6 ಜನರಿಗೆ ಗಾಯ
ಭೋಪಾಲ (ಮಧ್ಯಪ್ರದೇಶ) – ಇಲ್ಲಿನ ಮುಸ್ಲಿಂ ಬಾಹುಳ್ಯದ ಜಹಾಂಗೀರಾಬಾದ ಪ್ರದೇಶದ ಹಳೆಯ ಗಲ್ಲಾ ಮಂಡಿಯಲ್ಲಿ ಮತಾಂಧ ಮುಸ್ಲಿಮರು ಸಿಖ್ಖರ ಮೇಲೆ ದಾಳಿ ನಡೆಸಿದ್ದಾರೆ. ಇದರಲ್ಲಿ 6 ಮಂದಿ ಗಾಯಗೊಂಡಿದ್ದಾರೆ. ಈ ವೇಳೆ ಎರಡೂ ಕಡೆಯಿಂದ ಕಲ್ಲು ತೂರಾಟ ನಡೆದಿದ್ದು, ಮುಸ್ಲಿಮರ ಕೈಯಲ್ಲಿ ತಲವಾರುಗಳು ಕಂಡುಬಂದಿವೆ. ಅವರು ತಲವಾರು, ದೊಣ್ಣೆ ಹಿಡಿದು ತಿರುಗಾಡುತ್ತಿದ್ದರು. ಅವರು ಓರ್ವ ಮಹಿಳೆಗೆ ದೊಣ್ಣೆ ಮತ್ತು ಕೋಲುಗಳಿಂದ ಬರ್ಬರವಾಗಿ ಥಳಿಸಿದ್ದಾರೆ. ಇದರ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಇರುವುದರಿಂದ ಬಿಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದೆ.
1. ಜಹಾಂಗೀರಾಬಾದ ಪೊಲೀಸ್ ಠಾಣೆಯ ಮುಖ್ಯಸ್ಥ ಆಶಿಷ ಉಪಾಧ್ಯಾಯ ಅವರು ನೀಡಿರುವ ಮಾಹಿತಿಯನುಸಾರ, 2 ದಿನಗಳ ಹಿಂದೆ ಕೆಲವು ಸಿಖ್ ಮತ್ತು ಮುಸ್ಲಿಂ ಯುವಕರ ನಡುವೆ ಜಗಳವಾಗಿತ್ತು. ಡಿಸೆಂಬರ್ 24 ರ ಬೆಳಿಗ್ಗೆ, ಇದೇ ಕಾರಣದಿಂದ ಮತಾಂಧ ಮುಸ್ಲಿಮರು ಗುಂಪುಗೂಡಿದರು ಮತ್ತು ಸಿಖ್ಖರ ಮನೆಗಳ ಮೇಲೆ ಕಲ್ಲು ತೂರಲು ಪ್ರಾರಂಭಿಸಿದರು.
2. ಪೊಲೀಸ್ ಉಪ ಆಯುಕ್ತ ಪ್ರಿಯಾಂಕಾ ಶುಕ್ಲಾ ಮಾತನಾಡಿ, 2 ದಿನಗಳ ಹಿಂದೆ ಅತಿವೇಗವಾಗಿ ಬೈಕ್ ಓಡಿಸುವ ವಿಚಾರವಾಗಿ ಜಗಳ ಆರಂಭವಾಗಿತ್ತು. ಈ ಪ್ರಕರಣದಲ್ಲಿ 5 ಜನರ ವಿರುದ್ಧ ಅಪರಾಧ ದಾಖಲಾಗಿತ್ತು. ಅವರಲ್ಲಿ ಮೂವರನ್ನು ಬಂಧಿಸಲಾಗಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಪರಾರಿಯಾಗಿರುವ ಆರೋಪಿಗಳಲ್ಲಿ ಮತ್ತೆ ವಾಗ್ವಾದ ನಡೆದಿದೆ. ಪೊಲೀಸರು ಮೊದಲೇ ಘಟನಾಸ್ಥಳದಲ್ಲಿ ಇದ್ದರು; ಆದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಕಂಡು ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದರು. ವಿಡಿಯೋದಲ್ಲಿ ಕೆಲವರು ಆಯುಧಗಳೊಂದಿಗೆ ಕಾಣಿಸುತ್ತಿದ್ದಾರೆ, ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Fanatical Mu$!ims attack some Sikhs in Bhopal (Madhya Pradesh).
6 people injured
Will the Kh@!istanis dare to oppose this ?#Violence #HindusUnderAttack pic.twitter.com/29PJDUz48X
— Sanatan Prabhat (@SanatanPrabhat) December 24, 2024
ಸಂಪಾದಕೀಯ ನಿಲುವುಖಲಿಸ್ತಾನಿವಾದಿಗಳು ಇದರ ಬಗ್ಗೆ ಏನಾದರೂ ಹೇಳುವರೇ? |