ಚಂದಿಗಡದಲ್ಲಿ ೨ ಬಾಂಬ್ ಸ್ಫೋಟಗಳು : ಯಾವುದೇ ಪ್ರಾಣಹಾನಿ ಇಲ್ಲ

ಚಂದಿಗಡ – ಇಲ್ಲಿನ ಸೆಕ್ಟರ್-೨೬ ನ ‘ಸೇವ್ಹಿಲ ಬಾರ ಅಂಡ ಲೌಂಜ ಕ್ಲಬ’ ಹಾಗೂ `ಡಿ ಒರಾ ಕ್ಲಬ’ ಈ ಎರಡು ಸ್ಥಳಗಳಲ್ಲಿ ಬೆಳಿಗ್ಗೆ ಬಾಂಬ್ ಸ್ಫೋಟ್ ನಡೆದಿದೆ. ಇದರಲ್ಲಿ ಒಂದು ಕ್ಲಬ್ಬಿನ ಕಿಟಕಿಯ ಗಾಜುಗಳು ಒಡೆದಿವೆ. ಬಾಂಬಸ್ಪೋಟದ ಸಮಯದಲ್ಲಿ ಎರಡೂ ಕಟ್ಟಡಗಳು ಮುಚ್ಚಿದ್ದವು. ಆದುದರಿಂದ ಈ ಸ್ಪೋಟಗಳಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಈ ಸ್ಪೋಟವನ್ನು ಭಯ ಹುಟ್ಟಿಸುವುದಕ್ಕಾಗಿ ಮಾಡಿರಬಹುದೆಂದು ಹೇಳಲಾಗುತ್ತಿದೆ. ಎರಡು ಕ್ಲಬಗಳ ನಡುವೆ ೩೦ ಮೀಟರ್ ಅಂತರವಿದೆ. `ಸೇವ್ಹಿಲ ಬಾರ ಅಂಡ ಲಾವುಂಜ ಕ್ಲಬ’ ಇದು ಪ್ರಸಿದ್ಧ `ರಾಪರ್’ (ವಿದೇಶಿ ಗಾಯನದ ವಿಧ) ಬಾದಶಾಹ ಇವರದ್ದಾಗಿದೆ. ಪೊಲೀಸರು ಈ ಸ್ಫೋಟದ ತನಿಖೆ ನಡೆಸುತ್ತಿದ್ದಾರೆ.

ಇಲ್ಲಿ ಬಾಂಬ್ ಎಸೆದಿರುವ ಯುವಕನು ಬೈಕ್ ನಲ್ಲಿ ಬಂದಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. `ದೇಸೀ ಬಾಂಬ್’ ಸಿಡಿದಿರಬಹುದು, ಎಂದು ಪೊಲೀಸರು ಅನುಮಾನಿಸಿದ್ದಾರೆ. ಪೊಲೀಸರು ನಷ್ಟ ಪರಿಹಾರದ ದೃಷ್ಟಿಯಿಂದ ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ .

ಸ್ಪೋಟದ ಹೊಣೆ ಹೊತ್ತಿದೆ ಲಾರೆನ್ಸ್ ಬಿಷ್ಣೋಯಿ ಗುಂಪು !

ರೌಡಿ ಲಾರೆನ್ಸ್ ಬಿಷ್ಣೋಯಿಯ ಗುಂಪಿನ ಗೋಲ್ಡಿ ಬ್ರಾರ ಮತ್ತು ರೋಹಿತ ಗೋದಾರ ರವರು ಬಾಂಬ್ ಸ್ಫೋಟದ ಹೊಣೆ ಹೊತ್ತಿದ್ದಾರೆ. ಇಬ್ಬರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಹೊಣೆ ಹೊತ್ತುಕೊಂಡಿದ್ದಾರೆ. ಅವರು `ಈ ಕ್ಲಬ್ `ರಾಪರ್’ ಬಾದಶಾಹನದ್ದಾಗಿದೆ. ಅವನನ್ನು ಹಣ ವಸೂಲಿಗಾಗಿ ಕರೆಯಲಾಗಿತ್ತು; ಆದರೆ ಅವನು ಅದನ್ನು ಕೇಳಲಿಲ್ಲ. ಅವನು ನಮ್ಮ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ ಆದ್ದರಿಂದ ಅವನ ಕಿವಿಗಳು ಕೇಳಿಸುವಂತೆ ಮಾಡಿದೆವು, ಎಂದು ಹೇಳಿಕೆ ನೀಡಿದ್ದಾರೆ.