ದೆಹಲಿಯಲ್ಲಿ ನುಸುಳುಕೊರರಿಗೆ ಭಾರತೀಯ ಗುರುತಿನ ಚೀಟಿ ನಿರ್ಮಿಸಿ ಕೊಡುತ್ತಿದ್ದ ೧೧ ಜನರ ಗ್ಯಾಂಗ್‌ನ ಬಂಧನ

ನವ ದೆಹಲಿ – ಪ್ರಸ್ತುತ ದೆಹಲಿಯಲ್ಲಿ ಬಾಂಗ್ಲಾದೇಶಿ ನುಸುಳುಕೋರರ ವಿರುದ್ಧ ಬೃಹತ್ ಅಭಿಯಾನ ನಡೆಸಲಾಗುತ್ತಿದೆ. ಇದರ ಹಿನ್ನೆಲೆಯಲ್ಲಿ ನುಸುಳುಕೋರರಿಗೆ ಭಾರತೀಯ ಗುರುತಿನ ಚೀಟಿ ತಯಾರಿಸುವ ಬೃಹತ್ ಗ್ಯಾಂಗ್‌ನ ೧೧ ಜನರನ್ನು ಬಂಧಿಸಲಾಗಿದೆ. ಈ ಗ್ಯಾಂಗ್‌ನಲ್ಲಿ ಆಧಾರ ಕಾರ್ಡ್ ಆಪರೇಟರ್ ಮತ್ತು ತಾಂತ್ರಿಕ ತಜ್ಞರು ಸೇರಿದ್ದಾರೆ. ಅವರು ಇಲ್ಲಿಯವರೆಗೆ ತಯಾರಿಸಿರುವ ಗುರುತಿನ ಚೀಟಿಗಳು ಮತ್ತು ಅದು ಯಾರಿಂದ ತಯಾರಿಸಿದ್ದಾರೆ, ಇದರ ತನಿಖೆ ನಡೆಯುತ್ತಿದೆ.

ದೆಹಲಿಯ ಪೊಲೀಸ ಉಪಾಯುಕ್ತ ದಕ್ಷಿಣ ಅಂಕಿತ ಚೌಹಾಣ್ ಇವರು ಈ ಕಾರ್ಯಾಚರಣೆಯ ಮಾಹಿತಿ ನೀಡುವಾಗ, ಕಾಡಿನಿಂದ ಭಾರತಕ್ಕೆ ನುಗ್ಗಿರುವ ಬಾಂಗ್ಲಾದೇಶಿ ವಿವಿಧ ಮಾರ್ಗದಿಂದ ದೆಹಲಿಗೆ ತಲುಪಿ ಈ ಗ್ಯಾಂಗ್‌ಅನ್ನು ಭೇಟಿಯಾಗುತ್ತಿದ್ದರು. ಈ ಗ್ಯಾಂಗ್‌ನಲ್ಲಿ ಆಧಾರ ಕಾರ್ಡ್ ಕೇಂದ್ರ ಚಾಲಕ, ತಾಂತ್ರಿಕ ತಜ್ಞ ಮತ್ತು ಗುರುತಿನ ಚೀಟಿಯ ಮಾಹಿತಿ ಇರುವ ಜನರು ಇದ್ದಾರೆ. ಈ ಗ್ಯಾಂಗ್‌ ನುಸುಳುಕೋರರಿಗೆ ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮತ್ತು ಇತರ ಭಾರತೀಯ ದಾಖಲೆಗಳು ತಯಾರಿಸುತ್ತಿದ್ದರು. ಈ ಗ್ಯಾಂಗ್ ನಕಲಿ ದಾಖಲೆ ತಯಾರಿಸುವುದಕ್ಕಾಗಿ ಜಾಲತಾಣದ ಉಪಯೋಗ ಮಾಡುತ್ತಿದ್ದರು. ಈ ದಾಖಲೆಯ ಸಹಾಯದಿಂದ ನುಸುಳುಕೋರರು ದೆಹಲಿಯ ವಿವಿಧ ಭಾಗದಲ್ಲಿ ವಾಸಿಸುತ್ತಿದ್ದರು. ಈ ನುಸುಳುಕೋರರು ಗುಜರಿ ವಸ್ತುಗಳು ಸಂಗ್ರಹಿಸುವುದರಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುವವರಿಗೆ ಎಲ್ಲಾ ಕೆಲಸದಲ್ಲಿ ತೊಡಗಿದ್ದಾರೆ. ಅವರು ತಯಾರಿಸಿರುವ ಗುರುತಿನ ಚೀಟಿಯ ಉಪಯೋಗ ಮಾಡುತ್ತಾ ಯಾವ ನುಸುಳುಕೋರರು ಎಲ್ಲಿ ವಾಸಿಸುತ್ತಿದ್ದಾರೆ, ಇದನ್ನು ಕೂಡ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ಗ್ಯಾಂಗ್‌ನ ಜೊತೆಗೆ ಸಂಬಂಧಿತ ಇತರ ಜನರ ಮಾಹಿತಿ ಕೂಡ ಕಲೆ ಹಾಕಲಾಗುತ್ತಿದೆ. ಇಲ್ಲಿಯವರೆಗೆ ಅವರು ಎಷ್ಟು ನಕಲಿ ದಾಖಲೆಗಳು ತಯಾರಿಸಿದ್ದಾರೆ, ಇದರ ತನಿಖೆ ಕೂಡ ನಡೆಸುತ್ತಿದೆ.

ಸಂಪಾದಕೀಯ ನಿಲುವು

ಇಂತಹ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅದಕ್ಕಾಗಿ ಕಾನೂನಿನಲ್ಲಿ ಬದಲಾವಣೆ ಮಾಡುವುದು ಆವಶ್ಯಕವಾಗಿದೆ. ಇಂತಹ ಶಿಕ್ಷೆಯಿಂದಲೇ ಇಂತಹವರಿಗೆ ಕಡಿವಾಣ ಹಾಕಬಹುದು !