Bangladesh Lawyer Killed: ಚಿತ್ತಗಾಂವ್ ನಲ್ಲಿ (ಬಾಂಗ್ಲಾದೇಶ) ಮುಸಲ್ಮಾನ ನ್ಯಾಯವಾದಿಯ ಹತ್ಯೆ !

ಸರಕಾರದಿಂದ ವಿಚಾರಣೆಗೆ ಆದೇಶ

ಢಾಕಾ (ಬಾಂಗ್ಲಾದೇಶ) – ಇಸ್ಕಾನ್ ನ ಸದಸ್ಯ ಚಿನ್ಮಯ ಕೃಷ್ಣ ದಾಸ್ ಪ್ರಭು ಬಂಧನದ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳಿಂದ ಪ್ರತಿಭಟನೆಗಳು ಮುಂದುವರೆದಿದೆ. ಅವರ ಮೇಲೆ ಮತಾಂಧರು ದಾಳಿ ಮಾಡುತ್ತಿದ್ದಾರೆ. ಚಿತ್ತಗಾಂವ್ ನಲ್ಲಿ ನಡೆದ ಇಂತಹ ಒಂದು ದಾಳಿಯ ಸಂದರ್ಭದಲ್ಲಿ ವಕೀಲ ಸೈಫುಲ್ ಇಸ್ಲಾಂ ಆರಿಫ್ ರವರ ಹತ್ಯೆ ಮಾಡಲಾಗಿದೆ. ಈ ಹತ್ಯೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಈ ಹತ್ಯೆಯ ನಂತರ, ವಕೀಲರ ಸಂಘವು ನವೆಂಬರ್ 27 ರಂದು ನ್ಯಾಯಾಲಯದ ಕಲಾಪವನ್ನು ಮುಚ್ಚಿತ್ತು.

ಬಾಂಗ್ಲಾದೇಶ ಸರಕಾರದ ಮುಖ್ಯ ಸಲಹೆಗಾರ ಪ್ರೊ. ಮಹಮ್ಮದ್ ಯೂನಸ್ ಅವರು ವಕೀಲ ಸೈಫುಲ್ ರವರ ಹತ್ಯೆಯನ್ನು ಖಂಡಿಸುತ್ತಾ ತನಿಖೆ ಮತ್ತು ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. ಅವರು ಜನರಿಗೆ ಯಾವುದೇ ಅಹಿತಕರ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ಶಾಂತವಾಗಿರುವಂತೆ ಮನವಿ ಮಾಡಿದರು. ಅವರು ಕಾನೂನಿನ ಕಾರ್ಯ ಮಾಡುವ ಸಂಸ್ಥೆಗಳಿಗೆ ನಗರದಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಆದೇಶ ನೀಡಿದ್ದಾರೆ.
ವಕೀಲರ ಸಂಘದಿಂದ ಹಿಂದೂಗಳ ಮೇಲೆ ಕೊಲೆಯ ಆರೋಪ

ಚಿತ್ತಗಾಂಗ್ ವಕೀಲರ ಸಂಘದ ​​ಅಧ್ಯಕ್ಷ ನಜೀಮ್ ಉದ್ದೀನ್ ಚೌಧರಿ ಅವರು, ಹಿಂದೂ ಪ್ರತಿಭಟನಾಕಾರರು ಸೈಫುಲ್ ಅವರನ್ನು ಕೋಣೆಯಲ್ಲಿ ಬಂಧಿಸಿ ಅವರ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.