ನೀವು ಹಿಂದೂಗಳನ್ನು ಏಕೆ ಕೊಲ್ಲುತ್ತಿಲ್ಲ ? – ಪಾಕಿಸ್ತಾನದಲ್ಲಿನ ಪತ್ರಕರ್ತನಿಗೆ ತನ್ನದೇ ಮಗನ ಪ್ರಶ್ನೆ

ಪಾಕಿಸ್ತಾನದಲ್ಲಿನ ಶಾಲೆಗಳಲ್ಲಿ ಕಲಿಸಲಾಗುತ್ತದೆ ಹಿಂದೂದ್ವೇಷ !

ಪಾಕಿಸ್ತಾನದಲ್ಲಿ ಕಳೆದ ಅನೇಕ ದಶಕಗಳಿಂದ ಶಾಲೆಗಳಲ್ಲಿ ಹಿಂದೂದ್ವೇಷವನ್ನು ಕಲಿಸಲಾಗುತ್ತಿದ್ದರೂ ಹಿಂದೂಗಳು ಬಹುಸಂಖ್ಯಾತರಾಗಿರುವ ಭಾರತದಲ್ಲಿನ ಇಲ್ಲಿಯವರೆಗಿನ ರಾಜಕಾರಣಿಗಳು ಅದನ್ನು ತಡೆಗಟ್ಟಲು ಯಾವುದೇ ರೀತಿ ಪ್ರಯತ್ನಿಸಿಲ್ಲ, ಎಂಬ ಸತ್ಯವನ್ನು ಅರಿಯಿರಿ! ಈಗ ಪಾಕಿಸ್ತಾನದಲ್ಲಿಯೇ ಯಾರಾದರೂ ಈ ಬಗ್ಗೆ ಮಾತನಾಡುತ್ತಿದ್ದರೆ ಅದು ಅತ್ಯಂತ ವಿರಳ ಎಂದು ಹೇಳಬಹುದು ! ಆದರೂ ಇದರಲ್ಲಿ ಬದಲಾವಣೆಯಾಗುವ ಸಾಧ್ಯತೆಯೂ ಕಡಿಮೆ ಇದೆ, ಎಂಬುದು ವಸ್ತುಸ್ಥಿತಿಯಾಗಿದೆ !

ಈಶ ನಿಂದೆಯ ಆರೋಪದಲ್ಲಿ ಜೀವಂತವಾಗಿ ಸುಟ್ಟುಹಾಕಿದ ಪ್ರಿಯಂಥಾ ಕುಮಾರಾ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಶ್ರೀಲಂಕಾದ ಓರ್ವ ನಾಗರಿಕನನ್ನು ಈಶ ನಿಂದೆಯ ಆರೋಪದಲ್ಲಿ ಜೀವಂತವಾಗಿ ಸುಟ್ಟುಹಾಕಿದ ಪ್ರಕರಣದಲ್ಲಿ ದೂರದರ್ಶನದ ಒಂದು ಕಾರ್ಯಕ್ರಮದಲ್ಲಿ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಶಿಕ್ಷಣದ ಬಗ್ಗೆ ಪ್ರಶ್ನೆ ಉದ್ಭವಿಸಿದೆ. ಕಾರ್ಯಕ್ರಮದಲ್ಲಿ ಸಹಭಾಗಿಯಾದ ಓರ್ವ ಪತ್ರಕರ್ತನು ’ಪಾಕಿಸ್ತಾನದಲ್ಲಿ ಮಕ್ಕಳಿಗೆ ಶಾಲೆಯಲ್ಲಿ ಏನು ಕಲಿಸಲಾಗುತ್ತದೆ ? ನನ್ನ ಮಗನು ಶಾಲೆಯಿಂದ ಮನೆಗೆ ಬಂದಾಗ ನನಗೆ ’ಪಾಕಿಸ್ತಾನದಲ್ಲಿ ಹಿಂದೂಗಳೂ ಇರುತ್ತಾರೆಯೇ ?’ ಎಂದು ಕೇಳಿದನು, ಅದಕ್ಕೆ ನಾನು ’ಹೌದು, ನನ್ನ ಕೆಲವು ಮಿತ್ರರು ಹಿಂದೂಗಳಾಗಿದ್ದಾರೆ’, ಎಂದು ಹೇಳಿದೆ. ಅದಕ್ಕೆ ಅವನು ನನಗೆ ’ನಾವು ಸಿಂಧನಲ್ಲಿ ವಾಸಿಸುತ್ತೇವೆ, ಹೀಗಿರುವಾಗ ನಾವು ಹಿಂದೂಗಳನ್ನು ಏಕೆ ಕೊಲ್ಲುತ್ತಿಲ್ಲ ?’ ಎಂಬ ಆಘಾತಕಾರಿ ಪ್ರಶ್ನೆಯನ್ನು ಕೇಳಿದನು. ಇದನ್ನು ಕೇಳಿ ನಾನು ಸ್ತಬ್ದನಾದೆ. ಅನಂತರ ನಾನು ಶಾಲೆಯ ಮುಖ್ಯೋಪಾದಾಯರನ್ನು ಭೇಟಿಯಾದೆನು’ ಎಂದು ಹೇಳಿದನು.

ಆ ಪತ್ರಕರ್ತನು ಮುಂದುವರೆದು ’ಶಾಲೆಯಲ್ಲಿ ನೀಡಲಾಗುವ ಶಿಕ್ಷಣವೇ ದ್ವೇಷಪೂರಿತವಾಗಿದೆ. ಇಂತಹ ಶಾಲೆಯಲ್ಲಿ ಮಕ್ಕಳು ಇನ್ನೇನು ಕಲಿಯುವರು ? ಶಾಲೆಯಲ್ಲಿ ಕಲಿಸಲಾಗುವ ವಿಷಯದ ಬಗ್ಗೆ ಈಗ ಪಾಲಕರು ಗಮನ ಹರಿಸಬೇಕು. ಕಳೆದ ೪೦-೫೦ ವರ್ಷಗಳಿಂದ ಶಾಲೆಗಳಲ್ಲಿ ಇಂತಹ ದ್ವೇಷಪೂರಿತ ಶಿಕ್ಷಣವನ್ನು ನೀಡಲಾಗುತ್ತಿದ್ದು ಈ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡುತ್ತಿಲ್ಲ’ ಎಂದು ಹೇಳಿದರು.