ಹಿಂದೂಗಳಿಗೆ ದೇವತೆಗಳ ಮೂರ್ತಿಯನ್ನು ಸ್ಥಾಪಿಸಿ ಅವುಗಳಿಗೆ ಪೂಜಿಸುವ ಅಧಿಕಾರ ನೀಡುವ ಬೇಡಿಕೆಯನ್ನು ತಿರಸ್ಕರಿಸಿದ ನ್ಯಾಯಾಲಯ

ಕುತುಬ ಮಿನಾರಿನ ಪರಿಸರದಲ್ಲಿ 27 ಹಿಂದೂ ಮತ್ತು ಜೈನ ದೇವಸ್ಥಾನಗಳನ್ನು ಕೆಡವಿ ಮಸೀದಿಯನ್ನು ಕಟ್ಟಿರುವ ಪ್ರಕರಣ

ಭೂತಕಾಲದ ತಪ್ಪು ವರ್ತಮಾನ ಮತ್ತು ಭವಿಷ್ಯದ ಶಾಂತಿಭಂಗ ಮಾಡಲು ಆಧಾರವಾಗಲಾರದು – ಸಾಕೇತ ನ್ಯಾಯಾಲಯ

 ‘ಪ್ಲೇ ಸಸ್ ಅಫ್ ವರ್ಷಿಪ್ 1991‘ ಕಾನೂನಿನ ಆಧಾರದಲ್ಲಿ ಬೇಡಿಕೆಯನ್ನು ತಿರಸ್ಕರಿಸಲಾಗಿದೆ

ನವ ದೆಹಲಿ – ದೆಹಲಿಯಲ್ಲಿನ ಕುತುಬ ಮಿನಾರದಲ್ಲಿ 27 ಹಿಂದೂ ಮತ್ತು ಜೈನ ದೇವಸ್ಥಾನಗಳಲ್ಲಿ ಪೂಜೆ ಮಾಡುವ ಅಧಿಕಾರವನ್ನು ಕೇಳುವ ಅರ್ಜಿಯನ್ನು ಸಾಕೇತ ನ್ಯಾಯಾಲಯವು ‘ಪ್ಲೇಸ್ಸ್ ಅಫ್ ವರ್ಷಿಪ್ 1991′ ನ ಕಾನೂನಿನ ಆಧಾರದಲ್ಲಿ ತಿರಸ್ಕರಿಸಿದೆ. ಈ ಬಗ್ಗೆ ಹಿಂದುತ್ವನಿಷ್ಠ ನ್ಯಾಯವಾದಿ ವಿಷ್ಣುಶಂಕರ ಜೈನರವರು ಈ ತೀರ್ಪನ್ನು ವಿರೋಧಿಸಿ ದೆಹಲಿ ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.

ಈ ಕಾನೂನಿಗನುಸಾರ ‘ಸ್ವಾತಂತ್ರ್ಯದ ಕಾಲದಲ್ಲಿ ಭಾರತದಲ್ಲಿ ಧಾರ್ಮಿಕ ಸ್ಥಳಗಳ ಸ್ಥಿತಿಯನ್ನು ಯಥಾಸ್ಥಿತಿ ಕಾಯಬೇಕು’, ಎಂದು ಹೇಳಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ. ಇದಕ್ಕೆ ಕೇವಲ ರಾಮಜನ್ಮ ಭೂಮಿಯ ಪ್ರಕರಣವು ಅಪವಾದವಾಗಿತ್ತು.

1. ನ್ಯಾಯಾಲಯವು ‘ಭೂತಕಾಲದಲ್ಲಿ ಮಾಡಿದ ತಪ್ಪನ್ನು ವರ್ತಮಾನ ಮತ್ತು ಭವಿಷ್ಯದ ಶಾಂತಿಯನ್ನು ಭಂಗಗೊಳಿಸಲು ಆಧಾರವಾಗಿಸಲು ಸಾಧ್ಯವಿಲ್ಲ. ಸರಕಾರವು ಒಮ್ಮೆ ಯಾವುದಾದರೂ ಸ್ಥಳವನ್ನು ಸ್ಮಾರಕವೆಂದು ಘೋಷಿಸಿದರೆ ಜನರು ಅಲ್ಲಿ ಧಾರ್ಮಿಕ ಕೃತಿಗಳನ್ನು ಮಾಡಲು ಅನುಮತಿ ನೀಡಬೇಕು’ ಎಂಬ ಬೇಡಿಕೆಯನ್ನು ನೀಡಲು ಸಾಧ್ಯವಿಲ್ಲ’ ಎಂದು ಹೇಳಿದೆ.

2. ಕಳೆದ ವರ್ಷ ದಾಖಲಿಸಲಾದ ಈ ಅರ್ಜಿಯಲ್ಲಿ ಕುತುಬ ಮಿನಾರಿನ ಪರಿಸರದಲ್ಲಿ ಹಿಂದೂ ಮತ್ತು ಜೈನರ 27 ದೇವಸ್ಥಾನಗಳಲ್ಲಿ ಪೂಜೆ ಮಾಡಲು ಅನುಮತಿ ನೀಡಬೇಕು. ಇಲ್ಲಿ ಜೈನ ತೀರ್ಥಂಕರ ಋಷಭದೇವ, ಹಾಗೆಯೇ ಭಗವಾನ ವಿಷ್ಣುವಿನ ಪ್ರಮುಖ ದೇವಸ್ಥಾನಗಳಿದ್ದವು. ಇವುಗಳೊಂದಿಗೆ ಶ್ರೀ ಗಣೇಶ, ಭಗವಾನ ಶಿವ, ಶ್ರೀ ಪಾರ್ವತಿ ದೇವಿ, ಶ್ರೀ ಹನುಮಾನ ಮುಂತಾದ ದೇವತೆಗಳ ದೇವಸ್ಥಾನಗಳಿದ್ದವು. ಈ ದೇವಸ್ಥಾನಗಳನ್ನು ಕೆಡವಿ ಅಲ್ಲಿ ಮಸೀದಿಗಳನ್ನು ಕಟ್ಟಲಾಗಿದೆ. ಇಲ್ಲಿ ಪುನಃ ದೇವತೆಗಳ ಮೂರ್ತಿಯನ್ನು ಸ್ಥಾಪಿಸಿ ಹಿಂದೂಗಳಿಗೆ ಪೂಜೆ ಮಾಡುವ ಅಧಿಕಾರ ನೀಡಬೇಕು, ಎಂದು ಹೇಳಲಾಗಿತ್ತು.