ಬೆಂಗಳೂರಿನಲ್ಲಿ ೫೦ ವರ್ಷ ಹಳೆಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ತೆರವು ಮಾಡಲು ಬಂದಿದ್ದ ರೇಲ್ವೆ ಅಧಿಕಾರಿಗಳ ಪ್ರಯತ್ನವು ಹಿಂದೂಗಳ ಸಂಘಟನೆಯಿಂದ ವಿಫಲ

  • ಹಿಂದೂಗಳು ಸಂಘಟಿತರಾದರೆ ಏನಾಗಬಹುದು, ಎಂಬುದಕ್ಕೆ ಇದು ಇನ್ನೊಂದು ಉದಾಹರಣೆಯಾಗಿದೆ ! ಮುಸಲ್ಮಾನರು ಯಾವಾಗಲೂ ಸಂಘಟಿತರಾಗಿ ವಿರೋಧಿಸುವುದರಿಂದ ಅವರ ಕಾನೂನುಬಾಹಿರವಾಗಿರುವ ಧಾರ್ಮಿಕ ಸ್ಥಳವನ್ನೂ ತೆರವುಗೊಳಿಸಲು ಆಡಳಿತ ಮತ್ತು ಪೊಲೀಸರು ಧೈರ್ಯ ಮಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
  • ಹಿಂದೂಗಳ ದೇವಸ್ಥಾನಗಳನ್ನು ಅಕ್ರಮ ಎಂದು ನಿರ್ಧರಿಸಿ ತೆರವುಗೊಳಿಸಲು ಪ್ರಯತ್ನಿಸುವ ರೇಲ್ವೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ !

ಬೆಂಗಳೂರು – ಇಲ್ಲಿಯ ವಸಂತನಗರದ ಕಂಟೋನ್ಮೆಂಟ್ ರೇಲ್ವೆ ನಿಲ್ದಾಣದಿಂದ ೨೦೦ ಮೀಟರ್ ದೂರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನವು ಅನಧಿಕೃತ ಎಂದು ತೆರವು ಮಾಡುವ ರೇಲ್ವೆ ಅಧಿಕಾರಿಗಳ ಕ್ರಮದ ವಿರುದ್ಧ ಹಿಂದೂ ಸಂಘಟನೆಗಳು ಆಂದೋಲನ ಮಾಡಿದರು. ತದನಂತರ ರೇಲ್ವೆ ಅಧಿಕಾರಿಗಳು ‘ದೇವಸ್ಥಾನವನ್ನು ತೆರವು ಗೊಳಿಸುವುದಿಲ್ಲ’, ಎಂದು ಭರವಸೆಯನ್ನು ನೀಡಿದರು ಮತ್ತು ಮರಳಿ ಹೋದರು. ಈ ಆಂದೋಲನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ, ಸಾಮಾಜಿಕ ಕಾರ್ಯಕರ್ತೆ ಸೌ. ಮಂಗಲಾ ಗೌರಿ, ದೇವಸ್ಥಾನದ ಶ್ರೀ. ಕೃಷ್ಣಮೂರ್ತಿ, ಭಜರಂಗದಳದ ಶ್ರೀ. ಪುನಿತ್ ಕುಮಾರ್, ಹಿಂದೂ ಮಹಾಸಭಾದ ಶ್ರೀ. ಸುರೇಶ ಜೈನ್, ಅದೇ ರೀತಿ ಭಕ್ತಾದಿಗಳು ಮುಂತಾದವರು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

೧. ಬೆಳಿಗ್ಗೆ ೧೧ ಗಂಟೆ ರೈಲ್ವೆ ಅಧಿಕಾರಿಗಳು, ರೈಲ್ವೆ ಪೋಲೀಸ್ ಮತ್ತು ಸ್ಥಳೀಯ ಪೋಲಿಸರು ಆ ಸ್ಥಳಕ್ಕೆ ಆಗಮಿಸಿದರು. ಅವರಿಗೆ ಹಿಂದೂಗಳು ಮತ್ತು ಅವರ ಸಂಘಟನೆಗಳು ತೀವ್ರ ವಿರೋಧ ಮಾಡಿದರು.


