ಕ್ರೈಸ್ತನೆಂದು ಹೇಳಿ ಹಿಂದೂ ಯುವತಿಯನ್ನು ವಿವಾಹವಾಗಿ ಮೋಸ ಮಾಡುವ ಮತಾಂಧರ ವಿರುದ್ಧ ಅಪರಾಧ ದಾಖಲು !

ಮತಾಂಧರ ಈ ಕೃತ್ಯದ ಬಗ್ಗೆ ಕ್ರೈಸ್ತ ಸಂಘಟನೆಗಳು ಏಕೆ ಮಾತನಾಡುತ್ತಿಲ್ಲ ?

ಗಾಂಧಿನಗರ (ಗುಜರಾತ) – ವಡೊದರಾದಲ್ಲಿನ ತರಸಾಲಿ ಪ್ರದೇಶದಲ್ಲಿ ವಾಸಿಸುವ ೨೫ ವರ್ಷದ ಸಮೀರ ಅಬ್ದುಲ್‍ಭಾಯಿ ಕುರೇಶಿಯು ಇನ್‍ಸ್ಟಾಗ್ರಾಮ್‍ನಿಂದ ತನ್ನ ಹೆಸರನ್ನು ‘ಸಾಮ್ ಮಾರ್ಟಿನ್’ ಎಂದು ಹೇಳಿ ಓರ್ವ ಹಿಂದೂ ಯುವತಿಯೊಂದಿಗೆ ಸ್ನೇಹ ಬೆಳೆಸಿದನು. ನಂತರ ಪ್ರತ್ಯಕ್ಷ ಭೇಟಿಯಾಗಿ ಶಾರೀರಿಕ ಸಂಪರ್ಕವಿಡುವಂತೆ ಆಕೆಯ ಮೇಲೆ ಒತ್ತಡ ಹೇರಿದ. ಆಕೆಯ ಆಕ್ಷೆಪಾರ್ಹ ಸ್ಥಿತಿಯಲ್ಲಿನ ಛಾಯಾಚಿತ್ರಗಳನ್ನು ತೆಗೆದು ಆಕೆಗೆ ಮದುವೆಯಾಗುವಂತೆ ಮಾಡಿದನು. ಮದುವೆಯಾಗದಿದ್ದರೆ ಛಾಯಾಚಿತ್ರವನ್ನು ಸಾರ್ವಜನಿಕಗೊಳಿಸಲಾಗುವುದು ಎಂದು ಬೆದರಿಕೆಯನ್ನು ಹಾಕಿದ್ದನು. ಕುರೇಶಿಯ ನಿಜವಾದ ಹೆಸರು ತಿಳಿದ ಕೂಡಲೇ ಮಹಿಳೆಯು ಪೊಲೀಸರಲ್ಲಿ ದೂರನ್ನು ನೊಂದಾಯಿಸಿದಳು. ಪೊಲೀಸರು ಆತನ ವಿರುದ್ಧ ಮತಾಂತರವಿರೋಧಿ ಕಾಯ್ದೆಯನ್ವಯ ಅಪರಾಧವನ್ನು ದಾಖಲಿಸಿದ್ದಾರೆ. ಈ ಕಾಯ್ದೆಯ ಅಡಿಯಲ್ಲಿ ಅಪರಾಧಿ ವ್ಯಕ್ತಿಗೆ ೩ ರಿಂದ ೫ ವರ್ಷಗಳ ಸೆರೆಮನೆ ವಾಸ ಮತ್ತು ೨ ಲಕ್ಷ ರೂಪಾಯಿವರೆಗಿನ ದಂಡ ತೆತ್ತಬೇಕಾಗುತ್ತದೆ. ಒಂದುವೇಳೆ ಸಂತ್ರಸ್ಥೆಯು ಅಪ್ರಾಪ್ತೆಯಾಗಿದ್ದರೆ ಅಥವಾ ಪರಿಶಿಷ್ಟ ಜಾತಿ-ಪಂಗಡದವರಾಗಿದ್ದರೆ, ಅಪರಾಧಿ ವ್ಯಕ್ತಿಗೆ ೪ ರಿಂದ ೭ ವರ್ಷ ವರೆಗಿನ ಶಿಕ್ಷೆ ಹಾಗೂ ೩ ಲಕ್ಷದ ತನಕ ದಂಡ ತೆರಬೇಕಾಗುತ್ತದೆ. ಮತಾಂತರದ ಪ್ರಕರಣದಲ್ಲಿ ಯಾವುದಾದರು ಸಂಘಟನೆಯೊಂದಿಗೆ ಸಂಬಂಧವಿದ್ದರೆ, ಈ ಶಿಕ್ಷೆಯು ೩ ರಿಂದ ೧೦ ವರ್ಷಗಳದ್ದಾಗುವ ಸಾಧ್ಯತೆಯಿದೆ.