Protest Against Waqf : ಇಂದೂರು (ಮಧ್ಯಪ್ರದೇಶ) ಇಲ್ಲಿ ವಕ್ಫ್ ಬೋರ್ಡ್ ವಿಸರ್ಜಿಸಲು ಸಂತರ ನೇತೃತ್ವದಲ್ಲಿ ಪ್ರತಿಭಟನೆ !

ವೇದಿಕೆಯಲ್ಲಿ ಉಪಸ್ಥಿತರಿರುವ ಸಂತ-ಮಹಂತರು

ಇಂದೂರು (ಮಧ್ಯಪ್ರದೇಶ) – ವಕ್ಫ್ ಬೋರ್ಡ್ ವಿಸರ್ಜಿಸಲು ಸಂತರ ನೇತೃತ್ವದಲ್ಲಿ ಇತ್ತೀಚಿಗೆ ಹಿಂದುಗಳು ಇಲ್ಲಿಯ ರಾಜವಾಡ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಆ ಸಮಯದಲ್ಲಿ ವಕ್ಫ್ ಬೋರ್ಡ್ ಸಂಪೂರ್ಣವಾಗಿ ವಿಸರ್ಜಿಸಲು ಆಗ್ರಹಿಸುವ ಒಂದು ಮನವಿ ಪ್ರಧಾನ ಮಂತ್ರಿಗಳ ಹೆಸರಿಗೆ ನೀಡಲಾಯಿತು.

