Pandit Dhirendra Shastri Guidance: ಬೀದಿಗಿಳಿಯಿರಿ, ಇಲ್ಲದಿದ್ದರೆ ನಿಮ್ಮ ಎಲ್ಲಾ ದೇವಸ್ಥಾನಗಳು ಮಸೀದಿಗಳಾಗುತ್ತವೆ ! – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರಿಂದ ಬಾಂಗ್ಲಾದೇಶದ ಹಿಂದೂಗಳಿಗೆ ಕರೆ

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ಝಾನ್ಸಿ (ಉತ್ತರ ಪ್ರದೇಶ) – ಬಾಂಗ್ಲಾದೇಶದ ಹಿಂದೂಗಳು ಹೇಡಿಗಳಾಗಿದ್ದರೆ, ಅವರಿಗೆ ತಮ್ಮನ್ನು (ಈ ಪರಿಸ್ಥಿತಿಯಿಂದ) ಬಿಡುಗಡೆ ಗೊಳಿಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ನಿಮ್ಮ ಮೂಲಕ (ಸುದ್ದಿ ವಾಹಿನಿ) ನಮ್ಮ ಸಂದೇಶ ಬಾಂಗ್ಲಾದೇಶದ ಹಿಂದೂಗಳಿಗೆ ತಲುಪಿದರೆ, ಯಾವ ರೀತಿ ಇಲ್ಲಿ ಪಾದಯಾತ್ರೆ ನಡೆಯುತ್ತಿದೆಯೋ, ಅದೇ ರೀತಿ ನೀವೂ ಬೀದಿಗಿಳಿಯಿರಿ. ಸಂಘಟಿತರಾಗಿ ನಿಮ್ಮ ಸಂಸ್ಕೃತಿಯನ್ನು ರಕ್ಷಿಸುವ ರಕ್ಷಕನನ್ನು (ಚಿನ್ಮಯ ಪ್ರಭು ಅವರನ್ನು) ರಕ್ಷಿಸಿರಿ. ಅವರನ್ನು ಹೊರಗೆ ತೆಗೆಯಿರಿ. ಇಲ್ಲದಿದ್ದರೆ ಒಂದೊಂದಾಗಿ ನಿಮ್ಮ ದೇವಸ್ಥಾನಗಳು ಮಸೀದಿಗಳಾಗಿ ಪರಿವರ್ತನೆಯಾಗುತ್ತವೆ. ನಿಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಮತಾಂತರಗೊಳ್ಳುತ್ತಾರೆ ಅಥವಾ ಕೊಲ್ಲಲ್ಪಡುತ್ತಾರೆ. ಭಾರತದ ಹಿಂದೂಗಳೂ ಇದನ್ನು ಗಮನಿಸಬೇಕು ಎಂದು ಮಧ್ಯಪ್ರದೇಶದ ಛತ್ತರಪುರದ ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಇಲ್ಲಿ ಕರೆ ನೀಡಿದರು. ಅವರು ಬಾಗೇಶ್ವರದಿಂದ ಓರಚಾದವರೆಗೆ ಸನಾತನ ಹಿಂದೂ ಜಾಗೃತಿ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಪಾದಯಾತ್ರೆ ಝಾನ್ಸಿ ತಲುಪಿದಾಗ ಅವರು ಮಾತನಾಡಿದರು.

ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಮಾಡಿದ ಮಾರ್ಗದರ್ಶನ :

1. ನಾವು ಬಾಂಗ್ಲಾದೇಶದ ಹಿಂದೂಗಳೊಂದಿಗೆ ಇದ್ದೇವೆ !

