ಬಂದಿಸಲಾಗಿರುವವರಲ್ಲಿ ಶೀತಗೃಹದ ಹಿಂದೂ ಮಾಲೀಕ ಮತ್ತು ಕೆಲವು ಹಿಂದೂ ಕಾರ್ಮಿಕರ ಸಮಾವೇಶ
ಲಕ್ಷ್ಮಣಪುರಿ (ಉತ್ತರಪ್ರದೇಶ) – ಪೊಲೀಸರು ಕೆಲವು ದಿನಗಳ ಹಿಂದೆ ಗ್ರೇಟರ್ ನೋಯಿಡಾದಲ್ಲಿ ೧೮೫ ಟನ್ ಗೋಮಾಂಸ ವಶ ಪಡಿಸಿಕೊಂಡಿದೆ. ಒಂದು ಕಂಟೇನರ್ ನಿಂದ ಈ ಗೋಮಾಂಸವನ್ನು ಉತ್ತರಪ್ರದೇಶದ ನೋಯಡಾಗೆ ತರಲಾಗಿತ್ತು. ಅದು ಶೀತಗೃಹದಲ್ಲಿ ಇರಿಸಲಾಗಿತ್ತು. ಅದರ ನಂತರ ಅದನ್ನು ದೆಹಲಿ ಮತ್ತು ನಂತರ ಉತ್ತರಾಖಂಡಕ್ಕೆ ಪೂರೈಸುವವರಿದ್ದರು ಎಂದು ಆರೋಪವಿದೆ. ‘ಗೋರಕ್ಷಾ ಹಿಂದೂ ದಳ’ ದ ರಾಷ್ಟ್ರೀಯ ಅಧ್ಯಕ್ಷ ವೇದ ನಾಗರ ಇವರು ಮಾತ್ರ ೨೫೦ ಟನ್ ಗೋಮಾಂಸ ವಶಪಡಿಸಿಕೊಂದಿರುದ್ದೆಂದು ದಾವೆ ಮಾಡಿದ್ದಾರೆ. ಲೋಣಿಯ ಭಾಜಪದ ಶಾಸಕ ನಂದ ಕಿಶೋರ ಗುರ್ಜರ ಇವರು ಮಾತನಾಡಿ, ‘ವಶಪಡಿಸಿಕೊಂಡಿರುವ ಗೊಂಮಾಂಸದ ಪ್ರಮಾಣ ನೋಡಿದರೆ ಕನಿಷ್ಠ ೮ ಸಾವಿರ ಗೋವುಗಳ ಹತ್ಯೆ ನಡೆದಿದೆ ಎಂದು ಅನಿಸುತ್ತದೆ. ಲಕ್ಷ್ಮಣಪುರಿಯಲ್ಲಿ ಕುಳಿತಿರುವ ೨ ಹಿರಿಯ ಅಧಿಕಾರಿಗಳು ಇದರಲ್ಲಿ ಸಹಭಾಗಿ ಇರುವರು’. ‘ಗುರ್ಜರ್ ಇವರು ಅವರ ಹೆಸರುಗಳನ್ನು ಬಹಿರಂಗಪಡಿಸಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ಇಲ್ಲಿಯವರೆಗೆ ೯ ಜನರನ್ನು ಬಂಧಿಸಿದ್ದಾರೆ. ಶೀತಗೃಹದ ಮೇಲೆ ಬುಲ್ಡೋಜರ್ ಹಾಯಿಸುವ ಮತ್ತು ಆರೋಪಿಗಳ ಮೇಲೆ ರಾಷ್ಟ್ರೀಯ ಸುರಕ್ಷಾ ಕಾನೂನಿನ ಅಂತರ್ಗತ ದೂರು ದಾಖಲಿಸಲು ಹಿಂದುತ್ವನಿಷ್ಠ ಸಂಘಟನೆಗಳು ಆಗ್ರಹಿಸಿವೆ.
“8 हजार गायें बंगाल में काटीं…नोएडा में छिपाया मांस:* भैंस का मीट लिखकर सप्लाई; BJP विधायक बोले-लखनऊ के दो अफसर पैसा खा रहे”https://t.co/Zz6qCMUz7w
— Nand Kishor Gurjar (@nkgurjar4bjp) November 26, 2024
೧. ಈ ಘಟನೆ ನೋಯಡಾದಲ್ಲಿನ ದಾದರಿ ಪರಿಸರದಲ್ಲಿ ನಡೆದಿದೆ. ಗೋರಕ್ಷಣಾ ಸಂಸ್ಥೆಯ ಸದಸ್ಯರಿಗೆ ಬಂಗಾಲದಿಂದ ಗೋಮಾಂಸ ಬರುತ್ತಿರುವ ಮಾಹಿತಿ ದೊರೆತಿತ್ತು. ಈ ಮಾಹಿತಿಯ ಆಧಾರದಲ್ಲಿ ಸಂಸ್ಥೆಯ ಸದಸ್ಯರು ಸೇರಿದರು. ಎಚ್. ಆರ್.೩೮ ಎ. ಈ. ೯೧೮೫ ಈ ನೋಂದಣಿ ಕ್ರಮಾಂಕ ಇರುವ ಟ್ರಕ್ ತಡೆಯಲಾಯಿತು ಮತ್ತು ಮಾಂಸ ಪತ್ತೆಯಾಯಿತು. ಈ ಪ್ರಕರಣದ ಮಾಹಿತಿ ಪೊಲೀಸರಿಗೆ ನೀಡಲಾಯಿತು.
೨. ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಗೋಮಾಂಸ ವಶಕ್ಕೆ ಪಡೆದರು ಮತ್ತು ಅದನ್ನು ಪರಿಶೀಲನೆಗಾಗಿ ಕಳುಹಿಸಿದ್ದಾರೆ. ಅದರಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
೩. ಈ ಕಂಟೆನರ್ ಉತ್ತರ ಪ್ರದೇಶದಲ್ಲಿನ ಎಟಾ ಜಿಲ್ಲೆಯ ನಿವಾಸಿ ಶಿವಶಂಕರ್ ಇವರು ನಡೆಸುತ್ತಿದ್ದರು. ಟ್ರಕ್ ಚಾಲಕ ಕೂಡ ಅದೇ ಜಿಲ್ಲೆಯವನಾಗಿದ್ದನು. ಇಬ್ಬರನ್ನು ಕೂಡ ಬಂಧಿಸಲಾಗಿದೆ. ವಿಚಾರಣೆಯಲ್ಲಿ ಈ ಮಾಂಸ ಬಂಗಾಲದಿಂದ ತರಲಾಗಿರುವುದೆಂದು ಬಹಿರಂಗವಾಗಿದೆ.
೪. ಈ ಗೋಮಾಂಸ ಹಬೀಬರ್ ಮುಲ್ಲಾ ಎಂಬ ವ್ಯಕ್ತಿಯಿಂದ ಸಗಟು ಬೆಲೆಗೆ ಖರೀದಿ ಮಾಡಲಾಗಿತ್ತು. ಈ ಗೋಮಾಂಸ ಗೌತಮ ಬುದ್ಧ ನಗರ ಜಿಲ್ಲೆಯಲ್ಲಿನ ನಾಗಲಾ ಕಿರಾಣಿ ಗ್ರಾಮದಲ್ಲಿನ ಎಸ್.ಪಿ.ಜೆ. ಶೀತಗೃಹದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು, ಎಂದು ಟ್ರಕ್ ಚಾಲಕನು ಹೇಳಿದನು.
೫. ಶೀತಗೃಹದ ಮಾಲೀಕ ಪೂರನ ಜೋಶಿ, ಸಂಚಾಲಕ ಮಹಮ್ಮದ್ ಕುರ್ಶಿದುನ್ ನಬಿ ಮತ್ತು ಶೀತಗೃಹದ ವ್ಯವಸ್ಥಾಪಕ ಅಕ್ಷಯ ಸಕ್ಸೇನ, ಇವು ಬಂಧಿತ ವ್ಯಕ್ತಿಗಳ ಹೆಸರುಗಳಾಗಿವೆ. ಈ ಶೀತಗೃಹಕ್ಕೆ ಬೀಗ ಜಡಿಯಲಾಗಿದೆ. ನವಂಬರ್ ೨೩ ರಂದು ಪೊಲೀಸರು ಕಳ್ಳ ಸಾಗಾಣಿಕೆಯಲ್ಲಿ ಸಹಭಾಗಿ ಇರುವ ದೆಹಲಿಯ ನಿವಾಸಿ ಸಲೀಮುದ್ದೀನ್ ಅನ್ಸಾರಿ ಇವನನ್ನು ಕೂಡ ಬಂಧಿಸಿದ್ದಾರೆ.
೬. ವಿಚಾರಣೆಯ ಸಮಯದಲ್ಲಿ ಅವಿನಾಶ ಕುಮಾರ್, ರಾಕೇಶ ಸಿಂಹ ಮತ್ತು ಶೋಹೇಬ್ ಹಕ್ಕಾನಿ ಇವರ ಸಮಾವೇಶ ಕೂಡ ಕಂಡು ಬಂದಿದೆ. ಈ ಮೂವರು ಕೂಡ ‘ಟೊರೊ ಪ್ರೈಮರಿ ಪ್ರೈವೇಟ್ ಲಿಮಿಟೆಡ್’ ಎಂಬ ಕಂಪನಿಯ ಸಿಬ್ಬಂದಿ ಆಗಿದ್ದಾರೆ. ಈ ಕಂಪನಿಯ ಮೇಲೆ ಶೀತಗೃಹದಲ್ಲಿ ಸಂಗ್ರಹಿಸಿರುವ ಗೋಮಾಂಸ ಖರೀದಿ ಮಾರಾಟ ಮಾಡಿರುವ ಆರೋಪವಿದೆ. ಅವರನ್ನು ಕೂಡ ಬಂಧಿಸಲಾಗಿದೆ.
ಸಂಪಾದಕೀಯ ನಿಲುವುಗೋಮಾಂಸದ ಮಾರಾಟ ಮಾಡುವುದಕ್ಕಾಗಿ ಹಿಂದೂಗಳು ಕೂಡ ತೊಡಗಿದ್ದಾರೆ, ಇದರಂತಹ ಆಘಾತಕಾರಿ ಮತ್ತು ಲಜ್ಜಾಸ್ಪದ ವಿಷಯ ಯಾವುದು ? |