ಅಯೋಧ್ಯೆಯಲ್ಲಿನ ಸಮಾರಂಭದ ನಂತರ ಉತ್ತರಪ್ರದೇಶ ಸಾರಿಗೆ ಇಲಾಖೆಯ ಬಸ್ಸುಗಳಲ್ಲಿ ಮತ್ತೊಮ್ಮೆ ರಾಮಧೂನ ಮೊಳಗಲಿದೆ !

ಪ್ರಯಾಗರಾಜ ಮಹಾಕಂಭಪರ್ವ ೨೦೨೫

ಲಕ್ಷ್ಮಣಪುರಿ (ಉತ್ತರಪ್ರದೇಶ) – ಅಯೋಧ್ಯೆಯಲ್ಲಿನ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನಂತರ ಉತ್ತರಪ್ರದೇಶದ ಸಾರಿಗೆ ಬಸ್ಸಿನಲ್ಲಿ ಮತ್ತೊಮ್ಮೆ ರಾಮಧೂನ ಮೊಳಗಲಿದೆ ಎಂದು ಉತ್ತರಪ್ರದೇಶದ ಸಾರಿಗೆ ಸಚಿವ ದಯಾಶಂಕರ ಸಿಂಹ ಇವರು ಮಾಹಿತಿ ನೀಡಿದರು. ಪ್ರಯಾಗರಾಜನ ಮಹಾ ಕುಂಭಮೇಳದ ಪ್ರಯುಕ್ತ ಉತ್ತರಪ್ರದೇಶ ಸಾರಿಗೆ ಇಲಾಖೆಯು ಇತ್ತೀಚಿಗೆ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದೆ. ಇದರ ಜೊತೆಗೆ ಈ ಬಸ್ಸುಗಳಲ್ಲಿ ಭಕ್ತಿ ಸಂಗೀತ ಕೂಡ ಹಾಕಲಾಗುವುದು. ಶ್ರೀರಾಮ ಲಲ್ಲನ ಪ್ರತಿಷ್ಠಾಪನೆ ಸಮಾರಂಭ ಜನವರಿ ೨೨, ೨೦೨೪ ರಲ್ಲಿ ನಡೆದಿತ್ತು, ಹಾಗೂ ಪ್ರಯಾಗರಾಜದಲ್ಲಿ ಮಹಾಕಂಭಮೇಳ ಜನವರಿ ೨೦೨೫ ರಲ್ಲಿ ನಡೆಯುವುದು.