ನಿಜವಾದ ದೇಶಭಕ್ತ ಜನರು ಹೇಮಂತ್ ಕರಕರೆಯವರನ್ನು ದೇಶಭಕ್ತರೆಂದು ಒಪ್ಪಿಕೊಳ್ಳುವುದಿಲ್ಲ ! – ಶಾಸಕಿ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್

ಭೂಪಾಳ (ಮಧ್ಯಪ್ರದೇಶ) – ಮಹಾರಾಷ್ಟ್ರ ಉಗ್ರನಿಗ್ರಹ ದಳದ ಮಾಜಿ ಮುಖ್ಯಸ್ಥ ಹೇಮಂತ ಕರಕರೆಯವರು ದೇಶಭಕ್ತರೆಂದು ಕೆಲವರು ತಿಳಿದುಕೊಂಡಿದ್ದಾರೆ; ಆದರೆ ನಿಜವಾದ ದೇಶಭಕ್ತ ಜನರು ಅವರನ್ನು ‘ದೇಶಭಕ್ತ’ ಎಂದು ಒಪ್ಪಿಕೊಳ್ಳುವುದಿಲ್ಲ. ದೇಶಕ್ಕಾಗಿ ನಾನು ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ನನ್ನಂತಹ ಸ್ವಯಂಸೇವಕಿಗೆ ಕರಕರೆಯು ತೊಂದರೆ ನೀಡಿದ್ದರು, ಎಂದು ಬಿಜೆಪಿಯ ಶಾಸಕಿ ಸಾಧ್ವಿ ಪ್ರಜ್ಞಾಸಿಂಗ್ ಅವರು ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆಯ ಒಂದು ವಿಡಿಯೋ ಸಾಮಾಜಿಕ ಪ್ರಸಾರ ಮಾಧ್ಯಮದಲ್ಲಿ ಪ್ರಸಾರವಾಗಿದೆ.

೧. ಇದರಲ್ಲಿ ಸಾಧ್ವಿ ಪ್ರಜ್ಞಾಸಿಂಗ್ ಆವರು, ದೇಶದಲ್ಲಿ ೧೯೭೫ ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು. ಅದೇರೀತಿಯ ಮತ್ತೊಂದು ತುರ್ತು ಪರಿಸ್ಥಿತಿ ೨೦೦೮ ರಲ್ಲಿ ಹೇರಲಾಯಿತು. ನನ್ನನ್ನು ಮಾಲೆಗಾವ ಪ್ರಕರಣದಲ್ಲಿ ಸಿಲುಕಿಸಲಾಯಿತು.

೨. ನನಗೆ ಶಿಕ್ಷಣ ನೀಡಿದ ಆಚಾರ್ಯರ ಕೈ ಬೆರಳುಗಳನ್ನು ಹೇಮಂತ ಕರಕರೆಯವರು ಮುರಿದಿದ್ದರು, ಎಂದೂ ಸಹ ಸಾಧ್ವಿ ಪ್ರಜ್ಞಾಸಿಂಗ ಠಾಕೂರ್ ಆರೋಪಿಸಿದ್ದಾರೆ.

. ‘ನನ್ನ ಶಾಪದಿಂದಲೇ ಹೇಮಂತ ಕರಕರೆಯವರು ಸಾವನ್ನಪ್ಪಿದರು’, ಎಂದು ಕೆಲವು ವರ್ಷಗಳ ಹಿಂದೆ ಸಾಧ್ವಿ ಪ್ರಜ್ಞಾಸಿಂಗ್ ಹೇಳಿಕೆಯನ್ನು ನೀಡಿದ್ದರು.