Vande Bharat Express : ‘ವಂದೇ ಭಾರತ ಎಕ್ಸ್ಪ್ರೆಸ್’ ಪನವೇಲ ಬದಲು ಕಲ್ಯಾಣದ ಕಡೆಗೆ ಹೊರಟಿತು !

  • ತಾಂತ್ರಿಕ ಅಡಚಣೆಯ ಪರಿಣಾಮ

  • ನಿರೀಕ್ಷಿತ ಸಮಯದಗಿಂತಲೂ ಒಂದುವರೆ ಗಂಟೆ ತಡ

ಮುಂಬಯಿ – ಮುಂಬಯಿನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ನಿಂದ ಮಡಗಾವ ವರೆಗೆ ಹೋಗುವ ‘ವಂದೇ ಭಾರತ ಎಕ್ಸ್ಪ್ರೆಸ್’ ದಿವಾ ರೈಲು ನಿಲ್ದಾಣದಿಂದ ಪನವೇಲಗೆ ಹೋಗದೆ ಕಲ್ಯಾಣದ ಕಡೆಗೆ ಸಾಗಿತು. ತಪ್ಪು ಅರಿವಿಗೆ ಬಂದ ನಂತರ ಅದನ್ನು ಕಲ್ಯಾಣ ರೈಲು ನಿಲ್ದಾಣಕ್ಕೆ ತರಲಾಯಿತು. ಅದರ ನಂತರ ಮುಂದೆ ಕೆಲವು ಸಮಯದಲ್ಲಿ ಅದು ಗೋವಾದ ಕಡೆಗೆ ಹೊರಟಿತು. ದಾರಿ ತಪ್ಪಿರುವುದರಿಂದ ರೈಲು ಮಡಗಾವ ನಿಲ್ದಾಣಕ್ಕೆ ತಲುಪುವುದಕ್ಕಾಗಿ ೯೦ ನಿಮಿಷ ತಡವಾಯಿತು. ಈ ಘಟನೆ ಬೆಳಿಗ್ಗೆ ೬.೧೦ ಗಂಟೆಗೆ ಘಟಿಸಿದೆ. ಇದು ಸಂಪೂರ್ಣ ಸಿಗ್ನಲ್ ವ್ಯವಸ್ಥೆಯಲ್ಲಿನ ತೊಂದರೆಯಿಂದ ಆಗಿದೆ. ಈ ಎಲ್ಲಾ ಘಟನೆಯಿಂದ ಮುಂಬಯಿಯ ಮಧ್ಯ ರೈಲ್ವೆಯ ಲೋಕಲ್ ಸೇವೆ ಅಸ್ತವ್ಯಸ್ತ ಗೊಂಡಿತು. ಅದರ ಪರಿಣಾಮ ಕೆಲಸಕ್ಕೆ ಹೋಗುವ ಪ್ರಯಾಣಿಕರು ಅನುಭವಿಸಬೇಕಾಯಿತು.