ಬಾಂಗ್ಲಾದೇಶದಲ್ಲಿ `ಇಸ್ಕಾನ್’ನ ಚಿನ್ಮಯ ಪ್ರಭುರವರ ಬಿಡುಗಡೆಗಾಗಿ ಪ್ರತಿಭಟನೆ ನಡೆಸುತ್ತಿದ್ದ ಹಿಂದೂಗಳ ಮೇಲೆ ಮುಸಲ್ಮಾನರಿಂದ ಆಕ್ರಮಣ

  • 50 ಹಿಂದೂಗಳು ಗಾಯಗೊಂಡಿದ್ದಾರೆ

  • ಪೊಲೀಸರು ಮತ್ತು ಆಡಳಿತವು ಮೂಕ ಪ್ರೇಕ್ಷಕರಾಗಿದ್ದಾರೆ.

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ `ಇಸ್ಕಾನ್’ನ ಸದಸ್ಯರಾದ ಚಿನ್ಮಯ ಕೃಷ್ಣ ದಾಸ ಪ್ರಭುರವರನ್ನು ದೇಶದ್ರೋಹದ ಆರೋಪದಡಿ ಬಂಧಿಸಿದ ನಂತರ ಢಾಕಾ, ಚಿಟಗಾವ, ದಿನಾಜಪುರ ಮತ್ತು ಇತರೆಡೆಗಳಲ್ಲಿ ಹಿಂದೂಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಢಾಕಾದ ಶಾಹಬಾಗನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹಿಂದೂಗಳ ಮೇಲೆ ಮತಾಂಧ ಮುಸಲ್ಮಾನರು ದಾಳಿ ನಡೆಸಿದ್ದಾರೆ. ಇದರಲ್ಲಿ 50ಕ್ಕೂ ಹೆಚ್ಚಿನ ಹಿಂದೂಗಳು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯು ಶಾಹಬಾಗ ಪೊಲೀಸ ಠಾಣೆಯಿಂದ ಕೇವಲ 30 ಮೀಟರ ದೂರದಲ್ಲಿ ನಡೆದಿದೆ. ಪೊಲೀಸರು ಮತ್ತು ಆಡಳಿತವು ಮೂಕ ಪ್ರೇಕ್ಷಕರ ಪಾತ್ರವನ್ನು ವಹಿಸಿದ್ದಾರೆ. ಅವರು ಮತಾಂಧರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಬಾಂಗ್ಲಾದೇಶದ ಪೊಲೀಸರು ಮತಾಂಧ ಮುಸಲ್ಮಾನರ ದಾಳಿಯನ್ನು ಬೆಂಬಲಿಸುತ್ತಿರುವುದು ಕಂಡು ಬಂದಿದೆ.

1. ಹಿಂದೂಗಳ ಮೇಲೆ `ಬಾಂಗ್ಲಾದೇಶ ನ್ಯಾಷನಲ ಪಾರ್ಟಿ’ ಮತ್ತು ಜಮಾತ್-ಎ-ಇಸ್ಲಾಮಿ ಎಂಬ ಪಕ್ಷಗಳ ಮತಾಂಧ ಮುಸಲ್ಮಾನ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಚಿತಗಾವನಲ್ಲಿ, ನವೆಂಬರ್ 25 ರ ತಡರಾತ್ರಿ, ಸಾವಿರಾರು ಹಿಂದೂಗಳು `ಮೌಲ್ವಿ ಬಜಾರ್’ ನಲ್ಲಿ `ಜಯ ಸಿಯಾ ರಾಮ’ ಮತ್ತು `ಹರ ಹರ ಮಹಾದೇವ’ ಎಂದು ಜಯಘೋಷ ಕೂಗುತ್ತಾ ಪಂಜಿನ ಮೆರವಣಿಗೆ ನಡೆಸಿದರು. ಪ್ರತಿ ಜಿಲ್ಲೆಯಲ್ಲೂ ಹಿಂದೂಗಳು ಶಾಂತಿ ಸಭೆಗಳನ್ನು ಆಯೋಜಿಸಿದ್ದರು. ಈ ‘ಶಾಂತಿ ಸಭೆ’ಯ ಮೇಲೆ ಮತಾಂಧರು ದಾಳಿ ನಡೆಸಿದ್ದಾರೆ.

2. ಚಿತಗಾವ ವಿಶ್ವವಿದ್ಯಾಲಯದ ಪ್ರೊ. ಕುಶಾಲ ಬರನರವರ ಮೇಲೆ ಹಲ್ಲೆ ನಡೆಸಲಾಗಿದೆ. ಇದರಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

