ಆರೋಪಿ ಮುಸಲ್ಮಾನನ ಬಂಧನ
ಪಿಲಿಭೀತ (ಉತ್ತರ ಪ್ರದೇಶ) – ನೇಪಾಳದಲ್ಲಿ ಹಿಂದೂ ಯುವತಿಯೊಬ್ಬಳ ಮೇಲೆ ಬಲಾತ್ಕಾರ ಮತ್ತು ಮತಾಂತರ ಮಾಡಿದ ಆರೋಪ ಹೊತ್ತಿರುವ ಅಮ್ಜದನನ್ನು ಉತ್ತರ ಪ್ರದೇಶದ ಪಿಲಿಭೀತ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಮ್ಜದ್ ವಿರುದ್ಧ ಸೆಪ್ಟೆಂಬರ್ 9, 2024 ರಂದು ಪ್ರಕರಣ ದಾಖಲಾಗಿತ್ತು. ಅಮ್ಜದನೊಂದಿಗೆ ಆತನ ತಾಯಿ ಕೈಸರ್ ಜಹಾನ, ಸಹೋದರರಾದ ಚಂಗೇಜ ಮತ್ತು ರಂಗಿಲಾ ಸೇರಿ ಒಟ್ಟು 5 ಆರೋಪಿಗಳ ಹೆಸರಿದೆ. ಇತರ ಪರಾರಿಯಾಗಿರುವ ಆರೋಪಿಗಳ ಶೋಧಕಾರ್ಯ ನಡೆಯುತ್ತಿದೆ.
1. 2013ರಲ್ಲಿ ಸಂತ್ರಸ್ತೆ ನೇಪಾಳದ ಧನಘಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಪಿಲಿಭಿತನಲ್ಲಿ ಟ್ಯಾಕ್ಸಿ ಚಾಲಕನಾಗಿದ್ದ ಅಮ್ಜದ್ ಆಗಾಗ ಅಲ್ಲಿಗೆ ಹೋಗುತ್ತಿದ್ದನು. ತಾನು ಅಜಯ್ ಎಂದು ಪರಿಚಯಿಸಿಕೊಂಡು ಅವಳೊಂದಿಗೆ ಸ್ನೇಹ ಬೆಳೆಸಿ ದೆಹಲಿಯಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಆಕೆಯನ್ನು ಭಾರತಕ್ಕೆ ಕರೆಸಿದ.
2. ಪಿಲಿಭೀತನ ಕಲೀಂನಗರದಲ್ಲಿರುವ ಆತನ ಸೋದರ ಮಾವ ವಾಹಿದ್ ಖಾನ್ ಮನೆಯಲ್ಲಿ ಯುವತಿಯನ್ನು ಇರಿಸಿದ್ದನು. ಇಲ್ಲಿ ಸ್ಥಳದಲ್ಲಿ ಸಂತ್ರಸ್ತೆಗೆ ಪಿಸ್ತೂಲಿನಿಂದ ಹೆದರಿಸಿ ಬಲಾತ್ಕಾರ ಮಾಡಿ ಮತಾಂತರಗೊಳಿಸಿ ಮದುವೆಯಾಗುವಂತೆ ಒತ್ತಡ ಹೇರಿದನು. ಇದಕ್ಕೆ ಅಮ್ಜದ್ ಕುಟುಂಬವೂ ಬೆಂಬಲಿಸಿತು. ಈ ಅವಧಿಯಲ್ಲಿ ಸಂತ್ರಸ್ತೆಯನ್ನು ಪಿಲಿಭಿತ್‌ನ ವಿವಿಧ ಸ್ಥಳಗಳಲ್ಲಿ ಇರಿಸಲಾಗಿತ್ತು.
3. ಸಂತ್ರಸ್ತೆ ಮತಾಂತರಗೊಳ್ಳಲು ನಿರಾಕರಿಸಿದಾಗ, ‘ಒಂದೋ ಮುಸ್ಲಿಂ ಧರ್ಮ ಸ್ವೀಕರಿಸು, ಇಲ್ಲದಿದ್ದರೆ ನಿನ್ನನ್ನು ಸಾಯಿಸುತ್ತೇವೆ’ ಎಂದು ಬೆದರಿಕೆ ಹಾಕಿದ್ದನು. ಯುವತಿ ತನ್ನ ಪ್ರಾಣ ಉಳಿಸಿಕೊಳ್ಳಲು ಇಸ್ಲಾಂ ಧರ್ಮ ಸ್ವೀಕರಿಸಿದಳು. ಈ ಮತಾಂತರ ಬರೇಲಿಯಲ್ಲಿ ನಡೆಯಿತು. ಮತಾಂತರದ ನಂತರ ಸಂತ್ರಸ್ತೆಯ ಹೆಸರನ್ನು ಮೆಹರುನಿಸಾ ಎಂದು ಇಡಲಾಯಿತು. ಹಾಗೂ ಗೋಮಾಂಸ ತಿನ್ನುವಂತೆ ಒತ್ತಾಯಿಸಲಾಯಿತು.
4. ಮತಾಂತರದ ನಂತರ, ಅಮ್ಜದ್ ಸಂತ್ರಸ್ತೆಯನ್ನು ತನ್ನ ಸಹೋದರ ಫಿರೋಜ್‌ನೊಂದಿಗೆ ಮದುವೆ ಮಾಡಿಸಿದನು. ಫಿರೋಜ್ ವಿಚ್ಛೇದನ ಪಡೆದು 4 ಮಕ್ಕಳನ್ನು ಹೊಂದಿದ್ದನು. ಸಂತ್ರಸ್ತೆ ವಿರೋಧಿಸಿದಾಗ ಫಿರೋಜ್ ಮತ್ತು ರಂಗೀಲಾ ಆಕೆಯನ್ನು ಥಳಿಸಿದ್ದಾರೆ. ಅವನ ಇನ್ನೊಬ್ಬ ಸಹೋದರ ಚಂಗೇಜ ಕೂಡ ಸಂತ್ರಸ್ತೆ ಮೇಲೆ ಅನೇಕ ಬಾರಿ ಬಲಾತ್ಕಾರ ಮಾಡಿದ್ದಾನೆ.
5. ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ದಾಖಲಾಗಿದೆ.
ಸಂಪಾದಕೀಯ ನಿಲುವುಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಜಾರಿಯಲ್ಲಿದ್ದರೂ, ಮತಾಂಧ ಮುಸ್ಲಿಮರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದ್ದರಿಂದ, ಈ ಕಾನೂನಿನಲ್ಲಿ ಶಿಕ್ಷೆಯ ನಿಬಂಧನೆಯನ್ನು ಹೆಚ್ಚಿಸಿ ಅದನ್ನು ಗಲ್ಲು ಶಿಕ್ಷೆಗೆ ಬದಲಾಯಿಸುವುದು ಈಗ ಅಗತ್ಯವಾಗಿದೆ ಎಂದು ಈ ಘಟನೆಗಳಿಂದ ತಿಳಿಯಬಹುದು ! |