ಸಂಪಾದಕೀಯ
ಮುಸಲ್ಮಾನರನ್ನು ಓಲೈಸುವಲ್ಲಿ ಹಿಂದೂಗಳನ್ನು ದ್ವೇಷಿಸುವುದರಲ್ಲಿಯೇ ಇಡೀ ಜೀವನ ಸವೆಸಿದ ಕಾಂಗ್ರೆಸ್‌ನ ಅಂತ್ಯ ಈಗ ಗೋಚರವಾಗುತ್ತಿದೆ. ಕಳೆದ ೮ ವರ್ಷಗಳಿಂದ ಇದು ಇನ್ನಷ್ಟು ತೀವ್ರವಾಗಿ ದೇಶಕ್ಕೆ ಅನುಭವಿಸಲು ಸಿಗುತ್ತಿದೆ. ಒಂದೆಡೆ ನರೇಂದ್ರ ಮೋದಿಯವರ ನೇತೃತ್ವದಲ್ಲಿ ೨೦೧೪ ರಲ್ಲಿ ‘ಕಾಂಗ್ರೇಸ್‌ಮುಕ್ತ ಭಾರತ’ದ ಬುನಾದಿ ಹಾಕಿದ ನಂತರ ದೇಶಕ್ಕೆ ‘ನಿಜವಾದ ಸ್ವಾತಂತ್ರ್ಯವು ಸಿಕ್ಕಿದೆ ಎಂದು ಹೇಳಲಾಗುತ್ತಿದೆ ಮತ್ತೊಂದೆಡೆ ಕಾಂಗ್ರೆಸ್ ತನ್ನ ಕಾಲುಗಳ ಮೇಲೆ ಕಲ್ಲು ಹಾಕಿಕೊಂಡು ಇತಿಹಾಸದಲ್ಲಿ ಜಮೆಯಾಗುವ ಹಾದಿಯಲ್ಲಿ ದಾಪುಗಾಲಿಡುತ್ತಿದೆ. ಕಳೆದ ಕೆಲವು ದಿನಗಳಿಂದ ಈ ಗುಂಪಿನ ಮುಖಂಡರು ಈ ಬಗ್ಗೆ ನುಡಿಮುತ್ತು ಉದುರಿಸಿದ್ದಾರೆ. ಕಾಂಗ್ರೆಸ್‌ನ ನಾಯಕ ಸಲ್ಮಾನ್ ಖುರ್ಶೀದ್ ಇವರು ತಮ್ಮ ಪುಸ್ತಕದಲ್ಲಿ ಹಿಂದುತ್ವವನ್ನು ಇಸ್ಲಾಮಿಕ್ ಸ್ಟೇಟ್ ಮತ್ತು ಬೊಕೊ ಹರಾಮ ಈ ಜಿಹಾದಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಹೋಲಿಸಿದ್ದರಿಂದ ಟೀಕೆಗೆ ಒಳಗಾಗಿದ್ದಾರೆ. ಇದು ‘ಡಿಸ್‌ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ (ಹಿಂದುತ್ವದ ಜಾಗತಿಕ ಸ್ತರದಲ್ಲಿ ಉಚ್ಚಾಟನೆ) ಈ ಸಂಚನ್ನು ಮುಂದುವರಿಸುವ ಖುರ್ಶಿದರ ಕುತಂತ್ರವಾಗಿದೆ.
ದೌರ್ಜನ್ಯಗಳ ಪರಮಾವಧಿ !
