ಮಂಡ್ಯ – ಪ್ರಸ್ತುತ ಹಿಂದುತ್ವದ ಬಗ್ಗೆ ತಪ್ಪಾದ ಪ್ರಚಾರ ಹೆಚ್ಚಾಗುತ್ತಿದೆ. ಹಿಂದುತ್ವವನ್ನು ಎಲ್ಲರೂ ತಿಳಿದುಕೊಳ್ಳಬೇಕು. ನಮಗೆ ವಿರೋಧವಾದರೆ ಅದನ್ನು ನಾವು ಸಹಿಸುವೆವು; ಆದರೆ ನಮ್ಮ ಧರ್ಮಕ್ಕೆ ಯಾರಾದರೂ ವಿರೋಧಿಸಿದರೆ, ಅದನ್ನು ಸಹಿಸುವುದಿಲ್ಲ ಎಂದು ಭಾಜಪದ ಸಂಸದ ಯದುವೀರ ಕೃಷ್ಣದತ್ತ ಒಡೆಯರ್ ಎಚ್ಚರಿಕೆ ನೀಡಿದ್ದಾರೆ. ಮಂಡ್ಯ ತಾಲೂಕಿನ ತಗ್ಗಹಳ್ಳಿ ಗ್ರಾಮದ ದೇವಸ್ಥಾನ ಪರಿಸರದಲ್ಲಿ ಆಯೋಜಿಸಿರುವ ಭಾಜಪದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ‘ರೈತರ ಭೂಮಿಯನ್ನು ವಕ್ಫ್ ಬೋರ್ಡ್ ನುಂಗುತ್ತಿದೆ, ಅದರ ವಿರುದ್ಧ ನಾವು ಹೋರಾಡುವೆವು’, ಎಂದೂ ಕೂಡ ಅವರು ಸ್ಪಷ್ಟಪಡಿಸಿದರು.