೨. ಶ್ರೀ. ಮೋಹನ ಗೌಡ ಇವರು ಮಾತನಾಡುತ್ತಾ, ಈ ದೇವಸ್ಥಾನ ೫೦ ವರ್ಷಗಳಷ್ಟು ಹಳೆಯದಾಗಿದೆ. ರೇಲ್ವೆ ಅಧಿಕಾರಿಗಳೇ ಇದರ ವಿಶ್ವಸ್ಥರಾಗಿದ್ದಾರೆ, ಇಲ್ಲಿ ಪ್ರತಿದಿನ ಪೂಜೆ ನಡೆಯುತ್ತದೆ. ನಕ್ಷೆಯಲ್ಲಿ ‘ದೇವಸ್ಥಾನ ಜಮೀನು’ ಎಂದು ಉಲ್ಲೇಖ ಇದೆ. ವಿದ್ಯುತ್ ಸಂಪರ್ಕ ಇದೆ. ಹಲವು ದಾಖಲೆಗಳು ಇದೆ; ಆದ್ದರಿಂದ ಯಾವುದೇ ಕಾರಣಕ್ಕೂ ಇದನ್ನು ತೆರವು ಮಾಡಬಾರದು, ಇದನ್ನು ತೆರವು ಮಾಡಲು ನಮ್ಮ ತೀವ್ರ ವಿರೋಧ ಇದೆ, ದೇವಸ್ಥಾನದ ಸಂರಕ್ಷಣೆ ಮಾಡಬೇಕು. ಇದನ್ನು ಉಳಿಸಲು ನಾವು ಕಾನೂನು ಹೋರಾಟ ಮಾಡುತ್ತೇವೆ’, ಎಂದು ಹೇಳಿದರು.

೩. ಈ ಸಮಯದಲ್ಲಿ ಹಿಂದೂಗಳು, ಈ ಜಾಗವನ್ನು ಮೊದಲು ಕೆಳದಿ ಅರಸರು ನೀಲಕಂಠ ದೇಶಿಕೇಂದ್ರ ಮಠಕ್ಕೆ ನೀಡಿದ್ದರು. ಅದಕ್ಕೆ ಸಂಬಂಧಿಸಿದ ದಾಖಲೆಗಳು ಇದೆ. ಈ ದೇವಾಲಯ ಕಳೆದ ೫೦ ವರ್ಷದಿಂದ ನವರಾತ್ರಿ ಉತ್ಸವ, ಅಮಾವಾಸ್ಯೆ ಸಮಯದಲ್ಲಿ ಅನ್ನಸಂತರ್ಪಣೆ ಮುಂತಾದವುಗಳು ನಡೆಯುತ್ತದೆ. ರೈಲ್ವೇ ಇಲಾಖೆ ಇಲ್ಲಿ ದೇವಾಲಯ ಕಟ್ಟಲು ಅನುವು ಮಾಡಿ ಕೊಟ್ಟಿದೆ. ಈ ದೇವಸ್ಥಾನದಿಂದಾಗಿ ಸಾರ್ವಜನಿಕರಿಗೆ, ರಸ್ತೆಗೆ, ರೈಲ್ವೇಗೆ ಯಾರಿಗೂ ಅಡಚಣೆ ಇಲ್ಲ, ಹಾಗಾಗಿ ಇದನ್ನು ಅಧಿಕೃತವೆಂದು ಘೋಷಿಸುವಂತೆ ಆಗ್ರಹ ಮಾಡಲಾಯಿತು. ಆಗ ರೈಲ್ವೆ ಅಧಿಕಾರಿಗಳು ತೆರವು ಮಾಡಲಿಲ್ಲ ಮತ್ತು ಅವರು ವಾಪಾಸು ಹೋದರು. ಈ ಸಂದರ್ಭದಲ್ಲಿ ಶ್ರೀ ಕರ್ನಾಟಕ ಚಾಮುಂಡೇಶ್ವರಿ ಭಕ್ತ ಮಂಡಳಿಯ ಭಕ್ತಾದಿಗಳು ಉಪಸ್ಥಿತಿ ಇದ್ದರು.