ಭಾಗ್ಯನಗರ (ತೆಲಂಗಾಣ) – ಹಿಂದೂ ದೇವಸ್ಥಾನಗಳನ್ನು ರಕ್ಷಿಸಬೇಕು, ಹಾಗೆಯೇ ಅವರಿಗೆ ಚರ್ಚ ಮತ್ತು ಮsIದಿಗಳಂತೆಯೇ ಸೌಲಭ್ಯಗಳನ್ನು ಒದಗಿಸಬೇಕು, ಧಾರ್ಮಿಕ ದತ್ತಿ ಕಾನೂನುಗಳನ್ನು ರದ್ದುಗೊಳಿಸಬೇಕು ಮತ್ತು ಹಿಂದೂಗಳಿಗೆ ಅವರ ದೇವಸ್ಥಾನಗಳ ನಿರ್ವಹಣೆಗೆ ಅನುಮತಿ ನೀಡಬೇಕು ಎಂದು ‘ಗ್ಲೋಬಲ್ ಹಿಂದೂ ಹೆರಿಟೇಜ್ ಫೌಂಡೇಶನ್’ ವೇದಿಕೆಯಲ್ಲಿ ವಿವಿಧ ಹಿಂದುತ್ವನಿಷ್ಠರು ಆಗ್ರಹಿಸಿದರು. ಈ ಸಂಘಟನೆಯ ವತಿಯಿಂದ ಭಾಗ್ಯನಗರದ ಸೋಮಾಜಿಗುಡದಲ್ಲಿ ಪತ್ರಕರ್ತರ ಕೋಣೆಯಲ್ಲಿ ಈ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ‘ಸನಾತನ ಧರ್ಮದ ಜೋಪಾಸನೆ, ಸಂವರ್ಧನೆ ಮತ್ತು ಸಂರಕ್ಷಣೆಗೆ ನಾವು ಬದ್ಧರಾಗಿದ್ದೇವೆ’, ಎಂದು ಅನೇಕ ಹಿಂದುತ್ವನಿಷ್ಠರು ಈ ಸಮಯದಲ್ಲಿ ಹೇಳಿದರು.
1. ಆಂಧ್ರಪ್ರದೇಶದ ಮಾಜಿ ಮುಖ್ಯ ಕಾರ್ಯದರ್ಶಿ ಶ್ರೀ. ಎಲ್.ವಿ. ಸುಬ್ರಹ್ಮಣ್ಯಂ ಅವರು ಹಿಂದೂ ದೇವಸ್ಥಾನಗಳ ನಿರ್ವಹಣೆ ಮಾಡುವ ಸರಕಾರದ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಅನೇಕ ಜಾತ್ಯತೀತರು, ನಾಸ್ತಿಕರು ಮತ್ತು ಅಧರ್ಮಿಗಳು ಯಾರಿಗೆ ಹಿಂದೂ ಧರ್ಮದ ಮೂಲ ತತ್ವಗಳೇ ತಿಳಿದಿಲ್ಲ, ಅವರು ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದ ಸರಕಾರಿ ಹುದ್ದೆಯಲ್ಲಿದ್ದಾರೆ. ಒಂದು ವೇಳೆ ಹಿಂದೂಗಳ ದೇವಸ್ಥಾನಗಳನ್ನು ಇಂತಹ ಜನರು ಮುನ್ನಡೆಸುತ್ತಿದ್ದರೆ, ಈ ದೇವಸ್ಥಾನಗಳ ಭವಿಷ್ಯ ಏನಾಗಬಹುದು, ಎನ್ನುವ ಪ್ರಶ್ನೆಯನ್ನು ಅವರು ಎತ್ತಿದರು.