೧. ದೇವಸ್ಥಾನದ ಭೂಮಿಯಾಗಿರಲಿ, ಸರಕಾರಿ ಭೂಮಿಯಾಗಿರಲಿ ಅಥವಾ ಯಾರದೋ ಖಾಸಗಿ ಆಸ್ತಿ ಆಗಿರಲಿ, ಎಲ್ಲೆಡೆ ವಕ್ಫ್ ಬೋರ್ಡ್ ಹೆಸರಿನ ಮುಸಲ್ಮಾನ ಕಟ್ಟರವಾದಿಗಳು ಅಕ್ರಮವಾಗಿ ವಶಕ್ಕೆ ಪಡೆದಿದ್ದಾರೆ.
೨. ತತ್ಕಾಲಿನ ಕಾಂಗ್ರೆಸ್ ಸರಕಾರವು ಭಾರತೀಯ ಸಂವಿಧಾನದ ವಿರುದ್ಧವಾಗಿರುವಂತಹ ಕಾನೂನು ರೂಪಿಸಿ ವಕ್ಫ್ ಬೋರ್ಡ್ ಗೆ ಅಧಿಕಾರ ನೀಡಿದೆ.
೩. ಮುಸಲ್ಮಾನರನ್ನು ಓಲೈಸಲು ಕಾಂಗ್ರೆಸ್ ಸರಕಾರ ವಕ್ಫ್ ಬೋರ್ಡ್ ಗೆ ಮಿತಿಮೀರಿದ ಅಧಿಕಾರ ನೀಡಿದೆ, ಅದು ಈಗ ದೇಶಕ್ಕಾಗಿ ಅಪಾಯಕಾರಿ ಆಗುತ್ತಿದೆ.
೪. ಭಾರತದಲ್ಲಿನ ವಕ್ಫ್ ಬೋರ್ಡ್ ಹತ್ತಿರ ಪಾಕಿಸ್ತಾನದಕ್ಕಿಂತಲೂ ಹೆಚ್ಚಿನ ಭೂಮಿ ಇದೆ.
೫. ದೇಶದಲ್ಲಿನ ಅನೇಕ ಮುಸಲ್ಮಾನ ಕಟ್ಟರವಾದಿಗಳು ವಕ್ಫ್ ಮಸೂದೆಯ ವಿರುದ್ಧ ಪ್ರತಿಭಟನೆಯ ಹೆಸರಿನಲ್ಲಿ ಕೇಂದ್ರ ಸರಕಾರದ ಮೇಲೆ ಒತ್ತಡ ತರುವ ಪ್ರಯತ್ನ ಮಾಡುತ್ತಿದೆ. ಅದು ಅಲ್ಲಲ್ಲಿಯೇ ಗಲಭೆಗಳನ್ನು ಪ್ರಚೋದಿಸಲು ಪ್ರಯತ್ನ ಮಾಡುತ್ತಿದೆ.
೬. ಈ ವಕ್ಫ್ ಬೋರ್ಡ್ ಭಾರತೀಯ ಸಂವಿಧಾನದ ವಿರುದ್ಧವಾಗಿದೆ, ಆದ್ದರಿಂದ ನಾವು ಕೇಂದ್ರ ಸರಕಾರಕ್ಕೆ, ಈ ವಕ್ಫ್ ಬೋರ್ಡ್ ಸಂಪೂರ್ಣವಾಗಿ ವಿಸರ್ಜಿಸಬೇಕು ಎಂದು ಒತ್ತಾಯಿಸುತ್ತಿದ್ದೇವೆ.
೭. ಈ ಪ್ರತಿಭಟನೆಯಲ್ಲಿ ಸಂತ ಶ್ರೀ ಕಾಲಿಪುತ್ರ ಕಾಲಿಚರಣ ಮಹಾರಾಜ (ಪುಣೆ), ಹಿಂದೂ ಮಹಾಸಭೆಯ ಪ್ರದೇಶಾಧ್ಯಕ್ಷ ಜಿತೇಂದ್ರ ಸಿಂಹ ಠಾಕೂರ್, ಮಹಾಮಂಡಲೇಶ್ವರ ಶ್ರೀ ಶ್ರೀ ೧೦೮ ಭರತದಾಸ ಮಹಾರಾಜ, ಶ್ರೀ ಶ್ರೀ ೧೦೮ ಮಹಾಮಂಡಲೇಶ್ವರ ದಿನೇಶದಾಸ ಮಹಾರಾಜ, ಮಹಾಮಂಡಲೇಶ್ವರ ವಿಜಯ ರಾಮದಾಸ ಬೇಟಮಾ, ಶ್ರೀ. ಮಹಂತ ರುಕ್ಮಿಣಿ ದೇವಿ, ಮಹಂತ ರಾಜನಾಥ ಯೋಗಿ, ಗಣೇಶದಾಸ ರಾಜಗುರು, ಬಾಲ ಮುಕುಂದ ಪರಾಶರ (ಮುಖ್ಯ ಅರ್ಚಕರು ಗೋಪಾಲ ದೇವಸ್ಥಾನ), ಮಹಂತ ತುಳಸಿ ರಾಮ (ನವಗ್ರಹ ಶನಿ ದೇವಸ್ಥಾನ ಕಾನಡಿಯ), ಮಧ್ಯ ಭಾರತಿಯ ಆರ್ಯ ಸಮಾಜ ಪ್ರತಿನಿಧಿ ಸಭೆಯ ಪ್ರಮುಖ ಪ್ರಕಾಶ ಆರ್ಯ, ಉಜ್ವಲ ಸ್ವಾಮಿ, ಮಹಂತ ರಾಮ ಗೋಪಾಲ ದಾಸ, ಮಹಂತ ಕೃಷ್ಣ ದಾಸ ಸಹಿತ ಸಾವಿರಾರು ಹಿಂದುತ್ವವಾದಿಗಳು ಭಾಗವಹಿಸಿದ್ದರು.

ಸಂಪಾದಕೀಯ ನಿಲುವು

ಹಿಂದುಗಳಿಗೆ ಅಪಾಯ ಆಗುವಂತಹ ವಿಷಯ ರದ್ದು ಪಡಿಸಲು ಹಿಂದುಗಳ ಪ್ರಭಾವಿ ಸಂಘಟನೆಗಳು ಇಲ್ಲದಿರುವುದರಿಂದ ಸಂತರು ಬೀದಿಗೆ ಬರಬೇಕಾಗಿದೆ. ಇದು ಜನ್ಮ ಹಿಂದೂಗಳಿಗೆ ಲಜ್ಜಾಸ್ಪದ !