India Expresses Concerns Hindus Safety: ಬಾಂಗ್ಲಾದೇಶವು ಹಿಂದೂಗಳ ರಕ್ಷಣೆ ಮಾಡಬೇಕು ! – ಭಾರತದಿಂದ ಮನವಿ

ನವ ದೆಹಲಿ – ಬಾಂಗ್ಲಾದೇಶದಲ್ಲಿ ‘ಸನಾತನ ಜಾಗರಣ ಜ್ಯೋತ್’ನ ನಾಯಕ ಚಿನ್ಮಯ ಕೃಷ್ಣ ದಾಸ್ ಪ್ರಭು ಅವರ ಬಂಧನ ಮತ್ತು ಜಾಮೀನು ನಿರಾಕರಣೆಯ ಬಗ್ಗೆ ನಾವು ತೀವ್ರ ಕಳವಳ ವ್ಯಕ್ತಪಡಿಸಿದ್ದೇವೆ. ಬಾಂಗ್ಲಾದೇಶದಲ್ಲಿ ಕಟ್ಟರತಾವಾದಿ ಸಂಘಟನೆಗಳು ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಡೆಸಿದ ದಾಳಿಗಳ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಅಲ್ಪಸಂಖ್ಯಾತರ ಮನೆ ಮತ್ತು ಅಂಗಡಿಗಳನ್ನು ಲೂಟಿ ಮಾಡಲಾಗಿದೆ. ಇದರೊಂದಿಗೆ ಅವರ ದೇವಾಲಯಗಳಲ್ಲಿ ಕಳ್ಳತನ, ಧ್ವಂಸ ಮತ್ತು ಅಪವಿತ್ರ ಹೀಗೆ ಅನೇಕ ಪ್ರಕರಣಗಳು ವರದಿಯಾಗಿವೆ. ಈ ಘಟನೆಗಳ ಅಪರಾಧಗಳು ಇನ್ನೂ ಮುಕ್ತವಾಗಿ ನಡೆಯುತ್ತಿರುವಾಗ ಶಾಂತಿಯುತ ಸಭೆಗಳ ಮೂಲಕ ಬೇಡಿಕೆಗಳನ್ನು ಸಲ್ಲಿಸುತ್ತಿರುವ ಓರ್ವ ಧಾರ್ಮಿಕ ಮುಖಂಡನ ಮೇಲೆ ಆರೋಪ ಮಾಡುತ್ತಿರುವುದು ಅತ್ಯಂತ ದುರದೃಷ್ಟಕರವಾಗಿದೆ. ಚಿನ್ಮಯ ಪ್ರಭು ಇವರ ಬಂಧನವನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಲ್ಲೆಗಳ ಬಗ್ಗೆಯೂ ನಾವುಚಿಂತಿತರಾಗಿದ್ದೇವೆ. ನಾವು ಬಾಂಗ್ಲಾದೇಶದ ಅಧಿಕಾರಿಗಳಿಗೆ ಹಿಂದೂಗಳ ಮತ್ತು ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುವಂತೆ ಒತ್ತಾಯಿಸುತ್ತೇವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬಾಂಗ್ಲಾದೇಶಕ್ಕೆ ಕೊಟ್ಟಿರುವ ಮನವಿಯಲ್ಲಿ ಹೇಳಿದೆ.

ಸಂಪಾದಕೀಯ ನಿಲುವು

ಭಾರತವು ಪರಮಾಣು ಸಶಸ್ತ್ರದೇಶವಾಗಿದ್ದು ಭಾರತವೇ ಬಾಂಗ್ಲಾದೇಶವನ್ನು ನಿರ್ಮಾಣ ಮಾಡಿದೆ. ಆದ್ದರಿಂದ, ಭಾರತವು ಮನವಿ ಮಾಡದೆ ಬಾಂಗ್ಲಾದೇಶಕ್ಕೆ ಹಿಂದೂಗಳ ರಕ್ಷಣೆ ಮಾಡುವ ವಿನಂತಿಸದೇ ಕಟ್ಟುನಿಟ್ಟಾದ ಆದೇಶವನ್ನು ನೀಡುವುದು ಅವಶ್ಯಕವಾಗಿದೆ. ಬಾಂಗ್ಲಾದೇಶ ಅದನ್ನು ಮಾಡದಿದ್ದರೆ, ಭಾರತವು ಸೈನ್ಯವನ್ನು ಬಾಂಗ್ಲಾದೇಶಕ್ಕೆ ನುಸುಳಿಸಬೇಕು. ಇದರಿಂದ ಜಗತ್ತಿನಾದ್ಯಂತ ಇರುವ ಹಿಂದೂಗಳಿಗೆ ‘ಏಕ್ ಹೈ ತೊ ಸೆಫ್ ಹೈ’ ಎಂಬ ಭರವಸೆ ನಿಶ್ಚಿತವಾಗಿ ಆಗುವುದು !