|
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ `ಇಸ್ಕಾನ’ಅನ್ನು ನಿಷೇಧಿಸಲು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಓರ್ವ ನ್ಯಾಯವಾದಿ ಅರ್ಜಿ ದಾಖಲಿಸಿದ್ದಾರೆ. ಬಾಂಗ್ಲಾದೇಶ ಸರಕಾರವು `ಇಸ್ಕಾನ’ ಇದು ಧಾರ್ಮಿಕ ಕಟ್ಟರತಾವಾದಿ ಸಂಘಟನೆಯಾಗಿದೆ’, ಎಂದು ಹೇಳಿದೆ. ತದನಂತರ ಈ ಅರ್ಜಿಯನ್ನು ಸಲ್ಲಿಸಲಾಯಿತು. ಬಳಿಕ ನ್ಯಾಯಾಲಯವು ಸರಕಾರದಿಂದ ತನಿಖೆಗೆ ಆದೇಶಿಸಿದೆ.
1. ನ್ಯಾಯಾಲಯವು ಅಡ್ವೊಕೇಟ್ ಜನರಲ್ ರಿಂದ ‘ಇಸ್ಕಾನ್’ ವಿಷಯ ಮತ್ತು `ಬಾಂಗ್ಲಾದೇಶದಲ್ಲಿ ಅದರ ಸ್ಥಾಪನೆ ಹೇಗೆ ಆಯಿತು?’ ಎನ್ನುವ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಅವರು `ಈ ಸಂಸ್ಥೆ ರಾಜಕೀಯ ಪಕ್ಷವಲ್ಲ. ಇದೊಂದು ಧಾರ್ಮಿಕ ಕಟ್ಟರತಾವಾದಿ ಸಂಘಟನೆಯಾಗಿದೆ. ಈ ವಿಷಯದಲ್ಲಿ ಸರಕಾರ ತನಿಖೆ ನಡೆಸುತ್ತಿದೆ ಎಂದು ಹೇಳಿದೆ.
2. ಉಚ್ಚ ನ್ಯಾಯಾಲಯವು ನವೆಂಬರ 28 ರಂದು ಬೆಳಿಗ್ಗೆ ವರೆಗೆ ಅಡ್ವೊಕೇಟ್ ಜನರಲ್ ಅವರಿಗೆ ಇಸ್ಕಾನ ವಿಷಯದಲ್ಲಿ ಸರಕಾರದ ನಿಲುವು ಮತ್ತು ದೇಶದ ಕಾನೂನು ಸುವ್ಯವಸ್ಥೆ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದೆ.
3. ದೇಶದ ನಗರಗಳಲ್ಲಿ ಚಿನ್ಮಯ ಪ್ರಭು ಇವರ ಬಂಧನದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಯಾವುದೇ ಅಹಿತಕರ ಪರಿಸ್ಥಿತಿಯನ್ನು ತಪ್ಪಿಸಲು ಚಿತಗಾಂವ ಮತ್ತು ರಂಗಪುರನಲ್ಲಿ ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸಲು ನಿರ್ದೇಶನ ನೀಡುವಂತೆ ಈ ಅರ್ಜಿಯಲ್ಲಿ ಕೋರಲಾಗಿದೆ. ನ್ಯಾಯಾಲಯವು ಸರಕಾರಕ್ಕೆ ಈ ಬಗ್ಗೆ ತಕ್ಷಣವೇ ನಿರ್ಣಯವನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ.
4. ಇಸ್ಕಾನ ಸದಸ್ಯ ಚಿನ್ಮಯ ಪ್ರಭು ಅವರನ್ನು ಬಂಧಿಸಿದಾಗಿನಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳಿಂದ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ. ಅವರ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ಕಾನ ಬಾಂಗ್ಲಾದೇಶ ಸರಕಾರವನ್ನು ಖಂಡಿಸುವ ವಿನಂತಿಯನ್ನು ಪ್ರಸಾರ ಮಾಡಿತ್ತು.
ಸಂಪಾದಕೀಯ ನಿಲುವು
|