Hindu Temples Destroyed: ಬಾಂಗ್ಲಾದೇಶದಲ್ಲಿ ಹಿಂದೂಗಳ 3 ದೇವಾಲಯಗಳ ಮೇಲೆ ದಾಳಿ

ಚಿತ್ತಗಾಂವ್ (ಬಾಂಗ್ಲಾದೇಶ) – ಚಿನ್ಮಯ ಪ್ರಭು ಇವರ ಬಂಧನದ ನಂತರ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮತಾಂಧ ಮುಸಲ್ಮಾನರ ಹಿಂಸಾಚಾರದ ಹಿನ್ನೆಲೆಯಲ್ಲಿ ನವೆಂಬರ್ 26 ರಂದು ಮತಾಂಧ ಮುಸಲ್ಮಾನರು 3 ಹಿಂದೂ ದೇವಾಲಯಗಳನ್ನುಗುರಿಯಾಗಿಸಿಕೊಂಡಿದ್ದಾರೆ. ಇದರಲ್ಲಿ ಫಿರಂಗಿ ಬಜಾರ್‌ನಲ್ಲಿರುವ ಲೋಕನಾಥ ದೇವಾಲಯ, ಶ್ರೀ ಮನಸಾಮಾತಾ ದೇವಾಲಯ ಮತ್ತು ಹಜಾರಿ ಲೇನ್‌ನಲ್ಲಿರುವ ಶ್ರೀ ಕಾಳಿಮಾತಾ ದೇವಾಲಯಗಳು ಸೇರಿವೆ.

‘ಅಲ್ಲಾಹು ಅಕ್ಬರ್’ (‘ಅಲ್ಲಾ ಮಹಾನ್’) ಎಂದು ಘೋಷಣೆ ಕೂಗುತ್ತಾ ಮತಾಂಧರು ಈ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರು ದಲಿತರ ಕಾಲೋನಿಯ ಹಲವು ಮನೆಗಳಿಗೂ ಬೆಂಕಿ ಹಚ್ಚಿದರು. ಇದಕ್ಕೂ ಮುನ್ನ ಅವರು ಪ್ರದೇಶದಲ್ಲಿದ್ದ ಹಿಂದೂಗಳಿಗೆ ಅಂಗಡಿಗಳನ್ನು ಮುಚ್ಚುವಂತೆ ಬೆದರಿಕೆ ಹಾಕಿದ್ದರು. ಸ್ಥಳೀಯ ಹಿಂದೂಗಳ ಹೇಳಿಕೆಯ ಪ್ರಕಾರ, ಮತಾಂಧ ಮುಸಲ್ಮಾನರು ‘ಇಸ್ಲಾಮಿ ಜಮಾತ್’ ಮತ್ತು ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿಯೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ.