Shahi Jama Masjid Case: ಸಂಭಲ (ಉತ್ತರ ಪ್ರದೇಶ) ಇಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ

  • ಶಾಹಿ ಜಾಮಾ ಮಸೀದಿಯ ಸರ್ವೇ ಸಮಯದಲ್ಲಿ ನಡೆದ ಹಿಂಸಾಚಾರದ ಪ್ರಕರಣ

  • ಇಲ್ಲಿಯವರೆಗೆ 5 ಮುಸ್ಲಿಮರ ಸಾವು

  • ಇಬ್ಬರು ಮಹಿಳೆಯರು ಸೇರಿದಂತೆ 25 ಮುಸ್ಲಿಮರ ಬಂಧನ

ಸಂಭಲ (ಉತ್ತರ ಪ್ರದೇಶ) – ಇಲ್ಲಿ ನವೆಂಬರ್ 24 ರಂದು ಶ್ರೀ ಹರಿಹರ ದೇವಸ್ಥಾನದ ಸ್ಥಳದಲ್ಲಿ ನಿರ್ಮಿಸಲಾದ ಶಾಹಿ ಜಾಮಾ ಮಸೀದಿಯ ಸರ್ವೆ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಇದುವರೆಗೆ 5 ಮುಸ್ಲಿಮರು ಸಾವನ್ನಪ್ಪಿದ್ದಾರೆ. ಅವರ ಹೆಸರು ನಯೀಮ್, ಬಿಲಾಲ್, ರೋಮನ್, ಕೈಫ್ ಮತ್ತು ಅಯಾನ್ ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ 25 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಸದ್ಯ ಇಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತು ಮಾಡಲಾಗಿದ್ದು, ಪೊಲೀಸರು ಇಲ್ಲಿ ಧ್ವಜ ಸಂಚಲನೆ ನಡೆಸಿದ್ದಾರೆ. ಇಲ್ಲಿ ಹೊರಗಿನವರ ಪ್ರವೇಶವನ್ನು ನಿಷೇಧಿಸಲಾಗಿದೆ. ಇಂಟರ್‌ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ. ‘ಜನರಿಗೆ ವದಂತಿಗಳಿಗೆ ಕಿವಿಗೊಡಬೇಡಿ, ಸಂಯಮದಿಂದ ಇರಬೇಕು’, ಎಂದು ಆಡಳಿತ ಕರೆ ನೀಡುತ್ತಿದೆ. ಪೊಲೀಸ್ ಅಧೀಕ್ಷಕ ಕೃಷ್ಣ ಕುಮಾರ್ ಬಿಷ್ಣೋಯಿ ಮಾತನಾಡಿ, ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ನಗರದಲ್ಲಿ ಶಾಂತಿ, ಬಹುತೇಕ ಮನೆಗಳಿಗೆ ಬೀಗ

ಹಿಂಸಾಚಾರದ ನಂತರ ನಗರದ ಮಾರುಕಟ್ಟೆಗಳು ಮತ್ತು ಅಂಗಡಿಗಳು ಸಂಪೂರ್ಣವಾಗಿ ಮುಚ್ಚಿವೆ. ಹಿಂಸಾಚಾರ ನಡೆಯದಂತೆ, ಪ್ರದೇಶದ ಹೆಚ್ಚಿನ ಮನೆಗಳಿಗೆ ಹೊರಗಿನಿಂದ ಬೀಗ ಹಾಕಲಾಗಿದೆ. ಪೊಲೀಸ್ ಗಸ್ತು ಹೆಚ್ಚಿಸಲಾಗಿದ್ದು, ರಸ್ತೆಗಳಲ್ಲಿ ಪೊಲೀಸರೇ ಕಾಣಸಿಗುತ್ತಾರೆ. ಜಿಲ್ಲಾಡಳಿತದ ಸೂಚನೆಯಂತೆ ನವೆಂಬರ 25ರಂದು ಶಾಲೆಗಳಿಗೆ ರಜೆ ನೀಡಲಾಗಿತ್ತು. ಉದ್ವಿಗ್ನ ಪರಿಸ್ಥಿತಿ ಮುಂದುವರೆದರೆ ಶಾಲಾ ರಜೆಗಳನ್ನು ಸಹ ವಿಸ್ತರಿಸಬಹುದು ಎಂದು ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಸಂಸದ ಮತ್ತು ಶಾಸಕರ ಪುತ್ರನ ವಿರುದ್ಧ ಪ್ರಕರಣ ದಾಖಲು

ಈ ಹಿಂಸಾಚಾರದ ಪ್ರಕರಣದಲ್ಲಿ 2 ಪೊಲೀಸ್ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ. ಸಂಭಲದ ಸಮಾಜವಾದಿ ಪಕ್ಷದ ಸಂಸದ ಜಿಯಾವುರ್ ರೆಹಮಾನ ಬರ್ಕ್ ಮತ್ತು ಸಮಾಜವಾದಿ ಪಕ್ಷದ ಸ್ಥಳೀಯ ಶಾಸಕ ಇಕ್ಬಾಲ ಮಹಮೂದ್ ಅವರ ಪುತ್ರನ ವಿರುದ್ಧ ಪ್ರಕರಣ ದಾಖಲಾಗಿದೆ. ಇಬ್ಬರ ಮೇಲೂ ಗಲಭೆಕೋರರನ್ನು ಪ್ರಚೋದಿಸಿದ ಆರೋಪವಿದೆ. ಇವರೊಂದಿಗೆ 2 ಸಾವಿರದ 500 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಂಪಾದಕೀಯ ನಿಲುವು

ಇದರಿಂದ ಈ ಹಿಂಸೆಗೆ ಕಾರಣರಾದವರು ಯಾರು ಎಂಬುದು ಗಮನಕ್ಕೆ ಬರುತ್ತದೆ. ಅಂತಹ ಪಕ್ಷವನ್ನು ಈಗ ನಿಷೇಧಿಸುವಂತೆ ಹಿಂದೂಗಳು ಆಗ್ರಹಿಸಬೇಕು!