3. ಬಾಂಗ್ಲಾದೇಶದ ಅಧಿಕಾರದ ಹೋರಾಟದ ಸಂದರ್ಭದಲ್ಲಿ, ಅಗಸ್ಟ್ 6 ರಂದು ಖುಲ್ನಾ ಜಿಲ್ಲೆಯ ಇಸ್ಕಾನ್ ದೇವಸ್ಥಾನವನ್ನು ಗುರಿಯಾಗಿಸಲಾಗಿತ್ತು. ಇದರಲ್ಲಿ ಭಗವಾನ ಜಗನ್ನಾಥರ ಮೂರ್ತಿಯನ್ನು ಸುಡಲಾಗಿತ್ತು. ಈ ದಾಳಿಯ ನಂತರ ಚಿನ್ಮಯ ದಾಸರವರು, ಚಿತಗಾವನ ಇತರ 3 ದೇವಸ್ಥಾನಗಳು ಸಹ ಅಪಾಯದಲ್ಲಿವೆ ಎಂದು ಹೇಳಿದ್ದರು. ಅವರು ಅವುಗಳ ರಕ್ಷಣೆಗಾಗಿ ಹಿಂದೂ ಸಮುದಾಯವನ್ನು ಸಂಘಟಿಸುವ ಕೆಲಸವನ್ನು ಮಾಡುತ್ತಿದ್ದರು. ಹಿಂಸಾಚಾರದಿಂದ ಪಾರಾಗಲು ಹಿಂದೂಗಳು ತ್ರಿಪುರಾ ಮತ್ತು ಬಂಗಾಳದಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ದಾಸರವರು ಹೇಳಿದ್ದರು.

4. ಬಾಂಗ್ಲಾದೇಶದಲ್ಲಿ ಇಸ್ಕಾನಿನ 77 ದೇವಸ್ಥಾನಗಳಿವೆ. ಬಾಂಗ್ಲಾದೇಶದ ಸುಮಾರು ಪ್ರತಿಯೊಂದು ಜಿಲ್ಲೆಯಲ್ಲೂ ಇಸ್ಕಾನ್ ದೇವಸ್ಥಾನಗಳಿದ್ದು, ಸುಮಾರು 50,000ಕ್ಕೂ ಹೆಚ್ಚಿನ ಜನರು ಅವುಗಳೊಂದಿಗೆ ಸಂಬಂಧ ಹೊಂದಿದ್ದಾರೆ.

ಚಿನ್ಮಯ ಪ್ರಭುರವರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ !

ಚಿನ್ಮಯ ಪ್ರಭುರವರನ್ನು ದೇಶದ್ರೋಹದ ಅಪರಾಧದ ಹೆಸರಿನಲ್ಲಿ ಬಂಧಿಸಲಾಗಿದ್ದು ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಬಾಂಗ್ಲಾದೇಶ ಪೊಲೀಸರು ಚಿನ್ಮಯ ಪ್ರಭುರವರ ವಶಕ್ಕಾಗಿ ಮನವಿ ಮಾಡಿರಲಿಲ್ಲ. ಆದುದರಿಂದ ಅವರನ್ನು ನ್ಯಾಯಾಲಯದ ವಶಕ್ಕೆ ಕಳುಹಿಸಲಾಗಿದೆ. ಜೈಲಿನಲ್ಲಿ ಅವರಿಗೆ ಎಲ್ಲ ಧಾರ್ಮಿಕ ಲಾಭಗಳನ್ನು ನೀಡಬೇಕೆಂದು ನ್ಯಾಯಾಲಯವು ಹೇಳಿದೆ.

ಸಂಪಾದಕೀಯ ನಿಲುವು

`ಏಕ ಹೈ ತೋ ಸೇಫ ಹೈ’ ಎಂದು ಭಾರತದಲ್ಲಿ ಹಿಂದೂಗಳಿಗೆ ಕರೆ ನೀಡಲಾಗುತ್ತಿದೆ. ಈಗ ಇಂತಹ ಕರೆಯು ಕೇವಲ ಭಾರತದಲ್ಲಿನ ಹಿಂದೂಗಳ ಸಂದರ್ಭದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ, ವಿಶೇಷವಾಗಿ ಇಸ್ಲಾಮಿಕ್ ದೇಶಗಳಲ್ಲಿರುವ ಹಿಂದೂಗಳಿಗಾಗಿ ಆವಶ್ಯಕವಾಗಿದೆ. ಜಾಗತಿಕ ಮಟ್ಟದಲ್ಲಿ ಹಿಂದೂಗಳು ಒಗ್ಗಟ್ಟಿಗಾಗಿ ಭಾರತ ಸರಕಾರವು ಮುಂದಾಳತ್ವವನ್ನು ವಹಿಸಿ ಹಿಂದೂಗಳ ಸುರಕ್ಷತೆಗಾಗಿ ಯುದ್ಧೋಪಾದಿಯಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು!

ಚಿನ್ಮಯ ಪ್ರಭುರವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ !

ಚಿನ್ಮಯ ಪ್ರಭುರವರನ್ನು ದೇಶದ್ರೋಹದ ಆರೋಪದಡಿ ಬಂಧಿಸಲಾಗಿದ್ದು, ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಬಾಂಗ್ಲಾದೇಶ ಪೊಲೀಸರು ಚಿನ್ಮಯ ಪ್ರಭು ಅವರ ಪೊಲೀಸ್ ಬಂಧನದ ಬೇಡಿಕೆ ಇಟ್ಟಿರಲಿಲ್ಲ. ಹೀಗಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜೈಲಿನಲ್ಲಿ ಅವರಿಗೆ ಎಲ್ಲಾ ಧಾರ್ಮಿಕ ಸೌಲಭ್ಯಗಳನ್ನು ನೀಡಬೇಕು ಎಂದೂ ನ್ಯಾಯಾಲಯ ಹೇಳಿದೆ.

