ಕುಂಭಮೇಳ ಸಾಂಕೇತಿಕವಾಗಿರಲಿ !

ಹರಿದ್ವಾರದ ಮಹಾಕುಂಭ ಮೇಳದಲ್ಲಿ ಹೆಚ್ಚುತ್ತಿರುವ ಕೊರೋನದ ಸಾಂಕ್ರಾಮಿಕವನ್ನು ನೋಡುತ್ತಾ ಕುಂಭಮೇಳವನ್ನು ಸಾಂಕೇತಿಕವಾಗಿರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ. ಅವರು ಈ ಬಗ್ಗೆ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿಯವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದರು. ಈ ವಿಷಯದ ಮಾಹಿತಿಯನ್ನು ಪ್ರಧಾನಿ ಮೋದಿಯವರು ಟ್ವೀಟ್ ಮಾಡಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕೊರೋನಾ ಪೀಡಿತ ಮೃತದೇಹಗಳ ಅಂತ್ಯಕ್ರಿಯೆಗೆ ೩೫ ಸಾವಿರದಿಂದ ೪೦ ಸಾವಿರ ಹಣವನ್ನು ಅಕ್ರಮವಾಗಿ ತೆಗೆದುಕೊಳ್ಳಲಾಗುತ್ತಿದೆ !

ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಕೊರೋನಾ ಪೀಡಿತ ರೋಗಿಗಳ ಶವಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತಿಲ್ಲ, ಬದಲಾಗಿ ಆಂಬ್ಯುಲೆನ್ಸ್‌ನಿಂದ ಬೆಂಗಳೂರು ಮಹಾನಗರ ಪಾಲಿಕೆ ಸ್ಥಾಪಿಸಿದ ವಿದ್ಯುತ್ ಶವಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.

ಕುಂಭಮೇಳ ಏಪ್ರಿಲ್ ೧೭ ರಂದು ಕೊನೆಗೊಳ್ಳಲಿದೆ !

ಹೆಚ್ಚಾಗುತ್ತಿರುವ ಕೊರೋನಾದ ಸೋಂಕಿನ ಕಾರಣವನ್ನು ನೀಡುತ್ತಾ ಕುಂಭ ಮೇಳದಲ್ಲಿ ಭಾಗವಹಿಸಿದ ನಿರಂಜನಿ ಅಖಾಡದ ಸಚಿವ ಮಹಂತ ರವೀಂದ್ರ ಪುರಿ ಅವರು ಕುಂಭಮೇಳದ ಮುಕ್ತಾಯವನ್ನು ಘೋಷಿಸಿದ್ದಾರೆ. ಕುಂಭಮೇಳವು ಏಪ್ರಿಲ್ ೧೭ಕ್ಕೆ ಕೊನೆಗೊಳ್ಳಲಿದೆ ಎಂದು ಹೇಳಿದರು.

ಪಾಟಲೀಪುತ್ರ (ಬಿಹಾರ) ದ ದೊಡ್ಡ ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಮ್ಲಜನಕದ ಬದಲು ಬಿಸ್ಲೇರಿ ನೀರನ್ನು ನೀಡಲಾಗುತ್ತಿದೆ !

ನಗರದ ಎರಡನೇ ಅತಿದೊಡ್ಡ ಆಸ್ಪತ್ರೆಯಾದ ಎನ್.ಎಂ.ಸಿ.ಎಚ್.ನಲ್ಲಿ ಅನೇಕ ಕೊರೋನಾ ರೋಗಿಗಳು ಸಾಯುತ್ತಿದ್ದಾರೆ. ಆಸ್ಪತ್ರೆಯ ಹೊರಗೆ ಆಂಬುಲೆನ್ಸ್‍ಗಳು ಸಾಲುಗಟ್ಟಿ ನಿಂತಿವೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಇದ್ದುದರಿಂದ ಅನೇಕ ರೋಗಿಗಳು ಆಂಬ್ಯುಲೆನ್ಸ್‍ಗಳಲ್ಲಿಯೇ ಸಾಯುತ್ತಿದ್ದಾರೆ.

ಕೊರೋನಾವನ್ನು ತಡೆಯಲು ಮಠಗಳಲ್ಲಿ ಮತ್ತು ದೇವಾಲಯಗಳಲ್ಲಿ ಅಗ್ನಿಹೋತ್ರವನ್ನು ಮಾಡಲು ಆದೇಶ ನೀಡುವೆವು! – ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಘೋಷಣೆ

ಅನೇಕ ಮಠಗಳಲ್ಲಿ ಮತ್ತು ದೇವಾಲಯಗಳಲ್ಲಿ ಅಗ್ನಿಹೋತ್ರವನ್ನು ನಡೆಸಲಾಗುತ್ತಿದೆ. ಸರಕಾರವು ಸರಕಾರಿ ಮಟ್ಟದಲ್ಲಿ ನಾಗರಿಕರಿಗೆ ಹಾಗೂ ಎಲ್ಲಿ ಸಾಧ್ಯವೋ ಅಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿಹೋತ್ರ ಮಾಡುವಂತೆ ಆದೇಶ ನೀಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಕೊರೋನಾದಿಂದ ಸಾವನ್ನಪ್ಪಿದ ಲಕ್ಷ್ಮಣಪುರಿಯ ನಿವೃತ್ತ ಜಿಲ್ಲಾ ನ್ಯಾಯಾಧೀಶರ ಪತ್ನಿ

ಬಿಜೆಪಿಯ ಆಡಳಿತದಲ್ಲಿರುವ ರಾಜ್ಯದಲ್ಲಿ ಇಂತಹ ಘಟನೆ ಸಂಭವಿಸುವುದು ರಾಷ್ಟ್ರಪ್ರೇಮಿಗಳಿಗೆ ಅಪೇಕ್ಷಿತವಿಲ್ಲ. ಇಂತಹ ಘಟನೆಗಳನ್ನು ತಡೆಗಟ್ಟಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು !

‘ವಯಸ್ಸಾದವರೆಲ್ಲಾ ಸಾಯಲೇ ಬೇಕಾಗುತ್ತದೆ !'(ಅಂತೆ)

ಇಂತಹ ಹೇಳಿಕೆಗಳನ್ನು ನೀಡುವ ಸಚಿವರು ಜನತೆಯ ಬಗ್ಗೆ ಎಷ್ಟು ಸಂವೇದನಾಶೀಲರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ ! ಕೊರೋನಾದಂತಹ ವಿಪತ್ತಿನ ಕಾಲದಲ್ಲಿ ಆಡಳಿತಾಧಿಕಾರಿಗಳು, ಆಡಳಿತವು ಜನತೆಯನ್ನು ರಕ್ಷಿಸಲು ಅಸಮರ್ಥವಾಗಿರುವುದರಿಂದ ಈಗ ಜನರು ದೇವರ ಆರಾಧನೆಯನ್ನು ಮಾಡುವುದೇ ಆವಶ್ಯಕವಾಗಿದೆ !

೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಬಾಬಾ ಬೈದ್ಯನಾಥ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ !

ಹಿಂದೂ ದೇವಾಲಯಗಳಿಗೆ ಯಾರು ಹೋಗಬೇಕು ಮತ್ತು ಯಾರು ಹೋಗಬಾರದು ಎಂಬ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ನೀತಿ ಸಂಹಿತೆಯನ್ನು ರೂಪಿಸುವುದು ಅಗತ್ಯವಾಗಿದೆ. ಕೇವಲ ರಾಜಕೀಯ ಲಾಭಕ್ಕಾಗಿ ಮಾತ್ರ ದೇವಾಲಯಕ್ಕೆ ಬರುವ ಇತರ ಧರ್ಮದವರನ್ನು ನಿಷೇಧಿಸುವುದು ಅನಿವಾರ್ಯವಾಗಿದೆ !

ಹರಿದ್ವಾರವನ್ನು ಹಿಂದೂಯೇತರರಿಂದ ರಕ್ಷಿಸುವುದು ಅವಶ್ಯಕ ! – ಸ್ವಾಮಿ ಅವಧೇಶಾನಂದ, ಜುನಾ ಅಖಾಡ

ಉತ್ತರಾಖಂಡವನ್ನು ಉತ್ತರ ಪ್ರದೇಶದಿಂದ ಬೇರ್ಪಡಿಸಿದ ನಂತರ, ಹರಿದ್ವಾರದ ‘ಹರಕಿ ಪೌಡಿ’ಯ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಮುಸಲ್ಮಾನರು ಭೂಮಿಯನ್ನು ಖರೀದಿಸಲು ಅಥವಾ ಬಾಡಿಗೆಗೆ ನೀಡಲು ಸಾಧ್ಯವಿಲ್ಲ ಎಂಬ ಕಾನೂನು ಜಾರಿಗೆ ಬಂದಿತ್ತು; ಆದರೆ ಪ್ರಸ್ತುತ, ಮುಸಲ್ಮಾನರು ಈ ಪ್ರದೇಶವನ್ನು ಅಕ್ರಮವಾಗಿ ಅತಿಕ್ರಮಿಸಿದ್ದಾರೆ.

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪಾದ್ರಿ ಸೇರಿದಂತೆ ನಾಲ್ವರ ವಿರುದ್ಧ ಅಪರಾಧ ದಾಖಲು

ಇಂತಹ ಪ್ರಕರಣವು ತಪ್ಪಿ ಓರ್ವ ಅರ್ಚಕನ ಹೆಸರು ಇರುತ್ತಿದ್ದರೆ, ಪ್ರಸಾರ ಮಾಧ್ಯಮದವರು ಪ್ರಪಂಚದಾದ್ಯಂತ ಬೊಬ್ಬೆ ಹೊಡೆಯುತ್ತಿದ್ದರು. ಈಗ ಅವರು ಇಂಗು ತಿಂದ ಮಂಗನಂತೆ ಮೌನವಾಗಿದ್ದಾರೆ. ಇದರಿಂದ ಭಾರತದಲ್ಲಿ ಪ್ರಸಾರಮಾಧ್ಯಮಗಳೆಲ್ಲ ಕ್ರೈಸ್ತೀಕರಣಗೊಂಡಿವೆ ಎಂಬುದು ಸ್ಪಷ್ಟವಾಗುತ್ತದೆ !