ಒಂದು ವೇಳೆ ಹಿಂದುತ್ವವು ಅಷ್ಟು ಅಪಾಯಕಾರಿ ಮತ್ತು ಸಂಕುಚಿತವಾಗಿರುತ್ತಿದ್ದರೆ, ಈ ದೇಶದಲ್ಲಿ ಭಾರತವಿರೋಧಿ ಮುಸಲ್ಮಾನರಷ್ಟೇ ಅಲ್ಲದೇ ಹಿಂದೂಗಳನ್ನು ಯಾವಾಗಲೂ ಗೌಣವೆಂದು ಪರಿಗಣಿಸುವ ಕಾಂಗ್ರೆಸ್ ಮತ್ತು ಅದರ ಮುಖಂಡರೂ ರಾಜಕೀಯವಷ್ಟೇ ಅಲ್ಲದೇ ಪ್ರತ್ಯಕ್ಷ ನಾಶವಾಗುತ್ತಿದ್ದರು ಎಂಬುದನ್ನು ಅವರು ಮರೆತಿದ್ದಾರೆ. ಈ ರೀತಿಯ ಅನುಭವವು ಜಿಹಾದಿ ಸಂಕಟಗಳನ್ನು ಎದುರಿಸುವ ಅಫಗಾನಿಸ್ತಾನ, ಇರಾಕ್ ಮತ್ತು ಸಿರಿಯಾದಲ್ಲಿನ ಪರಿಸ್ಥಿತಿಯನ್ನು ನೋಡಿದಾಗ ಗಮನಕ್ಕೆ ಬರುತ್ತದೆ. ೨೦೧೪-೧೫ ರಲ್ಲಿ ಇರಾಕ್ ಮತ್ತು ಸಿರಿಯಾ ಈ ಇಸ್ಲಾಮಿ ದೇಶಗಳಲ್ಲಿ ‘ಇಸ್ಲಾಮಿಕ್ ಸ್ಟೇಟ್’ನ ಜನರು ನುಸುಳಲು ಪ್ರಾರಂಭಿಸಿದಾಗ, ಅದರಲ್ಲಿ ಅನೇಕರು ರಾಜಕೀಯ ಮುಖಂಡರು, ಸರಕಾರಿ ಅಧಿಕಾರಿಗಳು, ನ್ಯಾಯಾಧೀಶರರಾಗಿದ್ದವರು ಇದ್ದರು. ಇಸ್ಲಾಮಿಕ್ ಸ್ಟೇಟ್ ಕಳೆದ ಕೆಲವು ವರ್ಷಗಳಲ್ಲಿ ಇರಾಕ್ ಮತ್ತು ಸಿರಿಯಾ ಅಷ್ಟೇ ಅಲ್ಲದೇ ಯುರೋಪಿನ ಬೆಲ್ಜಿಯಮ್, ಯುನೈಟೆಡ್ ಕಿಂಗ್‌ಡಮ್, ಸ್ಪೇನ್, ಫ್ರಾನ್ಸ್, ಡೆನ್‌ಮಾರ್ಕ್, ಜರ್ಮನಿ, ಫಿನ್‌ಲ್ಯಾಂಡ್, ಆಸ್ಟ್ರಿಯಾ, ತುರ್ಕಸ್ತಾನ್, ಆಫ್ರಿಕಾ, ಖಂಡದಲ್ಲಿನ ಲಿಬಿಯಾ, ಟ್ಯೂನಿಶಿಯಾ, ಇಜಿಪ್ತ್, ನೈಜೆರಿಯಾ; ಏಶಿಯಾ ಖಂಡದ ಲೆಬೆನಾನ್, ಯೆಮೆನ್, ಕುವೆತ್, ಕಝಾಕಿಸ್ತಾನ್, ಅಫಗಾನಿಸ್ತಾನ್, ಪಾಕಿಸ್ತಾನ್, ಬಾಂಗ್ಲಾದೇಶ, ಶ್ರೀಲಂಕಾ, ಫಿಲಿಪಿನ್ಸ್, ಇಂಡೋನೆಶಿಯಾ, ಮಲೇಶಿಯಾ; ಹಾಗೆಯೇ ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್ ಇಂತಹ ಅನೇಕ ದೇಶಗಳಲ್ಲಿ ಸಾವಿರಾರು ಜನರನ್ನು ಕೊಂದು ಹಾಕಿದೆ. ಅವರಿಂದ ರಕ್ಷಿಸಿಕೊಳ್ಳಲು ತಮ್ಮ ಜೀವವನ್ನು ಮುಷ್ಠಿಯಲ್ಲಿಟ್ಟುಕೊಂಡು ಒಂದೂವರೆ ಕೋಟಿಗಿಂತ ಹೆಚ್ಚು ಜನರು ಇತರ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ದೌರ್ಜನ್ಯದ ಪರಮಾವಧಿ ಏನಿರಬಹುದು ? ಎಂಬುದಕ್ಕೆ ಈ ೨೧ ನೇ ಶತಮಾನದ ಇದೊಂದು ಉದಾಹರಣೆಯೇ ಸಾಕು. ‘ಬೊಕೊ ಹರಾಮ್’ ಈ ಜಿಹಾದಿ ಭಯೋತ್ಪಾದನಾ ಸಂಘಟನೆಯು ಆಫ್ರಿಕಾದ ನೈಜೆರಿಯಾದಲ್ಲಿ ಉಗಮವಾಯಿತು. ಕಳೆದ ೧೨ ವರ್ಷಗಳಲ್ಲಿ ಸಾವಿರಾರು ಜನರನ್ನು ಕೊಂದ ಮತ್ತು ೨೦ ಲಕ್ಷ ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬೊಕೊ ಹರಾಮ್ ಈಗ ಆಫ್ರಿಕಾದ ಚ್ಯಡ್, ನೈಜರ್ ಮತ್ತು ಕ್ಯಾಮೆರುನ್ ಈ ದೇಶಗಳಲ್ಲಿಯೂ ಬೇರೂರಿದೆ. ಈ ಜಗತ್ತು ಹಸಿರು ಭಯೋತ್ಪಾದನೆಯಿಂದ ತುಂಬಿಕೊಂಡಿದೆ. ಇಂದು ಹಿಂದುತ್ವದಿಂದಾಗಿ ಎಷ್ಟು ಹಿಂದೂಯೇತರರಿಗೆ ಮತ್ತು ಮುಖ್ಯವಾಗಿ ಮಸಲ್ಮಾನರಿಗೆ ಮನೆಗಳನ್ನು ಬಿಟ್ಟು ದೇಶಾಂತರವಾಗಬೇಕಾಯಿತು ? ಎಷ್ಟು ಮುಸಲ್ಮಾನರಿಗೆ ತಮ್ಮ ಜೀವವನ್ನು ಕಳೆದುಕೊಳ್ಳಬೇಕಾಯಿತು ? ಎಂಬುದರ ಅಂಕಿಅಂಶಗಳನ್ನು ಖುರ್ಶಿದ ಸಾಹೇಬರು ಏಕೆ ಎಂದಿಗೂ ಕೊಡುವುದಿಲ್ಲ ? ಇಂದು ಭಾರತದಲ್ಲಿ ಸಾವಿರಾರು ‘ಚಿಕ್ಕ ಪಾಕಿಸ್ತಾನ’ಗಳು ಅಸ್ತಿತ್ವದಲ್ಲಿವೆ. ಅಲ್ಲಿನ ಮುಸಲ್ಮಾನರಿಗೆ ಹಿಂದುತ್ವದಿಂದಾಗಿ ತಮ್ಮ ಜೀವವನ್ನು ಕೈಯಲ್ಲಿಟ್ಟುಕೊಂಡು ಇರಬೇಕಾಗಿದೆಯೋ ಅಥವಾ ಮುಸಲ್ಮಾನನೇತರರಿಗೆ ಅಲ್ಲಿಂದ ಪಲಾಯನಗೈಯ್ಯಬೇಕಾಗಿದೆಯೋ ? ಇಂದು ಪಕ್ಕದಲ್ಲಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳು ನಿರ್ವಂಶವಾಗಿದ್ದಾರೆ. ಒಂದು ವೇಳೆ ಹಿಂದುತ್ವವು ಅಪಾಯಕಾರಿಯಾಗಿದ್ದರೆ, ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಂದ ಬಹುಸಂಖ್ಯಾತ ಮುಸಲ್ಮಾನರು ಭಯದ ವಾತಾವರಣದಲ್ಲಿರುತ್ತಿದ್ದರು. ಹಾಗಾಗದೇ ತದ್ವಿರುದ್ಧ ಭಾರತದಲ್ಲಿನ ಅಲ್ಪಸಂಖ್ಯಾತರಿಂದ ಭಾರತೀಯ ಹಿಂದೂಗಳ ಸ್ಥಿತಿ ದಯನೀಯವಾಗಿದೆ. ಆದುದರಿಂದ ಖುರ್ಶಿದರು ನೀಡಿದ ಹೇಳಿಕೆ ಸಂಪೂರ್ಣವಾಗಿ ನಿರಾಧಾರ ಮತ್ತು ಹಿಂದುತ್ವನಿಷ್ಠರ ಪಿತ್ತವು ನೆತ್ತಿಗೇರುವಂತೆ ಮಾಡುವುದಾಗಿದೆ.
