ಹಿಂದೂ ವಿರೋಧಿ ಪ್ರಸಿದ್ಧಿ ಮಾಧ್ಯಮಗಳ ಪಿತೂರಿಯ ವಿರುದ್ಧ ಧರ್ಮಾಭಿಮಾನಿಗಳಿಂದ #Hinduphobic_Media ಟ್ವಿಟರ್ ಟ್ರೆಂಡ್ !

ರಾಷ್ಟ್ರೀಯ ಮಟ್ಟದಲ್ಲಿ ೫ ನೇ ಸ್ಥಾನ !

ಮುಂಬಯಿ – ಕಳೆದ ಕೆಲವು ತಿಂಗಳಿಂದ ‘ಫೇಸ್‍ಬುಕ್’ನಿಂದ ಹಿಂದುತ್ವನಿಷ್ಠ ಮತ್ತು ಹಿಂದುತ್ವನಿಷ್ಠ ಸಂಘಟನೆಗಳ ಪುಟಗಳನ್ನು ಯಾವುದೇ ಪೂರ್ವಕಲ್ಪನೆ ನೀಡದೇ ಬಂದ್ ಮಾಡಲಾಗಿದೆ. ಈ ಬಗ್ಗೆ ಕೆಲವು ಹಿಂದೂದ್ವೇಷಿ ಪ್ರಸಾರ ಮಾಧ್ಯಮಗಳು, ಉದಾ. ‘ಟೈಮ್’ ನಿಯತಕಾಲಿಕೆ, ಅದೇರೀತಿ ‘ದ ವಾಯರ್’ ಹಾಗೂ ‘ದ ಮೀಟಿಯಮ್’ ಈ ಸುದ್ದಿ ಜಾಲತಾಣಗಳ ಮಾಧ್ಯಮದಿಂದ ಪ್ರಕಾಶಿಸಲಾದ ಲೇಖನಗಳಲ್ಲಿ ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ, ಸನಾತನ ಪ್ರಭಾತ ಇತ್ಯಾದಿಗಳನ್ನು ಹಿಂಸಾತ್ಮಕ ಮತ್ತು ಉಗ್ರವಾದಿ ಎಂದು ತೋರಿಸುವ ಪ್ರಯತ್ನಿಸಿ ಅದನ್ನು ಕಳಂಕಿತಗೊಳಿಸಲು ಪ್ರಯತ್ನಿಸಲಾಯಿತು. ‘ಟೈಮ್’ ನಿಯತಕಾಲಿಕೆಯು ಕಳುಹಿಸಿದ ವರದಿಯ ಮೇರೆಗೆ ಫೇಸ್‍ಬುಕ್ ಕೆಲವು ಹಿಂದುತ್ವನಿಷ್ಠ ಸಂಘಟನೆಗಳ ಪುಟಗಳ ಮೇಲ ನಿರ್ಬಂಧ ಹೇರಿತು. ಪ್ರಸಿದ್ಧಿ ಮಾಧ್ಯಮಗಳು ಮತ್ತು ಫೇಸ್‍ಬುಕ್ ಇವೆರಡೂ ಜಂಟಿಯಾಗಿ ಒಂದು ಪಿತೂರಿಯ ಮೂಲಕ ಹಿಂದೂಗಳನ್ನು ಮಟ್ಟಹಾಕಿ ಅವರ ಧ್ವನಿಯನ್ನು ಅದಮಲು ಪ್ರಯತ್ನಿಸುತ್ತಿವೆ. ಈ ಪಿತೂರಿಯ ವಿರುದ್ಧ ಹಿಂದೂ ಧರ್ಮಾಭಿಮಾನಿಗಳಿಂದ ಜೂನ್ ೨೭ ರಂದು #Hinduphobic_Media ಈ ಹೆಸರಿನ ಹ್ಯಾಷ್‍ಟ್ಯಾಗ್ ಟ್ರೆಂಡ್ ಮಾಡಲಾಗಿತ್ತು. ಅದು ರಾಷ್ಟ್ರೀಯ ಟ್ರೆಂಡ್‍ನಲ್ಲಿ ೫ ನೇ ಸ್ಥಾನದಲ್ಲಿತ್ತು. ಇದರಲ್ಲಿ ೩೬ ಸಾವಿರಕ್ಕಿಂತಲೂ ಹೆಚ್ಚು ಟ್ವೀಟ್ಸ್‍ಗಳನ್ನು ಮಾಡಲಾಯಿತು.