Khalistan Terrorist Arrested : ಮುಂಬಯಿಯಿಂದ ಖಲಿಸ್ತಾನಿ ಭಯೋತ್ಪಾದಕನ ಬಂಧನ

ಖಲಿಸ್ತಾನಿ ಭಯೋತ್ಪಾದಕ ಜತೀಂದರ ಸಿಂಗ ಉರ್ಫ್ ಜ್ಯೋತಿ

ಅಮೃತಸರ (ಪಂಜಾಬ) – ರಾಷ್ಟ್ರೀಯ ತನಿಖಾ ದಳವು ಮುಂಬಯಿಯಿಂದ ಖಲಿಸ್ತಾನಿ ಭಯೋತ್ಪಾದಕ ಜತೀಂದರ ಸಿಂಗ ಉರ್ಫ್ ಜ್ಯೋತಿ ಇವನನ್ನು ಬಂಧಿಸಿದೆ. ಈತನು ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ ಸಿಂಗ್ ಉರ್ಫ್ ಲಾಂಡಾ ಮತ್ತು ಗೂಂಡಾ ಬಚಿತರಸಿಂಗ ಉರ್ಫ್ ಪವಿತ್ರಾ ಬಟಾಲಾ ಇವನ ಸಹಚರನಾಗಿದ್ದಾನೆ. ಜುಲೈ 2024 ರಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆದಾರ ಬಲ್ಜಿತ ಸಿಂಗ್ ಉರ್ಫ್ ರಾಣಾ ಭಾಯಿಯನ್ನು ಬಂಧಿಸಿದ ನಂತರ ಜತೀಂದರ ಪರಾರಿಯಾಗಿದ್ದನು. ಜತಿಂದರ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ‘ಬಬ್ಬರ್ ಖಾಲ್ಸಾ ಇಂಟರ್ನ್ಯಾಶನಲ್’ ನ ಸದಸ್ಯನಾಗಿದ್ದಾನೆ ಮತ್ತು ಲಾಂಡಾದ ನಿಕಟ ಸಹವರ್ತಿ ಬಟಾಲಾ ಇವನ ಸಹವರ್ತಿಯಾಗಿದ್ದಾನೆ. ಜತೀಂದರ ಮಧ್ಯಪ್ರದೇಶದಿಂದ 10 ಪಿಸ್ತೂಲ್‌ಗಳನ್ನು ತಂದು ಮುಂಬಯಿಯಿಂದ ಬಂಧಿಸಲಾದ ಪಂಜಾಬಿನ ಲಾಂಡಾ ಮತ್ತು ಬಟಾಲಾದಲ್ಲಿನ ಭಯೋತ್ಪಾದಕರಿಗೆ ನೀಡಿದ್ದಾನೆ ಎಂದು ತನಿಖೆಯಿಂದ ಬಹಿರಂಗವಾಗಿದೆ.