Hurdles Parliament Working: ಯಾರನ್ನು ಜನರು ೮೦ ರಿಂದ ೯೦ ಬಾರಿ ನಿರಾಕರಿಸಿದರೋ ಅವರೇ ರಾಜಕೀಯ ಲಾಭಕ್ಕಾಗಿ ಸಂಸತ್ತಿನ ಕಾರ್ಯಕಲಾಪ ನಿಲ್ಲಿಸುವ ಪ್ರಯತ್ನ ಮಾಡುತ್ತಾರೆ ! – ಪ್ರಧಾನಿ ಮೋದಿ

ಕಾಂಗ್ರೆಸ್ ಸಹಿತ ವಿರೋಧಿ ಪಕ್ಷಗಳಿಗೆ ಮಾತಿನಿಂದಲೇ ತಿವಿದ ಪ್ರಧಾನಿ ಮೋದಿ !

ನವ ದೆಹಲಿ – ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷದವರು ಕಾರ್ಯಕಲಾಪವನ್ನು ಹಾಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಈ ಕೃತಿಗಳನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ತನ್ನ ರಾಜಕೀಯ ಲಾಭಕ್ಕಾಗಿ ಕೆಲವರನ್ನು ಜನರೇ ನಿರಾಕರಿಸಿದ್ದಾರೆ, ಅವರು ಸಂಸತ್ತಿನಲ್ಲಿ ಕೂಡ ಹಿಡಿತ ಸಾಧಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸಂಸತ್ತಿನ ಕಾರ್ಯಕಲಾಪ ನಿಲ್ಲಿಸಿ ತಮ್ಮ ಉದ್ದೇಶ ಸಾಧ್ಯವಾಗಿಸುತ್ತಿಲ್ಲ; ಆದರೆ ಜನರೇ ಅವರ ಕಾರ್ಯಗಳನ್ನು ನೋಡಿ ನಿರಾಕರಿಸಿದ್ದಾರೆ. ಜನರು ಇವರನ್ನು ೮೦ ರಿಂದ ೯೦ ಸಾರಿ ನಿರಾಕರಿಸಿದ್ದಾರೆ, ಎಂದು ಪ್ರಧಾನಿ ನರೇಂದ್ರ ಮೋದಿ ಇವರು ಚಳಿಗಾಲದ ಅಧಿವೇಶನದ ಆರಂಭದಲ್ಲಿ ಬೆಳಿಗ್ಗೆ ಪ್ರಸಾರ ಮಾಧ್ಯಮಗಳ ಜೊತೆಗೆ ಮಾತನಾಡುವಾಗ ಕಾಂಗ್ರೆಸ್ ಸಹಿತ ವಿರೋಧ ಪಕ್ಷವನ್ನು ಟೀಕಿಸಿದರು.

ಪ್ರಧಾನಮಂತ್ರಿ ಮಾತು ಮುಂದುವರೆಸಿ, ೨೦೨೪ ಇದು ಕೊನೆಯ ಕಾಲವಾಗಿದೆ. ದೇಶ ಕೂಡ ೨೦೨೫ ವನ್ನು ಹುರುಪಿನಿಂದ ಮತ್ತು ಉತ್ಸಾಹದಿಂದ ಸ್ವಾಗತಿಸುವ ತಯಾರಿಯಲ್ಲಿದೆ. ಸಂಸತ್ತಿನ ಈ ಅಧಿವೇಶನ ಅನೇಕ ಅರ್ಥದಿಂದ ವಿಶೇಷವಾಗಿದೆ. ಎಲ್ಲಕ್ಕಿಂತ ದೊಡ್ಡ ವಿಷಯವೆಂದರೆ ನಮ್ಮ ಸಂವಿಧಾನ ೭೫ ನೇ ವರ್ಷಕ್ಕೆ ಕಾಲಿಡುತ್ತಿದೆ, ಇದು ಪ್ರಜಾಪ್ರಭುತ್ವಕ್ಕಾಗಿ ಬಹಳ ಉಜ್ವಲ ಘಟನೆ ಆಗಿದೆ ಎಂದು ಹೇಳಿದರು.