರಕಟಿಸಿದ್ದವು. ಆ ಸುದ್ಧಿಯಲ್ಲಿ ಮೂರ್ತಿಗಳ ಧ್ವಂಸ ಮಾಡಿರುವ ಛಾಯಾಚಿತ್ರವನ್ನು ಪ್ರಕಟಿಸಲಾಗಿತ್ತು. ಇದೇ ಛಾಯಾಚಿತ್ರವನ್ನು ಸಿನ್ಹಾರವರು ಪ್ರಸಾರ ಮಾಡಿದ್ದರು.