ಕೊಲ್ಹಾಪುರ – ಕಾಂಗ್ರೆಸ್ ಸರಕಾರವು ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ೨೦೦ ಯುನಿಟ್ ವಿದ್ಯುತ್ ಉಚಿತ, ಪ್ರತಿಯೊಬ್ಬರಿಗೆ ೧೦ ಕಿಲೋ ಅಕ್ಕಿ, ‘ಗೃಹಲಕ್ಷ್ಮೀ ಯೋಜನೆ’ಯ ಅಂತರ್ಗತ ಮಹಿಳೆಯರಿಗೆ ೨ ಸಾವಿರ ರೂಪಾಯಿ ಇತ್ಯಾದಿ ಸೌಲಭ್ಯ ನೀಡಿತ್ತು. ಈ ಇವುಗಳಿಂದಾಗಿ ಕರ್ನಾಟಕ ರಾಜ್ಯ ಇಂದು ಆರ್ಥಿಕವಾಗಿ ದಿವಾಳಿಯಾಗಿದೆ ಮತ್ತು ಸಿಬ್ಬಂದಿಗಳಿಗೆ ಸಕಾಲದಲ್ಲಿ ಸಂಬಳ ಸಿಗದಿರುವುದು, ನಿವೃತ್ತಿವೇತನ ಪಾವತಿಯಾಗದಿರುವುದು, ವಿಧವಾವೇತನ ಸಿಗದಂತಹ ಗಂಭೀರ ಸಮಸ್ಯೆಗಳಿಂದ ರಾಜ್ಯವು ಬಳಲುತ್ತಿದೆ. ಆದುದರಿಂದ ಕಾಂಗ್ರೆಸ್ಸಿನ ಮೋಸದ ಆಮಿಷಗಳಿಗೆ ಮತದಾರರು ಮರುಳಾಗಬಾರದು, ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇವರು ಪತ್ರಿಕಾಗೋಷ್ಠಿಯಲ್ಲಿ ಕರೆ ನೀಡಿದರು.
“ಕಾಂಗ್ರೆಸ್ ಸರಕಾರವು ಕರ್ನಾಟಕ ರಾಜ್ಯದಲ್ಲಿ ೧೦ ಕಿಲೋ ಅಕ್ಕಿಯನ್ನು ನೀಡುವ ಘೋಷಣೆ ಮಾಡಿದೆ, ಆದರೆ ಪ್ರಸ್ತುತ ನಾಗರಿಕರಿಗೆ ಅಕ್ಕಿಯನ್ನು ನೀಡುತ್ತಿಲ್ಲ; ಏಕೆಂದರೆ ಕೇಂದ್ರದಿಂದ ಅಕ್ಕಿಯನ್ನು ಖರೀದಿಸಲು ಅವರ ಬಳಿ ನಿಧಿ ಇಲ್ಲ. ಕೇಂದ್ರ ಸರಕಾರವು ಕಿಲೋಗೆ ೨೮ ರೂಪಾಯಿಯಂತೆ ಕಡಿಮೆ ದರದಲ್ಲಿ ಅಕ್ಕಿಯನ್ನು ನೀಡಲು ಭರವಸೆ ನೀಡಿದರೂ ಅವರು ಅಕ್ಕಿ ಖರೀದಿಸಿಲ್ಲ. ಕೇವಲ ಕರ್ನಾಟಕ ಮಾತ್ರವಲ್ಲ ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ಸಿನ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ. ಕರ್ನಾಟಕ ರಾಜ್ಯದಲ್ಲಿ ‘ವಕ್ಫ್ ಬೋರ್ಡ್’ನಿಂದ ರೈತರ, ಹಾಗೆಯೇ ದೇವಸ್ಥಾನಗಳ ಸಾವಿರಾರು ಎಕರೆ ಭೂಮಿಯನ್ನು ಮತ್ತು ಪ್ರತಿಯೊಂದು ಜಿಲ್ಲೆಯಲ್ಲಿ ‘ವಕ್ಫ್ ಬೋರ್ಡ್’ ಹಿಂದೂಗಳ ಭೂಮಿಯನ್ನು ಕಬಳಿಸುತ್ತಿದೆ. ಕಾಂಗ್ರೆಸ್ ಕೇವಲ ಭೂಮಿಯನ್ನು ಕಬಳಿಸುವ ‘ಗ್ಯಾರಂಟಿ’ ನೀಡಬಹುದು. ಝಾರಖಂಡದಲ್ಲಿ ಭಾಜಪಕ್ಕೆ ಮತ್ತು ಮಹಾರಾಷ್ಟ್ರದಲ್ಲಿ ಮೈತ್ರಿಕೂಟಕ್ಕೆ ಉತ್ತಮ ವಾತಾವರಣವಿದ್ದು ನಾವು ಅಭೂತಪೂರ್ವ ಗೆಲುವು ಸಾಧಿಸುತ್ತೇವೆ”, ಎಂದರು.