Kumbh Booking Fraud Alert : ಹೋಟೆಲ್, ಧರ್ಮಶಾಲೆ ಮುಂತಾದರ ಆನ್ ಲೈನ್ ಬುಕಿಂಗ್ ವಂಚನೆಯಿಂದ ತಪ್ಪಿಸಲು ಜಾಗರೂಕರಾಗಿರಿ ! – ಪೊಲೀಸರಿಂದ ಕರೆ

ಪ್ರಯಾಗರಾಜ ಮಹಾಕುಂಭಮೇಳ ೨೦೨೫

ಪ್ರಯಾಗರಾಜ – ಇಲ್ಲಿ ಜನವರಿ ೧೩ ರಿಂದ ನಡೆಯುವ ಮಹಾ ಕುಂಭಮೇಳಕ್ಕೆ ದೇಶ-ವಿದೇಶದಿಂದ ಭಕ್ತರು ಬರುತ್ತಾರೆ. ಅದಕ್ಕಾಗಿ ಹೋಟೆಲ್, ಧರ್ಮಶಾಲೆ ಅಥವಾ ಟೆಂಟ್ ಇಲ್ಲಿ ವಾಸಿಸುವುದಕ್ಕೆ ಭಕ್ತರು ಆನ್ಲೈನ್ ಬುಕಿಂಗ್ ಮಾಡುತ್ತಿದ್ದಾರೆ. ಆದರೆ ನಕಲಿ ಜಾಲತಾಣಗಳ ಮೂಲಕ ಹೋಟೆಲ್, ಧರ್ಮಶಾಲೆ ಮುಂತಾದವುಗಳ ಹೆಸರಿನಲ್ಲಿ ಬುಕಿಂಗ್ ಮಾಡಿ ಭಕ್ತರನ್ನು ವಂಚಿಸಲಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಆದ್ದರಿಂದ ಹೋಟೆಲ್, ಧರ್ಮಶಾಲೆ ಮುಂತಾದರ ಆನ್ಲೈನ ಬುಕಿಂಗ್ ಮಾಡುವಾಗ ಜಾಗೃತೆ ವಹಿಸಲು ಪೊಲೀಸರು ಕರೆ ನೀಡಿದ್ದಾರೆ. ಪೊಲೀಸರು ೫೪ ನಕಲಿ ಜಾಲತಾಣಗಳ ವಿರುದ್ಧ ಕ್ರಮಕೈಗೊಂಡು ಅವುಗಳನ್ನು ಮುಚ್ಚಿದ್ದಾರೆ.