ನಾನು ಹಗಲು ರಾತ್ರಿ ನನ್ನ ಪ್ರಾಣವನ್ನೇ ಅಪಾಯಕ್ಕಿಟ್ಟು ಬದುಕುತ್ತಿದ್ದೇನೆ. 100 ಕೋಟಿ ಹಿಂದೂಗಳ ಕಾಳಜಿಯಿಂದಾಗಿಯೇ ನಾವು ಹಳ್ಳಿಗಳಲ್ಲಿ ಮತ್ತು ಬೀದಿಗಳಲ್ಲಿ ಕುಳಿತು ಹಿಂದುಳಿದ ವರ್ಗ ಮತ್ತು ಪಂಗಡದವರ ಜೊತೆ ಚರ್ಚಿಸುತ್ತಿದ್ದೇವೆ. ನಾವು ಬಾಂಗ್ಲಾದೇಶದ ಹಿಂದೂಗಳ ಜೊತೆ ನಿಲ್ಲುತ್ತೇವೆ. ನಾವು ನಿಮಗೆ ಕರೆ ನೀಡುತ್ತೇವೆ ಬೀದಿಗಿಳಿಯಿರಿ, ಇಲ್ಲದಿದ್ದರೆ ಮುಂದೆ ಯಾರೂ ಹಿಂದೂಗಳ ಪರವಾಗಿ ಧ್ವನಿ ಎತ್ತುವುದಿಲ್ಲ.

2. ಮತಾಂಧರು ಎಲ್ಲಿ ಹೆಚ್ಚು ಇದ್ದಾರೆಯೋ ಅಲ್ಲಿ ಹಿಂಸಾಚಾರ ಮಾಡುತ್ತಾರೆ !

ಭಾರತದ ಎಷ್ಟೋ ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಎಲ್ಲಿ ಅವರ(ಮತಾಂಧರು) ಸಂಖ್ಯೆ ಹೆಚ್ಚು ಇರುತ್ತದೆಯೋ, ಅಲ್ಲಿ ಘಟಿಸುತ್ತದೆ. ನಮ್ಮ ಸುತ್ತ ಮುತ್ತಲೂ ಇಂತಹ ಜನರು ಇದ್ದಾರೆ; ಆದರೆ ಅವರು ಇಲ್ಲಿ ಹಾಗೆ ಮಾಡುವುದಿಲ್ಲ. ಎಲ್ಲಿ ಅವರ ಸಂಖ್ಯೆ ಹೆಚ್ಚು ಇರುತ್ತದೆ ಅಲ್ಲಿ ಅವರು ಮಾಡುತ್ತಾರೆ. ಅವರು (ಮತಾಂಧ ಮುಸ್ಲಿಮರು) ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಯೋಜಿಸುತ್ತಾರೆ ಮತ್ತು ಅವರ ದಾಳಿಯನ್ನು ಮೊದಲೇ ಯೋಜಿಸುತ್ತಾರೆ ಎಂದು ಸಾಬೀತುಪಡಿಸುತ್ತದೆ. ಕಲ್ಲು ತೂರಾಟ, ಬೆಂಕಿ ಅವಘಡ, ಪೆಟ್ರೋಲ್ ಬಾಂಬ್ ಎಸೆಯುವವರಿಂದ ಹಿಡಿದು ಎಲ್ಲರಿಗೂ ಹೊರಗಿನಿಂದ ಅಲ್ಲಿಗೆ ಕರೆತರಲಾಗುತ್ತದೆ ಎಂದು ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಆರೋಪಿಸಿದರು.

3. ನಾವು 1 ಕೋಟಿ ಕಟ್ಟರ ಹಿಂದೂಗಳು ಸೇರಿದರೆ, ಸಾವಿರಾರು ವರ್ಷಗಳ ವರೆಗೂ ಸನಾತನದತ್ತ ಬೆರಳು ತೋರಿಸಲು ಯಾರಿಂದಲೂ ಸಾಧ್ಯವಿಲ್ಲ !

