Bill Clinton: ಭಾರತದಲ್ಲಿ ಗಾಂಧಿಜೀಯವರ ಕನಸು ನನಸಾಗುವುದು ಅನುಮಾನ !’ – ಅಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷ ಬಿಲ್ ಕ್ಲಿಂಟನ್

ವಾಷಿಂಗ್ಟನ್ (ಅಮೇರಿಕಾ) – ಭಾರತದಲ್ಲಿ ಆಂತರಿಕ ವಿಶೇಷವಾಗಿ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಭಿನ್ನಾಭಿಪ್ರಾಯದ ಸಂದರ್ಭ ಉಲ್ಲೇಖಿಸಿದ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಭಾರತದಲ್ಲಿ ಗಾಂಧಿಯವರ ಕನಸು ನನಸಾಗುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. 78 ವರ್ಷದ ಕ್ಲಿಂಟನ್ ತಮ್ಮ ಹೊಸ ಪುಸ್ತಕ ‘ಸಿಟಿಜನ್: ಮೈ ಲೈಫ್ ಆಫ್ಟರ್ ದಿ ವೈಟ್ ಹೌಸ್’ ನಲ್ಲಿ ಈ ಟಿಪ್ಪಣೆ ಮಾಡಿದ್ದಾರೆ. ಕಳೆದ ವಾರದಲ್ಲಿ ಈ ಪುಸ್ತಕದ ಪ್ರಕಾಶನವಾಗಿದೆ. ಇಂದು ಭಾರತವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಮತ್ತು ಜನರು ಅದನ್ನು ಆನಂದಿಸುತ್ತಿದ್ದಾರೆ. ಅದು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವೂ ಆಗಿದೆ. ಹೀಗಿರುವಾಗ, ಅಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳಿಂದ ವಿಶೇಷವಾಗಿ ಅದರಲ್ಲೂ ಹಿಂದೂ-ಮುಸ್ಲಿಂರ ನಡುವೆ ಇರುವ ಭಿನ್ನಾಭಿಪ್ರಾಯಗಳಿಂದ ಗಾಂಧಿಯವರ ಕನಸು ನನಸಾಗುವುದೇ, ಈ ಬಗ್ಗೆ ಅನುಮಾನವಿದೆ, ಎಂದು ಪುಸ್ತಕದಲ್ಲಿ ಹೇಳಿದ್ದಾರೆ.

2001 ರ ವಿನಾಶಕಾರಿ ಭೂಕಂಪದ ನಂತರ ಅವರು ಗುಜರಾತ್‌ಗೆ ಭೇಟಿ ನೀಡಿದ ಬಗ್ಗೆ ಈ ಪುಸ್ತಕದಲ್ಲಿ ವಿವರಣೆ ಇದೆ. ಕ್ಲಿಂಟನ್ ಅವರ ಹೇಳಿಕೆ ಪ್ರಕಾರ, ಭಾರತಕ್ಕೆ ಭೇಟಿ ನೀಡಿದ ನಂತರ ಅವರು ಅಹಮದಾಬಾದ್‌ನಲ್ಲಿನ ಆಸ್ಪತ್ರೆ ಮತ್ತು ಗಾಂಧಿ ಆಶ್ರಮಕ್ಕೆ ಭೇಟಿ ನೀಡಿದ್ದರು ಮತ್ತು ಕೆಲವು ಯುವಕರೊಂದಿಗೆ ಸಂವಾದ ನಡೆಸಿದ್ದರು. ಅಮೆರಿಕಾದಲ್ಲಿ ಅವರು ತಮ್ಮ ಕೆಲವು ಭಾರತೀಯ-ಅಮೆರಿಕನ್ ಸ್ನೇಹಿತರೊಂದಿಗೆ ‘ಅಮೆರಿಕನ್ ಇಂಡಿಯಾ ಫೌಂಡೇಶನ್’ (ಎ.ಐ.ಎಫ್) ಸ್ಥಾಪಿಸಿದರು ಮತ್ತು ಭೂಕಂಪ ಸಂತ್ರಸ್ತರಿಗಾಗಿ ಕೋಟಿಗಟ್ಟಲೆ ಡಾಲರ್‌ಗಳನ್ನು ಸಂಗ್ರಹಿಸಿದ್ದರು.

ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿಯಾಗಿ ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ನನ್ನ ಮನಸ್ಸಿನಲ್ಲಿ ವಾಜಪೇಯಿ ಸರಕಾರದ ಬಗ್ಗೆ ಅಪಾರ ಗೌರವವಿತ್ತು ಎಂದು ಕ್ಲಿಂಟನ್ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಅಮೇರಿಕಾ ವರ್ಣದ್ವೇಷ (ವರ್ಣಭೇದ ನೀತಿ)ಮುಕ್ತ ಆಗುವ ಕನಸನ್ನು ಅನೇಕ ಅಮೇರಿಕನ್ ಸಮಾಜಶಾಸ್ತ್ರಜ್ಞರು ಕಳೆದ ಅನೇಕ ದಶಕಗಳಿಂದ ಕಂಡಿದ್ದಾರೆ. ಈ ಕನಸು ಅಮೆರಿಕದ ಸಮಾಜದಲ್ಲಿ ಹೇಗೆ ನನಸಾಗುತ್ತದೆ, ಇದರ ಉತ್ತರವನ್ನು ಅಮೆರಿಕದ ಮಾಜಿ ಅಧ್ಯಕ್ಷರು ನೀಡಿದರೆ, ಉತ್ತಮವಾಗುವುದು !