ವಿದೇಶಾಂಗ ಸಚಿವ ಜಯಶಂಕರ ರವರು ಈ ವಿಷಯದಲ್ಲಿ ತಕ್ಷಣ ಕ್ರಮಕೈಗೊಳ್ಳಬೇಕು ! – ಕೇಂದ್ರ ಸಚಿವ ಸುಕಾಂತ ಮಜುಮದಾರ

ಚಿನ್ಮಯ ಪ್ರಭು ರವರ ಬಂಧನದ ನಂತರ, ಭಾರತದ ಕೇಂದ್ರ ಸಚಿವ ಸುಕಾಂತ ಮಜುಮದಾರರು `ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, `ಚಿನ್ಮಯ ಪ್ರಭುರವರನ್ನು ಅನ್ಯಾಯವಾಗಿ ಬಂಧಿಸಲಾಗಿದೆ, ನಾನು ಇದನ್ನು ಖಂಡಿಸುತ್ತೇನೆ. ಅವರು ಬಾಂಗ್ಲಾದೇಶದಲ್ಲಿನ ಸನಾತನಿ ಹಿಂದೂ ಸಮುದಾಯದ ಅಧಿಕಾರಗಳಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದರು. ಈ ವಿಷಯವನ್ನು ಅವರು ಗಂಭೀರವಾಗಿ ಪರಿಗಣಿಸಿ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ನಾನು ವಿದೇಶಾಂಗ ಸಚಿವರಾದ ಡಾ. ಜಯಶಂಕರ ಅವರಲ್ಲಿ ನನ್ನ ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.

ಭಾರತ ಸರಕಾರವು ತಕ್ಷಣವೇ ಬಾಂಗ್ಲಾದೇಶ ಸರಕಾರದೊಂದಿಗೆ ಮಾತನಾಡಬೇಕು! – ಇಸ್ಕಾನ ಮನವಿ

ಚಿನ್ಮಯ ಪ್ರಭುರವರ ಬಂಧನದ ನಂತರ, `ಇಸ್ಕಾನ್’ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. `ಇಸ್ಕಾನ ಬಾಂಗ್ಲಾದೇಶದ’ ಮುಖ್ಯಸ್ಥರಾಗಿರುವ ಚಿನ್ಮಯ ಕೃಷ್ಣ ದಾಸರವರನ್ನು ಢಾಕಾ ಪೊಲೀಸರು ಬಂಧಿಸಿರುವ ಆಘಾತಕಾರಿ ಸುದ್ದಿ ನಮಗೆ ದೊರೆತಿದೆ. ಇಸ್ಕಾನಿಗೆ ಭಯೋತ್ಪಾದನೆಯೊಂದಿಗೆ ಸಂಬಂಧವಿದೆ ಎಂದು ಆರೋಪಿಸಿರುವುದು ತಪ್ಪು ಮತ್ತು ನಿಂದನೀಯವಾಗಿದೆ.

ಇಸ್ಕಾನ ಭಾರತ ಸರಕಾರಕ್ಕೆ ತಕ್ಷಣ ಕ್ರಮಕೈಗೊಳ್ಳುವಂತೆ ಮತ್ತು ಬಾಂಗ್ಲಾದೇಶ ಸರಕಾರದೊಂದಿಗೆ ಮಾತನಾಡಲು ವಿನಂತಿಸಿದೆ. ನಾವು ಶಾಂತಿಯುತ ಮಾರ್ಗದಿಂದ ಭಕ್ತಿಯ ಕಾರ್ಯವನ್ನು ಮಾಡುತ್ತಿದ್ದೇವೆ. ಬಾಂಗ್ಲಾದೇಶ ಸರಕಾರವು ಆದಷ್ಟು ಬೇಗ ಚಿನ್ಮಯ ಕೃಷ್ಣ ದಾಸರವರನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು. ಭಕ್ತರ ಸುರಕ್ಷತೆಗಾಗಿ ನಾವು ಭಗವಾನ ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತೇವೆ’ ಎಂದು ಹೇಳಿದೆ.

ಹಿಂದೂಗಳು ಚಳವಳಿಯನ್ನು ಮುಂದುವರಿಸಬೇಕು ! – ಚಿನ್ಮಯ ಪ್ರಭು

ನ್ಯಾಯಾಲಯಕ್ಕೆ ಕರೆದೊಯ್ಯುವಾಗ, ಚಿನ್ಮಯ ಪ್ರಭುರವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಬಾಂಗ್ಲಾದೇಶದ ಹಿಂದೂಗಳಿಗೆ ಆಯೋಜನೆಯಂತೆ ಪ್ರತಿಭಟನೆಯನ್ನು ಮುಂದುವರಿಸಲು ಕರೆ ನೀಡಿದರು.