ಉತ್ತರಪ್ರದೇಶದಲ್ಲಿ ಭಾಜಪದ ಸರಕಾರವಿರುವಾಗ ಈ ರೀತಿಯ ಘಟನೆ ನಡೆಯುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !
ಸಂಭಲ(ಉತ್ತರಪ್ರದೇಶ) – ಗುನ್ನೌರ ಕ್ಷೇತ್ರದ ಶ್ರೀ ಚಾಮುಂಡಾದೇವಿಯ ದೇವಸ್ಥಾನದಲ್ಲಿನ ಮೂರ್ತಿಯನ್ನು ದುಷ್ಕರ್ಮಿಗಳಿಂದ ಧ್ವಂಸ ಮಾಡಿರುವ ಘಟನೆ ಡಿಸೆಂಬರ್ ೫ ರ ರಾತ್ರಿ ನಡೆದಿದೆ. ಬೆಳಗ್ಗೆ ಭಕ್ತರು ದೇವಸ್ಥಾನಕ್ಕೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ವಿಷಯವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಘಟನೆ ಕಳ್ಳತನದ ಉದ್ದೇಶವಾಗಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರಿಂದ ಪೊಲೀಸರು ಬಿದಿ ಭದ್ರತೆ ಒದಗಿಸಲಾಗಿದೆ. ‘ಆರೋಪಿಗಳನ್ನು ಆದಷ್ಟು ಬೇಗನೆ ಬಂಧಿಸಲಾಗುವುದು’, ಎಂದು ಪೊಲೀಸರು ಆಶ್ವಾಸನೆ ನೀಡಿದ್ದಾರೆ. ‘ಇಂತಹ ಘಟನೆಗಳು ಈ ಮೊದಲು ನಡೆದಿದೆ; ಆದರೆ ಪೊಲೀಸರು ಯಾರನ್ನೋ ಬಂಧಿಸಿ ಕ್ರಮ ಕೈಗೊಂಡಿರುವಂತೆ ತೋರಿಸುತ್ತಾರೆ, ಎಂದು ಸ್ಥಳೀಯರು ಆರೋಪಿಸಿದ್ದಾರೆ. (ಇಂತಹ ಪೊಲೀಸರನ್ನು ಸರಕಾರ ಕೆಲಸದಿಂದ ತೆಗೆದುಹಾಕಿ ಕಾರಾಗೃಹ ಅಟ್ಟಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ. ! – ಸಂಪಾದಕರು)
संभल: चामुंडा मंदिर में घुसकर अराजक तत्वों ने मूर्तियाँ तोड़ी, हिंदुओं में आक्रोश#UttarPradeshNews https://t.co/PAklMRk5p2
— ऑपइंडिया (@OpIndia_in) December 6, 2021