ಒಂದು ವಿಚಾರಸರಣಿಯ ವಿರುದ್ಧ ಪುಸ್ತಕವನ್ನು ಬರೆದರೆ ಅದರ ಎಷ್ಟು ಮತ್ತು ಯಾವ ಸ್ತರಕ್ಕೆ ಹೋಗಿ ವಿರೋಧವಾಗಬಹುದು, ಎಂದು ಕಳೆದ ೩ ದಶಕಗಳಲ್ಲಿನ ದೊಡ್ಡ ಉದಾಹರಣೆ ಎಂದರೆ ಬ್ರಿಟೀಶ ಲೇಖಕರಾದ ಸಲ್ಮಾನ್ ರಶ್ದಿ ಇವರು ೧೯೮೮ ರಲ್ಲಿ ಬರೆದ ಇಸ್ಲಾಮ್‌ಅನ್ನು ಟೀಕಿಸುವ ‘ದಿ ಸ್ಯಾಟನಿಕ್ ವರ್ಸಸ್’ ಎಂಬ ಪುಸ್ತಕ ! ಇರಾನಿನ ಆಗಿನ ಅಧ್ಯಕ್ಷ ಅಯಾತೊಲ್ಲಾ ರುಹು-ತು-ಲ್ಲಾಹ ಖೊಮೆನಿ ಇವರು ಸ್ವತಃ ರಶ್ದಿಯವರನ್ನು ಕೊಂದು ಹಾಕಲು ಹೊರಡಿಸಿದ ಫತವಾ ಜಿಹಾದಿಗಳಲ್ಲಿನ ಮತಾಂಧತೆಯ ಅತಿರೇಕವನ್ನು ಸ್ಪಷ್ಟಪಡಿಸುತ್ತದೆ. ಆ ಸಮಯದಲ್ಲಿ ಜಿಹಾದಿಗಳು ನಿರ್ಮಿಸಿದ ವಾತಾವರಣವು ಎಷ್ಟು ಭಯಾನಕವಾಗಿತ್ತು, ಎಂದು ಹೇಳಲು ರಶ್ದಿ ಇವರಿಗೆ ತಮ್ಮ ಲೇಖನಿಯನ್ನು ಖರ್ಚು ಮಾಡಿ ‘ಜೊಸೆಫ್ ಅಂಟನ್ : ಅ ಮೆಮಾಯರ್’ ಎಂಬ ಹೆಸರಿನ ಬೇರೆ ಪುಸ್ತಕವನ್ನು ಪ್ರಕಾಶಿಸಬೇಕಾಯಿತು. ೬ ಡಿಸೆಂಬರ್ ೧೯೯೨ ರಲ್ಲಿ ಅಯೋಧ್ಯೆಯಲ್ಲಿನ ಬಾಬರಿ ಮಸೀದಿಯನ್ನು ಕೆಡವಿದಾಗ ಅದರ ಪರಿಣಾಮ ಇಸ್ಲಾಮಿ ಬಾಂಗ್ಲಾದೇಶದಲ್ಲಿ ಕಂಡು ಬಂದವು. ಆಗ ಅಲ್ಲಿನ ಹಿಂದೂ ಮಹಿಳೆಯರ ಮೇಲೆ ಮಾಡಲಾದ ಅತ್ಯಾಚಾರಗಳ ಬಗ್ಗೆ ಬೆಳಕು ಚೆಲ್ಲುವ ‘ಲಜ್ಜಾ’ ಕಾದಂಬರಿಯನ್ನು ಬರೆದ ನಂತರ ಬಾಂಗ್ಲಾದೇಶಿ ಲೇಖಕಿ ತಸ್ಲಿಮಾ ನಸರಿನ ಇವರಿಗೆ ಅನೇಕ ಜೀವಬೆದರಿಕೆಯ ಕರೆಗಳು ಬಂದವು. ಸ್ವರಕ್ಷಣೆಗಾಗಿ ನಸರಿನ ಇವರು ಮೊದಲು ಭಾರತದಲ್ಲಿ ಮತ್ತು ಈಗ ಸ್ವೀಡನ್ ನಲ್ಲಿ ಆಶ್ರಯ ಪಡೆದಿದ್ದಾರೆ. ಹಿಂದುತ್ವವು ಅಪಾಯಕಾರಿಯಾಗಿದ್ದರೆ, ಖುರ್ಶಿದ ಇವರ ಸ್ಥಿತಿ ಏನಾಗಬಹುದಿತ್ತು, ಎಂದು ಹೇಳಲು ಈ ಉದಾಹರಣೆಗಳನ್ನು ಉಲ್ಲೇಖಿಸಿರವುದು ಆವಶ್ಯಕವೆನಿಸಿತು !