2008ರ ಇದೇ ದಿನ ಮುಂಬಯಿ ಮೇಲೆ ಭಯೋತ್ಪಾದಕರ ದಾಳಿ ನಡೆದಿತ್ತು. ಒಂದು ವೇಳೆ ನನಗೆ 100 ಕೋಟಿ ಹಿಂದೂಗಳಲ್ಲಿ 1 ಕೋಟಿ ಹಿಂದೂಗಳು ಸಿಕ್ಕರೆ, ಸಾವಿರಾರು ವರ್ಷಗಳ ವರೆಗೆ ಯಾರೂ ಸನಾತನದತ್ತ ಬೆರಳು ತೋರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

4. ಭಾರತ ಬಾಂಗ್ಲಾದೇಶವಾಗುವ ಹಾದಿಯಲ್ಲಿ ! – ಕೇಂದ್ರ ಸಚಿವ ಗಿರಿರಾಜ ಸಿಂಗ

ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಗಿರಿರಾಜ ಸಿಂಗ ಮಾತನಾಡಿ, ‘ಭಾರತ ಬಾಂಗ್ಲಾದೇಶವಾಗುವ ಹಾದಿಯಲ್ಲಿದೆ’ ಎಂಬ ವಿಚಾರದಿಂದ ನಮ್ಮ ಮನಸ್ಸು ತುಂಬಾ ಭಯಭೀತಗೊಂಡಿದೆ. ಕಾನೂನನ್ನು ಕೈಗೆತ್ತಿಕೊಂಡು ಸಂವಿಧಾನವನ್ನು ಅಣಕಿಸಲಾಗುತ್ತಿದೆ. ನಾಳೆ ಅವರು ಯಾರ ಮಾತನ್ನೂ ಕೇಳುವುದಿಲ್ಲ. ದೇಶದ ಪರಿಸ್ಥಿತಿಯು ಕೈಮೀರುತ್ತದೆ; ಆಗ ಹಿಂದೂಗಳನ್ನು ರಕ್ಷಿಸುವವರು ಯಾರು ? ಆದ್ದರಿಂದ ನಮ್ಮ ಶಕ್ತಿಯನ್ನು ಉಳಿಸಿಕೊಳ್ಳೋಣ. ‘ನಿಮ್ಮ ಸಂಸ್ಕೃತಿಯನ್ನು ಉಳಿಸಲು ಗಟ್ಟಿಯಾಗಿ ಧ್ವನಿ ಎತ್ತಿರಿ.’ ಇದನ್ನು ಹಿಂದೂಗಳ ಮನಸ್ಸಿನ ಮೇಲೆ ಪ್ರಭಾವ ಬೀರಲು ಈ ಪಾದಯಾತ್ರೆಯ ಆವಶ್ಯಕತೆಯಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಮಾತ್ರವಲ್ಲ, ಭಾರತದಲ್ಲಿಯೂ ಇದೇ ರೀತಿಯ ಕರೆ ನೀಡಬೇಕು ! ಈಗ ಭಾರತ ಸೇರಿದಂತೆ ಜಗತ್ತಿನ ಎಲ್ಲ ಹಿಂದೂಗಳು ‘ಏಕ್ ಹೈ ತೋ ಸೀಫ್ ಹೈ’ (ಒಗ್ಗಟ್ಟಾಗಿದ್ದರೆ ನಾವು ಸುರಕ್ಷಿತವಾಗಿರುತ್ತೇವೆ) ಎಂದು ಯೋಚಿಸಿ ಒಂದಾಗಬೇಕು. ಮುಸಲ್ಮಾನರು ಜಗತ್ತಿನಲ್ಲಿ ಎಲ್ಲಿಯಾದರೂ, ಧಾರ್ಮಿಕ ಹಿಂಸಾಚಾರ ನಡೆದರೆ, ಅವರು ಸಂಘಟಿತರಾಗುತ್ತಾರೆ ಈಗ ಹಿಂದೂಗಳು ಹಾಗೆಯೇ ಮಾಡುವುದು ಅಗತ್ಯವಾಗಿದೆ !