2. `ಸಿ.ಬಿ.ಐ.’ನ ಮಾಜಿ ಮಹಾನಿರ್ದೇಶಕ ಎಂ. ನಾಗೇಶ್ವರ ರಾವ್ ಮಾತನಾಡಿ, “ನಾನು ‘ಸನಾತನ ಧರ್ಮರಕ್ಷಣಾ ಮಂಡಳಿ’ ಸಂಕಲ್ಪನೆಯನ್ನು ವಿರೋಧಿಸಿದೆನು; ಕಾರಣ ಈ ಮಂಡಳಿ ಹೇಗೆ ಕಾರ್ಯನಿರ್ವಹಿಸುವುದು ಮತ್ತು ಅದು ಯಾವ ರೂಪವನ್ನು ಪಡೆದುಕೊಳ್ಳಬಹುದೆಂದು ಹೇಳಲು ಸಾಧ್ಯವಿಲ್ಲ’’ ಎಂದು ಹೇಳಿದರು.
3. ಭಗವದ್ಗೀತಾ ಸಂಸ್ಥೆಯ ಸಂಸ್ಥಾಪಕರಾದ ಶ್ರೀ. ಎಲ್.ವಿ.ಎಚ್. ಗಂಗಾಧರ ಶಾಸ್ತ್ರಿ ಅವರು ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವೆಂದು ಗುರುತಿಸಬೇಕೆಂದು ಆಗ್ರಹಿಸಿದರು.
4. ವೇದ ವಿದ್ವಾಂಸರಾದ ಶ್ರೀ. ರೆಮೆಲ್ಲಾ ಅವಧಾನುಲು ಅವರು ಹಿಂದೂ ಧರ್ಮ ಪ್ರಚಾರದ ಮಹತ್ವವನ್ನು ವಿವರಿಸಿದರು.
5. ಹಿಂದೂ ಸಮಾಜವನ್ನು ಆವರಿಸಿರುವ ವ್ಯವಹಾರಿಕ ಸಮಸ್ಯೆಗಳು ಮತ್ತು ನಮ್ಮ ದೇವಸ್ಥಾನಗಳ ಅಭಿವೃದ್ಧಿಗಾಗಿ ಹಿಂದೂಗಳು ಹೇಗೆ ಪ್ರೇರೇಪಿಸಲ್ಪಡಬೇಕು ಎನ್ನುವ ವಿಷಯದಲ್ಲಿ ಪಂಕಜ ಶ್ರೀನಿವಾಸನ್ ಅವರು ವ್ಯಾಖ್ಯಾನಿಸಿದರು.
6. ಪ್ರಕಾಶರಾವ ವೆಲಾಗಪುಡಿ ಅವರು ರಾಜ್ಯದ ಮುಖ್ಯಮಂತ್ರಿ, ಧಾರ್ಮಿಕ ದತ್ತಿ ಸಚಿವರು, ತಿರುಪತಿ ತಿರುಮಲ ಟ್ರಸ್ಟ್ ಬೋರ್ಡ್ ಅಧ್ಯಕ್ಷರು, ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಇತರರಿಗೆ ಹಲವಾರು ಪತ್ರಗಳನ್ನು ಬರೆದಿದ್ದಾರೆ, ಕೆಲವು ಹಿಂದೂ ವಿರೋಧಿ ನಿರ್ಣಯಗಳು ಮತ್ತು ಹಿಂದೂಯೇತರ ದೇವಸ್ಥಾನ ಮಂಡಳಿಗಳ ಮೇಲಿನ ಪ್ರಾಬಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಪಾದಕೀಯ ನಿಲುವುಕಳೆದ ಎಷ್ಟೋ ವರ್ಷಗಳಿಂದ ಹಿಂದೂಗಳು ಇಂತಹ ಬೇಡಿಕೆ ಮಾಡುತ್ತಿದ್ದಾರೆ. ಈಗಲಾದರೂ ಸರಕಾರವು ಇದನ್ನು ಗಮನದಲ್ಲಿಟ್ಟುಕೊಂಡು ದೇವಸ್ಥಾನಗಳ ಸರಕಾರೀಕರಣದ ಕಾನೂನು ರದ್ದುಗೊಳಿಸಬೇಕು ಎಂದೇ ಹಿಂದೂಗಳಿಗೆ ಅನಿಸುತ್ತಿದೆ ! |