ಹಿಂದುತ್ವದ ಜಾಗೃತಿ!
ಅಂದರೆ ಈಗ ಹಿಂದೂಗಳು ಶಾಂತರಾಗಿರದೇ ಹಿಂದುದ್ವೇಷಿಗಳ ವಿರುದ್ಧ ‘ಏಟಿಗೆ ಎದಿರೇಟು’ ಎಂಬ ಉತ್ತರವನ್ನು ನೀಡಲು ನೇತೃತ್ವ ವಹಿಸಬೇಕು. ಪ್ರಖರ ಹಿಂದುತ್ವನಿಷ್ಠ ಶ್ರೀ. ಕಪಿಲ ಮಿಶ್ರಾ ಇವರು ‘ಹಿಂದುತ್ವವೆಂದರೇನು ?’ ಎಂಬ ಬಗ್ಗೆ ಮನೋಹರವಾಗಿ ವರ್ಣಿಸಿದ್ದಾರೆ. ‘ಸಾವಿರಾರು ವರ್ಷಗಳಿಂದ ಹಿಂದುತ್ವವು ಭಯೋತ್ಪಾದಕರಿಗಾಗಿ ‘ಆತಂಕ’ವಾಗಿ ಉಳಿದಿದೆ, ಶಿಶುಪಾಲನ ನೂರು ಅಪರಾಧಗಳಾಗುವವರೆಗೆ ಭಗವಾನ ಶ್ರೀಕೃಷ್ಣರು ಶಾಂತವಾಗಿದ್ದರು; ಆದರೆ ೧೦೧ ನೇ ಅಪರಾಧವಾದಾಗ ಅವರು ಅವನನ್ನು ವಧಿಸಿದರು. ಇದಕ್ಕೇ ‘ಹಿಂದುತ್ವ’ವೆಂದು ಹೇಳುತ್ತಾರೆ’, ಎಂದು ಮಿಶ್ರಾ ಇವರು ಹೇಳಿದ್ದಾರೆ. ಅದೇ ರೀತಿ ಈಗ ಕಾಂಗ್ರೆಸ್‌ರೂಪಿ ಶಿಶುಪಾಲನ ರಾಜಕೀಯ ಅಂತ್ಯವನ್ನು ಮಾಡಲು ಹಿಂದೂಗಳು ಟೊಂಕ ಕಟ್ಟಿ ನಿಲ್ಲುವುದು ಆವಶ್ಯಕವಾಗಿದೆ. ಹಿಂದುತ್ವವು ಕೇವಲ ಶಬರಿಯ ಎಂಜಲು ಬೋರೆಹಣ್ಣುಗಳು ಅಥವಾ ರಾಧೆಯ ಭಕ್ತಿ ಇಷ್ಟಕ್ಕೇ ಸೀಮಿತವಾಗಿಲ್ಲ, ಎಂದು ಹಿಂದೂದ್ವೇಷಿಗಳಿಗೆ ತೋರಿಸಿ ಕೊಡುವ ಸಮಯವು ಬಂದಿದೆ !
ಅದಕ್ಕಾಗಿಯೇ ಈಗ ‘ಹಿಂದುತ್ವದ ಜಾಗೃತಿಯಾಗುವುದು’ ಕಾಲದ ಆವಶ್ಯಕತೆಯಾಗಿದೆ. ಕಾಲದ ಹೆಜ್ಜೆಯನ್ನು ಗುರುತಿಸಿ ಖುರ್ಶಿದರಂತಹವರಿಂದ ಕೂಡಿದ ಕಾಂಗ್ರೆಸ್ ಪಕ್ಷದ ಅಸ್ತಿತ್ವವನ್ನು ಕೊನೆಗೊಳಿಸಲು ಹಿಂದೂಗಳೇ ಈಗಲಾದರೂ ಸಿದ್ಧರಾಗಿರಿ !